Asianet Suvarna News Asianet Suvarna News

ಮೈಸೂರಲ್ಲಿ ಅರಮನೆ ಬಳಿ 144 ಸೆಕ್ಷನ್ : ಟೈಟ್ ಸೆಕ್ಯೂರಿಟಿ

ಮೈಸೂರು ಅರಮನೆ ಬಳಿಯಲ್ಲಿ ಫುಲ್ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಸಾವಿರಾರು ಪೊಲೀಸರಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ

Mysuru Dasara 2020 Tight Security Around Palace snr
Author
Bengaluru, First Published Oct 26, 2020, 7:41 AM IST

ಮೈಸೂರು  (ಅ.26) : ಮೈಸೂರಿನಲ್ಲಿ ಈ ಬಾರಿ ಅದ್ದುರಿ ದಸರಾ ಉತ್ಸವಕ್ಕೆ ಬ್ರೇಕ್ ಹಾಕಲಾಗಿದ್ದು ಸರಳವಾಗಿ ಆಚರನೆ ಮಾಡಲಾಗುತ್ತಿದೆ. ಇಂದು ದಸರಾ ಉತ್ಸವದ ಕೊನೆಯ ದಿನವಾಗಿದೆ. 

ಅರಮನೆಯಲ್ಲಿ ಸರಳ ದಸರಾ ದಶಮಿ ಆಚರಣೆಗಳು‌ ಆರಂಭವಾಗಿದ್ದು, ಇಂದು ಉತ್ತರ ಪೂಜೆ ನೆರವೇರಿಸಿ ಯದುವೀರ್ ಒಡೆಯರ್ ವಿಜಯಿ ಯಾತ್ರೆ ಹೊರಡಲಿದ್ದಾರೆ. 

ಬೆಳಿಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆಬಾಗಿಲಿಗೆ ಆಗಮಿಸಲಿದ್ದು, ಬೆಳಿಗ್ಗೆ 9.45ಕ್ಕೆ ಆಯುಧಗಳಿಗೆ ಉತ್ತರಪೂಜೆ. ನಂತರ ಆನೆಬಾಗಿಲಿಗೆ ಈ ಆಯುಧಗಳು ರವಾನೆಯಾಗಲಿವೆ.  ಬೆಳಿಗ್ಗೆ 10.20ರಿಂದ 10.40ರ ಖಾಸ ಆಯುಧಗಳನ್ನ ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ. 

IPL ಅಭಿಮಾನಿಗಳಿಗೆ ಕನ್ನಡಿಗರ ತಂಡದಿಂದ ದಸರಾ ಗಿಫ್ಟ್..! .

ಭುವನೇಶ್ವರಿ ದೇವಾಲಯದಲ್ಲಿ ಮಹಾರಾಜರಿಂದ ಬನ್ನಿಪೂಜೆ ನೆರವೇರಲಿದ್ದು,  ವಿಜಯಯಾತ್ರೆ ಮುಗಿದ ತಕ್ಷಣ ಚಾಮುಂಡೇಶ್ವರಿ ಅಮ್ಮವನವರನ್ನ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗುತ್ತದೆ. ಕೊರಿನಾ ಕಾರಣಕ್ಕೆ ಈ ಬಾರಿ ವಜ್ರಮುಷ್ಠಿ ಕಾಳಗ ರದ್ದು ಮಾಡಲಾಗಿದೆ. 
 
 ಸರಳ‌ ದಸರ ಜಂಬೂಸವಾರಿಯಲ್ಲಿ ಎರಡು ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗುತ್ತಿದೆ.  ಸಿಎಂ ಯಡಿಯೂರಪ್ಪ ದಸರಾ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2.59 ರಿಂದ 3.20ರ  ಮಕರ ಲಗ್ನದಲ್ಲಿ ಸಿಎಂ ಯಡ್ಯೂರಪ್ಪರಿಂದ ನಂದಿಧ್ವಜಕ್ಕೆ ಪೂಜೆ ಮಾಡಲಿದ್ದಾರೆ. 

ಮಧ್ಯಾಹ್ನ 3.40.ರಿಂದ 4.15ರ  ಕುಂಭ ಲಗ್ನದಲ್ಲಿ ಸಿಎಂ ಬಿಎಸ್‌ವೈ ಹಾಗೂ ಯದುವೀರ್‌ರಿಂದ ಪುಷ್ಪರ್ಚನೆ ನೆರವೇರಲಿದ್ದು, ಈ ಬಾರಿ 300 ಮೀಟರ್ವರೆಗೆ   ಜಂಬೂ ಸವಾರಿ ಸಾಗಲಿದೆ. 

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, 300 ಮಂದಿ ದಸರಾ ನೋಡಲು ಸಾವಿರಕ್ಕೂ ಅಧಿಕ ಪೊಲೀಸರ ಭದ್ರತೆ ಒದಗಿಸಲಾಗಿದೆ.  ಅಂಬಾವಿಲಾಸ ಅರಮನೆ ಎದುರು ನಡೆಯಲಿರುವ ಮೆರವಣಿಗೆಗೆ  300 ಮಂದಿಗೆ ಅವಕಾಶ ನೀಡಲಾಗಿದೆ.

ಅವರಮನೆ ಆವರಣ ಸೇರಿದಂತೆ ಅರಮನೆಯ ಸುತ್ತ ಭದ್ರತೆ ಒದಗಿಸಲಾಗಿದ್ದು, ಬೆಳ್ಳಂಬೆಳಿಗ್ಗೆ ಸೆಕ್ಯುರಿಟಿ ಚೆಕ್, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಚೆಕಿಂಗ್ ಮಾಡಲಾಗುತ್ತಿದೆ.
 
ಅರಮನೆ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿ ಮಾಡಿದ್ದು, ಡಿಎಆರ್, ಸಿಎಆರ್ ಸೇರಿ ಮೈಸೂರು ನಗರದ ಪೊಲೀಸರಿಂದಲೇ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 

Follow Us:
Download App:
  • android
  • ios