ಮೈಸೂರು (ಅ.18): ಮೈಸೂರಿನಲ್ಲಿ ಅಕ್ಟೋಬರ್ 17 ರಿಂದ ದಸರಾ ಸಂಭ್ರಮ ಆರಂಭವಾಗಿದೆ. 

ಮೈಸೂರಿನ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಮಾವುತರಿಗೆ ಹಾಗೂ ಅವರ ಕುಟುಂಬಸ್ಥರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು.  
 
ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್ ಮಾವುತರಿಗೆ ಊಟ ಬಡಿಸಿದರು. ಈ ವೇಳೆ ಶಾಸಕ ಎಸ್‌ ಎ ರಾಮದಾಸ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. 

ಡಿಸಿ ನಿರ್ಧಾರಕ್ಕೆ ಅಸಮಾಧಾನ : ರೋಹಿಣಿ ಸಿಂಧೂರಿಗೆ ಸಿಎಂ ಬಿಎಸ್‌ವೈ ಸೂಚನೆ .

ಔತಣಕೂಟಕ್ಕೆ ವಿವಿಧ ರಿತಿಯ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಕ್ಟೋಬರ್ 17 ರಂದು ಮೈಸೂರಿನಲ್ಲಿ ಆರಂಭಗೊಂಡಿರುವ ದಸರಾ ಮಹೋತ್ಸವ 27 ರಂದು ಕೊನೆಗೊಳ್ಳಲಿದೆ.