Mysuru : ಕೋರ್ಟ್ ಎದುರಿನ ಕೊಳಚೆ ತೆರವು
’ಕೋರ್ಚ್ ಎದುರೇ ಕೊಳಚೆ ನೀರಿನ ಹೊಳೆ’ ಎಂಬ ಶೀರ್ಷಿಕೆಯಲ್ಲಿ ಶನಿವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮೈಸೂರಿನ ಪ್ರಥಮ ಪ್ರಜೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮೈಸೂರು (ನ.20):’ಕೋರ್ಚ್ ಎದುರೇ ಕೊಳಚೆ ನೀರಿನ ಹೊಳೆ’ ಎಂಬ ಶೀರ್ಷಿಕೆಯಲ್ಲಿ ಶನಿವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮೈಸೂರಿನ ಪ್ರಥಮ ಪ್ರಜೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನ (Mysuru ) ಮಳಲವಾಡಿಯ ನೂತನ ನ್ಯಾಯಾಲಯದ ಪ್ರವೇಶದ್ವಾರದ ಬಳಿ ಇರುವ ಚರಂಡಿಯಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿರುವ ವಿಚಾರವಾಗಿ ಶನಿವಾರ ವರದಿಯಾಗಿತ್ತು. ವರದಿ ಪ್ರಕಟವಾಗುತ್ತಿದ್ದಂತೆಯೇ ಮೈಸೂರಿನ ಪ್ರಥಮ ಪ್ರಜೆ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮೇಯರ್ (Mayor) ಅವರ ನಿರ್ದೇಶನದ ಮೇರೆಗೆ ಶನಿವಾರ ಬೆಳಗ್ಗೆಯೇ ವಾಹನಗಳ ಸಮೇತ ನ್ಯಾಯಲಯದ ಬಳಿ ಆಗಮಿಸಿದ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿW ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದರು.
ನಂತರ ಸ್ಥಳಕ್ಕೆ ಆಗಮಿಸಿದ ಮೇಯರ್ ಶಿವಕುಮಾರ್ ಅವರು ಎರಡು ದಿನದೊಳಗೆ ಎಲ್ಲ ಸಮಸ್ಯೆಯನ್ನೂ ಬಗೆಹರಿಸುವುದಾಗಿ ಭರವಸೆ ನೀಡಿದರು. ಹಾಗೂ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುವಂತೆ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
ಮೈಸೂರು (ನ.20): ನಗರದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ರಸ್ತೆಗಳು ತುಂಬಾ ಹದಗೆಡುತ್ತಿದ್ದು, ನಗರಪಾಲಿಕೆಯು ರಸ್ತೆಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಪಿಐನ ನಗರ ಸಮಿತಿ ಕಾರ್ಯದರ್ಶಿ ಜಿ. ರಾಜೇಂದ್ರ ದೂರಿದ್ದಾರೆ.
ರಸ್ತೆ ನಿರ್ಮಾಣದ ಕೆಲಸಗಳು ವೈಜ್ಞಾನಿಕವಾಗಿ ಆಗುತ್ತಿಲ್ಲ ಎನ್ನುವುದು ತಿಳಿಯುತ್ತದೆ. ಗುಂಡಿ ಬಿದ್ದಿರುವ ರಸ್ತೆಗಳನ್ನು ನೋಡಿದರೆ ಡಾಂಬರು ಮತ್ತು ರಸ್ತೆ ಮೇಲ್ಮೈ ನಡುವೆ ಅಂತರವೇ ಇರುವುದಿಲ್ಲ, ಡಾಂಬರು ಹಾಕುವ ಮೊದಲು ಕನಿಷ್ಠ ಮಟ್ಟದ ಆಳದಿಂದ ಜಲ್ಲಿ ಕಲ್ಲು ಮುಂತಾದವುಗಳನ್ನು ಹಾಕುತ್ತಾ ಬರಬೇಕು. ಹೀಗೆ ನಿರ್ಮಿಸಿದರೆ ಮಾತ್ರ ರಸ್ತೆಗಳು ಬಹುಕಾಲ ಉಪಯೋಗಕ್ಕೆ ಬರುವುದು ಮತ್ತು ಉತ್ತಮ ಸ್ಥತಿಯಲ್ಲಿ ಇರುತ್ತವೆಂದು ತಂತ್ರಜ್ಞರು ಹೇಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಗುಂಡಿ ಬಿದ್ದ ರಸ್ತೆಗಳನ್ನು ರಿಪೇರಿ ಮಾಡುವಾಗಲೂ ಇನ್ನೊಂದಿಷ್ಟುಆಳ ಮಾಡಿ ತಳದಿಂದ ತುಂಬಿಸಿ ಬರುವ ಬದಲು ಕೇವಲ ಗುಂಡಿ ಕಾಣಿಸಿಕೊಳ್ಳುವ ಜಾಗವನ್ನು ತುಂಬಿಸುವ ಕೆಲಸವಾಗುತ್ತಿದೆ. ಇದರಿಂದ ಪದೇ ಪದೇ ರಸ್ತೆ ಹದಗೆಡುತ್ತತ್ತಿದೆ. ರಸ್ತೆ ನಿರ್ಮಾಣ ದುರಸ್ತಿ ಕೈಗೊಳ್ಳುವವರನ್ನು ಹೊಣೆಗಾರಿಕೆ ಮಾಡದಿರುವುದೇ ಈ ರೀತಿಯ ಬೇಜವಾಬ್ದಾರಿ ಕೆಲಸಗಳಲ್ಲಿ ಉತ್ತೇಜನ ನೀಡಿದಂತಾಗುತ್ತದೆ.
ನಗರದಲ್ಲಿ ಹದಗೆಟ್ಟರಸ್ತೆಗಳನ್ನು ಶೀಘ್ರವಾಗಿ ಸುಗಮ ಸಂಚಾರಕ್ಕಾಗಿ ಒದಗಿಸುವಂತೆ ನಗರಪಾಲಿಕೆಯನ್ನು ಆಗ್ರಹಿಸುತ್ತದೆ. ವೈಜ್ಞಾನಿಕವಾಗಿ ರಸ್ತೆ ದುರಸ್ತಿ ಮತ್ತು ನಿರ್ಮಾಣವನ್ನು ಕೈಗೆತ್ತಿಕೊಳ್ಳುವ ಮೂಲಕ ಜನ ಸಾಮಾನ್ಯರು ಮತ್ತು ವಾಹನ ಸವಾರರು ನೀಡುವ ಅಪಾರ ತೆರಿಗೆ ಹಣದ ಸದ್ಬಳಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಪಾಯಕ್ಕೆ ಎಡೆ ಮಾಡುತ್ತಿರುವ ರಸ್ತೆಗಳು
ಮೈಸೂರು : ನಗರದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ರಸ್ತೆಗಳು ತುಂಬಾ ಹದಗೆಡುತ್ತಿದ್ದು, ನಗರಪಾಲಿಕೆಯು ರಸ್ತೆಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಪಿಐನ ನಗರ ಸಮಿತಿ ಕಾರ್ಯದರ್ಶಿ ಜಿ. ರಾಜೇಂದ್ರ ದೂರಿದ್ದಾರೆ.
ರಸ್ತೆ ನಿರ್ಮಾಣದ ಕೆಲಸಗಳು ವೈಜ್ಞಾನಿಕವಾಗಿ ಆಗುತ್ತಿಲ್ಲ ಎನ್ನುವುದು ತಿಳಿಯುತ್ತದೆ. ಗುಂಡಿ ಬಿದ್ದಿರುವ ರಸ್ತೆಗಳನ್ನು ನೋಡಿದರೆ ಡಾಂಬರು ಮತ್ತು ರಸ್ತೆ ಮೇಲ್ಮೈ ನಡುವೆ ಅಂತರವೇ ಇರುವುದಿಲ್ಲ, ಡಾಂಬರು ಹಾಕುವ ಮೊದಲು ಕನಿಷ್ಠ ಮಟ್ಟದ ಆಳದಿಂದ ಜಲ್ಲಿ ಕಲ್ಲು ಮುಂತಾದವುಗಳನ್ನು ಹಾಕುತ್ತಾ ಬರಬೇಕು. ಹೀಗೆ ನಿರ್ಮಿಸಿದರೆ ಮಾತ್ರ ರಸ್ತೆಗಳು ಬಹುಕಾಲ ಉಪಯೋಗಕ್ಕೆ ಬರುವುದು ಮತ್ತು ಉತ್ತಮ ಸ್ಥತಿಯಲ್ಲಿ ಇರುತ್ತವೆಂದು ತಂತ್ರಜ್ಞರು ಹೇಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಗುಂಡಿ ಬಿದ್ದ ರಸ್ತೆಗಳನ್ನು ರಿಪೇರಿ ಮಾಡುವಾಗಲೂ ಇನ್ನೊಂದಿಷ್ಟುಆಳ ಮಾಡಿ ತಳದಿಂದ ತುಂಬಿಸಿ ಬರುವ ಬದಲು ಕೇವಲ ಗುಂಡಿ ಕಾಣಿಸಿಕೊಳ್ಳುವ ಜಾಗವನ್ನು ತುಂಬಿಸುವ ಕೆಲಸವಾಗುತ್ತಿದೆ. ಇದರಿಂದ ಪದೇ ಪದೇ ರಸ್ತೆ ಹದಗೆಡುತ್ತತ್ತಿದೆ. ರಸ್ತೆ ನಿರ್ಮಾಣ ದುರಸ್ತಿ ಕೈಗೊಳ್ಳುವವರನ್ನು ಹೊಣೆಗಾರಿಕೆ ಮಾಡದಿರುವುದೇ ಈ ರೀತಿಯ ಬೇಜವಾಬ್ದಾರಿ ಕೆಲಸಗಳಲ್ಲಿ ಉತ್ತೇಜನ ನೀಡಿದಂತಾಗುತ್ತದೆ.
ನಗರದಲ್ಲಿ ಹದಗೆಟ್ಟರಸ್ತೆಗಳನ್ನು ಶೀಘ್ರವಾಗಿ ಸುಗಮ ಸಂಚಾರಕ್ಕಾಗಿ ಒದಗಿಸುವಂತೆ ನಗರಪಾಲಿಕೆಯನ್ನು ಆಗ್ರಹಿಸುತ್ತದೆ. ವೈಜ್ಞಾನಿಕವಾಗಿ ರಸ್ತೆ ದುರಸ್ತಿ ಮತ್ತು ನಿರ್ಮಾಣವನ್ನು ಕೈಗೆತ್ತಿಕೊಳ್ಳುವ ಮೂಲಕ ಜನ ಸಾಮಾನ್ಯರು ಮತ್ತು ವಾಹನ ಸವಾರ
ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ಮೈಸೂರಿನ ಮೇಯರ್ ಶಿವಕುಮಾರ್ ಅವರಿಗೆ ಕೃತಜ್ಞತೆಗಳು. ಕನ್ನಡಪ್ರಭ ಪತ್ರಿಕೆಗೆ ಅಭಿನಂದನೆಗಳು.
- ಪಿ.ಜೆ. ರಾಘವೇಂದ್ರ ನ್ಯಾಯವಾದಿ, ಮೈಸೂರು.