ಮೈಸೂರು (ಅ.12): ದೊಡ್ಡಬಳ್ಳಾಪುರ ಮಾರ್ಗದಲ್ಲಿ ಜೋಡಿ ರೈಲು ಮಾರ್ಗ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು - ಜೈಪುರ ರೈಲು ಮಾರ್ಗವನ್ನು ಬದಲಿಸಲಾಗಿದೆ. 

ಈ ರೈಲು ಅಕ್ಟೋಬರ್ 15 ರಂದು ಮೈಸೂರಿನಿಂದ ಹೊರಟು ಕೆಎಸ್‌ಆರ್ ಬೆಂಗಳೂರು, ಅರಸೀಕೆರೆ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ, ಗುಂಟಕಲ್ ಮಾರ್ಗವಾಗಿ ತೆರಳಲಿದೆ. 

ಬೆಂಗಳೂರು ಕಮಟೋನ್ಮೆಂಟ್ ಹಿಂದೂಪುರ ಮತ್ತು ಅನಂತಪುರದಲ್ಲಿ ನಿಲುಗಡೆ ಇರುತ್ತದೆ. 

ಬೆಂಗಳೂರಿನ 3ನೇ ಬೃಹತ್‌ ರೈಲು ನಿಲ್ದಾಣ ಸಿದ್ಧ

ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ರೀತಿಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ರೈಲು, ರಸ್ತೆ ಸಾರಿಗೆ ಸಂಪೂರ್ಣ ಸ್ಥಗಿತವಾಗಿತ್ತು. ಇದೀಗ ನಿಧಾನವಾಗಿ  ಚೇತರಿಸಿಕೊಳ್ಳುತ್ತಿದ್ದು, ಒಂದೊಂದೇ ಮಾರ್ಗದಲ್ಲಿ ಸಂಚಾರ ಪ್ರಕ್ರಿಯೆ ಆರಂಭವಾಗಿದೆ.