ಮೈಸೂರು(ಮಾ.07): ಬರ್ತ್‌ಡೇ ದಿನವೇ ಸ್ನೇಹಿತರಿಂದ ಬಿಜೆಪಿ ಮುಖಂಡ ಕೊಲೆಯಾಗಿದ್ದ. ಪ್ರೀತಿಸಿ ಮದುವೆಯಾಗಿದ್ದ ಆನಂದ್, ಮಕ್ಕಳಾದ ಮೇಲೆ ಬದಲಾಗಿದ್ದ. ರೌಡಿಸಂ ಬಿಟ್ಟಿದ್ದ. ಆದರೆ ಬರ್ತ್‌ಡೇ ದಿನವೇ ಕೊಲೆಯಾಗಿದ್ದಾನೆ.

ಬಿಜೆಪಿ ‌ಮುಖಂಡನ ಕೊಲೆ ಪ್ರಕರಣದ ಹಿಂದೆ ಹಣಕಾಸಿನ ವಿಷಯವಿದೆ ಎಂಬ ಸಂಶಯ ವ್ಯಕ್ತವಾಗಿದೆ. ಕೆಟ್ಟವನಾಗಿದ್ದಾಗ ಚನ್ನಾಗಿದ್ದ ಆನಂದ್, ಒಳ್ಳೆಯವನಾಗಲು ಪ್ರಯತ್ನಿಸುವಾಗ ಕೊಲೆಯಾಗಿದ್ದಾನೆ. ಸಂಭ್ರಮದಿಂದ ಕೇಕ್ ಕತ್ತರಿಸಿದ್ದ ಆನಂದ್ ಅದೇ ದಿನ ಕೊಲೆಯಾಗಿದ್ದಾನೆ. ಸ್ನೇಹಿತರು ಶಾಲು, ಹಾರ ಹಾಕಿ ಸನ್ಮಾನಿಸಿದ್ದರು.

ಬರ್ತ್ ಡೇ ದಿನವೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ

2003ರಲ್ಲಿ ಆನಂದ್ ಕುಮಾರಸ್ವಾಮಿ ಎಂಬವರನ್ನು ಕೊಲೆ ಮಾಡಿದ್ದ. 2005ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸ್ ಖುಲಾಸೆಯಾಗಿತ್ತು. ಜೈಲಿನಿಂದ ಹೊರಬಂದ ಮೇಲೆ ಪವಿತ್ರ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ. ಇಬ್ಬರು ಮಕ್ಕಳಾದ ನಂತರ ರೌಡಿ ಚಟುವಟಿಕೆ ಕಡಿಮೆ ಮಾಡಿದ್ದ.

ಕಾರ್ಪೋರೇಟರ್ ಕನಸು

ಕಾರ್ಪೋರೇಟರ್ ಆಗಬೇಕು, ದೊಡ್ಡ ಬಿಲ್ಡರ್ ಆಗಬೇಕು ಎಂಬುದು ಆನಂದ್ ಕನಸಲಾಗಿತ್ತು. ಆನಂದ್ ಸ್ನೇಹಿತರಿಂದ ಸಾಲ ಮಾಡಿ ಜಮೀನು ಖರೀದಿಸಿದ್ದ. ಆ ಜಾಗದಲ್ಲಿ ಲೇಔಟ್ ನಿರ್ಮಿಸಿ ದುಡ್ಡು ಮಾಡಬೇಕು ಅಂದುಕೊಂಡಿದ್ದ. ಸಾಲ ಕೊಟ್ಟು ತೆಗೆದುಕೊಳ್ಳುವ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.