ಸಹಕಾರ ನೀಡುವಂತೆ ಕೋರಿ ಜೆಡಿಎಸ್ ಮುಖಂಡರ ಭೇಟಿಯಾದ ಬಿಜೆಪಿ ಮುಖಂಡರು
- ಜೆಡಿಎಸ್ ಸಹಕಾರ ಕೋರಿದ ಬಿಜೆಪಿ ಮುಖಂಡರು
- ಜೆಡಿಎಸ್ ಮುಖಂಡರ ಭೇಟಿಯಾದ ಸಚಿವ ಸೋಮಶೇಖರ್ ಟೀಂ
- ಮೈಸೂರು ಮೇಯರ್ ಸ್ಥಾನಕ್ಕೆ ಸಹಕಾರ ನೀಡುವಂತೆ ಮನವಿ
ಮೈಸೂರು (ಆ.21): ಮೇಯರ್ ಚುನಾವಣೆ ಹಿನ್ನೆಲೆ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಜೆಡಿಎಸ್ ಸಹಕಾರ ಕೋರಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಜೆಡಿಎಸ್ ಅಧಿಕಾರ ಹಿಡಿದತ್ತು ಅದರೆ ಈ ಬಾರಿ ಜೆಡಿಎಸ್ ಬೆಂಬಲ ಕೋರಿ ಶಾಸಕ ಸಾರಾ ಮಹೇಶ್ ಅವರನ್ನು ಸಚಿವರ ನಿಯೋಗ ಭೇಟಿ ಮಾಡಿದೆ.
ತಡರಾತ್ರಿ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮೇಯರ್ ಸ್ಥಾನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಮೈಸೂರು : ರದ್ದಾಗಿದ್ದ ಸದಸ್ಯತ್ವ - ಆ.25 ರಂದು ಮೇಯರ್ ಚುನಾವಣೆ
ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ನಗರಾಧ್ಯಕ್ಷ ಶ್ರೀವತ್ಸ ಸಾಥ್ ನೀಡಿದ್ದಾರೆ.
ಸದ್ಯ ಸ್ಥಳೀಯವಾಗಿ ಶಾಸಕ ಸಾ.ರಾ. ಮಹೇಶ್ ಅವರನ್ನು ಭೇಟಿ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ. ಅವರೂ ಸಹ ನಮ್ಮಂತೆಯೇ ಸದಸ್ಯರ ಅಭಿಪ್ರಾಯ ಸಂಗ್ರಹಿಸಬೇಕು. ಬಳಿಕ ಅವರ ಪಕ್ಷದ ಹೈಕಮಾಂಡ್ ಬಳಿ ಚರ್ಚಿಸಬೇಕು. ಸಾ.ರಾ.ಮಹೇಶ್ ಅವರೊಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಇಲ್ಲ. ಆದ್ದರಿಂದ ಎಲ್ಲ ಪ್ರಕ್ರಿಯೆಗಳು ನಡೆಯಬೇಕು. ನಮ್ಮ ರಾಜ್ಯಾಧ್ಯಕ್ಷರು-ಜೆಡಿಎಸ್ ರಾಜ್ಯಾಧ್ಯಕ್ಷರು ಮಾತುಕತೆ ನಡೆಸಲಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಭೇಟಿ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು
ನಾವು ಮೇಯರ್ ಸ್ಥಾನ ಬಿಜೆಪಿಗೆ ಬಿಟ್ಟುಕೊಡುವಂತೆ ಕೇಳಿದ್ದೇನೆ. ಅವರು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಕೇಳಿದ್ದಾರೆ. ನಾನು 3 ಷರತ್ತು ಹಾಕಿದ್ದೇನೆ ಅವರು ಸಹ ಷರತ್ತು ಹಾಕಿದ್ದಾರೆ. ಸಾರಾ ಮಹೇಶ್ ಅವರ ಹೈಕಮಾಂಡ್ ಜೊತೆ ಮಾತನಾಡೊ ಅಭಿಪ್ರಾಯ ತಿಳಿಸಲಿದ್ದಾರೆ ಎಂದರು.