ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅನಧಿಕೃತವಾಗಿ ಟೋಲ್‌ ಶುಲ್ಕ ಸಂಗ್ರಹಿಸಿದರೆ ಟೋಲ್‌ಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದ ಕನ್ನಡ ಪರ ಸಂಘಟನೆಗಳು. 

ಮೈಸೂರು(ಫೆ.28): ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾ​ರಿ​ಯ ಟೋಲ್‌ ಸಂಗ್ರಹವನ್ನು ಮುಂದೂಡಲಾಗಿದೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

Scroll to load tweet…

ಈ ಸಂಬಂಧ ಸೋಮವಾರ ಅವರು ಟ್ವೀಟ್‌ ಮಾಡಿದ್ದಾರೆ. ಇದಕ್ಕೂ ಮೊದಲು, ರಾಷ್ಟ್ರೀಯ ಹೆದ್ದಾರಿ-275ರ ಬೆಂಗಳೂರು-ನಿಡಘಟ್ಟ ವಿಭಾಗದ 6 ಲೇನ್‌ ಬಳಕೆಗಾಗಿ ಟೋಲ್‌ ಶುಲ್ಕವನ್ನು ಮಂಗಳವಾರ ಬೆಳಗ್ಗೆ 8ರಿಂದ ಸಂಗ್ರಹಿಸಲಾಗುವುದು. ಕಾರು/ಜೀಪು, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ .135, ಅದೇ ದಿನ ದ್ವಿಮುಖ ಸಂಚಾರಕ್ಕೆ .205, ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್‌ ಶುಲ್ಕ .4525 ನಿಗದಿ ಪಡಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. 

ಇದಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅನಧಿಕೃತವಾಗಿ ಟೋಲ್‌ ಶುಲ್ಕ ಸಂಗ್ರಹಿಸಿದರೆ ಟೋಲ್‌ಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದವು.