ಮೈಸೂರು ಜಿಲ್ಲಾಧಿಕಾರಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದ್ದು ಈ ಬಗ್ಗೆ ಸಿಎಂ ಸೂಚನೆಯೊಂದನ್ನು ನೀಡಿದ್ದಾರೆ. 

ಮೈಸೂರು (ಅ.18): ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ತೆರವುಗೊಳಿಸಲಾಗಿದೆ. 

ಕೊರೋನಾ ನಿಯಂತ್ರಣಗೊಲಿಸಲು ಜನ ಸಂದಣಿ ಹೆಚ್ಚು ಸೇರದಂತೆ ನೋಡಿಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರವಾಸಿ ತಾಣಗಳಿಗೆ ಸೀಮಿತ ಅವಧಿಗೆ ಅನ್ವಯವಾಗುವಂತೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದರು. 

ಆಂಧ್ರದ ಹೆಣ್ಣಿಗಾಗಿ ದಲಿತ ಅಧಿಕಾರಿ ಎತ್ತಂಗಡಿ : ರೋಹಿಣಿ ವಿರುದ್ಧ ಸಾರಾ ಆಕ್ರೋಶ

ಆದರೆ ಹೊಟೇಲ್‌ ಮಾಲಿಕರು, ಪ್ರವಾಸಿ ವಾಹನ ಚಾಲಕರು ಮತ್ತು ಮಾಲಿಕರ ಸಂಘ, ಮೈಸೂರು ಟ್ರಾವೆಲ್ಸ್‌ ಸೋಸಿಯೇಷನ್‌ ಸೇರಿದಂತೆ ವಿವಿಧ ಸಂಘಟನೆಗಳ ಮನವಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಬಂಧ ತೆರವುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.

 ನಗರದ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟಮತ್ತು ನಂಜನಗೂಡು ದೇವಾಲಯದ ಜೊತೆಗೆ ಕೆಆರ್‌ಎಸ್‌ ಮತ್ತು ರಂಗನತಿಟ್ಟು ಪ್ರವಾಸಿ ತಾಣಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈಗ ಸಿಎಂ ಸೂಚನೆ ಮೇರೆಗೆ ನಿರ್ಬಂಧ ತೆರವುಗೊಳಿಸಲಾಗಿದೆ.