Mandya: ಮೈಷುಗರ್‌ ಬಾಯ್ಲರ್‌ಗೆ ಬೆಂಕಿ ಸ್ಪರ್ಶ: ಸಕ್ಕರೆ ಕಾರ್ಖಾನೆಗೆ ಸಾಂಕೇತಿಕ ಚಾಲನೆ

ಪ್ರಸಕ್ತ ಸಾಲಿನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯಾಚರಣೆಗೆ ಇಂದು ಸಾಂಕೇತಿಕ ಚಾಲನೆ ದೊರಕಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಂಪನಿಯ ಬಾಯ್ಲರ್‌ಗೆ ಬೆಂಕಿ ಹಾಕಲಾಗುತ್ತಿದ್ದು, ಮುಂದಿನ ಒಂದು ವಾರ ಅಥವಾ ಹದಿನೈದು ದಿನಗಳೊಳಗೆ ಕಬ್ಬು ಅರೆಯುವಿಕೆ ಕಾರ್ಯಾಚರಣೆ ವಿದ್ಯುಕ್ತವಾಗಿ ಆರಂಭವಾಗಲಿದೆ. 

mysore sugar factory my sugar reopened in mandya district gvd

ಮಂಡ್ಯ ಮಂಜುನಾಥ

ಮಂಡ್ಯ (ಜೂ.16): ಪ್ರಸಕ್ತ ಸಾಲಿನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯಾಚರಣೆಗೆ ಇಂದು ಸಾಂಕೇತಿಕ ಚಾಲನೆ ದೊರಕಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಂಪನಿಯ ಬಾಯ್ಲರ್‌ಗೆ ಬೆಂಕಿ ಹಾಕಲಾಗುತ್ತಿದ್ದು, ಮುಂದಿನ ಒಂದು ವಾರ ಅಥವಾ ಹದಿನೈದು ದಿನಗಳೊಳಗೆ ಕಬ್ಬು ಅರೆಯುವಿಕೆ ಕಾರ್ಯಾಚರಣೆ ವಿದ್ಯುಕ್ತವಾಗಿ ಆರಂಭವಾಗಲಿದೆ. ಗುರುವಾರ (ಜೂ.15)ದಂದೇ ಮೈಷುಗರ್‌ ಬಾಯ್ಲರ್‌ಗೆ ಬೆಂಕಿ ಹಾಕುವ ಕಾರ್ಯಕ್ರಮ ನಿಗದಿಯಾಗಿತ್ತು. ಸಚಿವ ಸಂಪುಟ ಸಭೆ ಕರೆದಿದ್ದರಿಂದ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಂಡಿತ್ತು. 

ಹಾಗಾಗಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಅವರು ಬಾಯ್ಲರ್‌ಗೆ ಪೂಜೆ ಸಲ್ಲಿಸಿ ಬೆಂಕಿ ಹಾಕಲಿದ್ದಾರೆ. ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಜಿಲ್ಲೆಯ ಎಲ್ಲಾ ಶಾಸಕರು, ಕಂಪನಿಯ ಆಡಳಿತ ಮಂಡಳಿ ಅಧಿಕಾರಿಗಳು, ರೈತ ಮುಖಂಡರು ಹಾಜರಿರಲಿದ್ದಾರೆ. ಪ್ರತಿ ವರ್ಷ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ಮೈಷುಗರ್‌ ಕಾರ್ಖಾನೆ ಕಬ್ಬು ನುರಿಸುವ ಕೆಲಸಕ್ಕೆ ಚಾಲನೆ ದೊರೆಯುತ್ತಿತ್ತು. ಈ ವರ್ಷ ಜೂನ್‌ ತಿಂಗಳಲ್ಲೇ ಕಬ್ಬು ಅರೆಯುವಿಕೆಗೆ ಚಾಲನೆ ಸಿಗುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಸರ್ಕಾರವೂ ಸಕಾಲದಲ್ಲಿ ಹಣ ಬಿಡುಗಡೆ ಮಾಡಿರುವುದರಿಂದ ಕಾರ್ಖಾನೆ ಕಬ್ಬು ಅರೆಯುವಿಕೆ ಹೇಗೆ ನಡೆಯಲಿದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಬೇಡಿಕೆ ಕಳೆ​ದು​ಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದ​ಲಾದ ನಿಯ​ಮ​ದಿಂದಾಗಿ ಸೀಟು ಕೇಳು​ವ​ವರೇ ಇಲ್ಲ!

5.03 ಲಕ್ಷ ಟನ್‌ ಕಬ್ಬು ಒಪ್ಪಿಗೆ: ಮೈಸೂರು ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 5.03 ಲಕ್ಷ ಟನ್‌ ಕಬ್ಬು ಒಪ್ಪಿಗೆ ಮಾಡಿಕೊಂಡಿದೆ. ಈ ಬಾರಿ ಕಬ್ಬಿಗೆ ಕೊರತೆ ಎದುರಾಗುವ ಸಾಧ್ಯತೆಗಳೂ ಇವೆ. ನೀರಿನ ಅಭಾವದಿಂದ ಕಬ್ಬು ಗದ್ದೆಯಲ್ಲೇ ಒಣಗುತ್ತಿತ್ತು. ರೈತರ ಒತ್ತಡಕ್ಕೆ ಮಣಿದು ರಾಜ್ಯಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸುತ್ತಿದೆ. ಇನ್ನೂ ಕಬ್ಬು ಬೆಳೆಗೆ ಎರಡು-ಮೂರು ಕಟ್ಟು ನೀರಿನ ಅವಶ್ಯಕತೆ ಇದೆ. ಕಬ್ಬಿಗೆ ಮುಗಿಬಿದ್ದಿರುವ ಖಾಸಗಿ ಕಾರ್ಖಾನೆಗಳು: ಮೈಷುಗರ್‌ ವ್ಯಾಪ್ತಿಯ ಕಬ್ಬಿನ ಮೇಲೆ ಹಿಂದಿನಿಂದಲೂ ಖಾಸಗಿ ಕಾರ್ಖಾನೆಗಳು ಹದ್ದಿನ ಕಣ್ಣಿಟ್ಟಿವೆ. ಜೂನ್‌ ಅಥವಾ ಜುಲೈ ತಿಂಗಳಲ್ಲೇ ಕಬ್ಬು ಅರೆಯುವಿಕೆ ಆರಂಭಿಸುವ ಖಾಸಗಿ ಕಾರ್ಖಾನೆಗಳು ಮೈಷುಗರ್‌ ವ್ಯಾಪ್ತಿಯ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಎಫ್‌ಆರ್‌ಪಿ ದರಕ್ಕೆ ಕಬ್ಬನ್ನು ಕೊಂಡೊಯ್ಯುತ್ತಿವೆ. ಮೈಷುಗರ್‌ ವ್ಯಾಪ್ತಿಯ ಕಬ್ಬು ಕೈಬಿಟ್ಟು ಹೋದರೆ ಕಾರ್ಖಾನೆ ನಡೆಸುವುದು ಖಾಸಗಿಯವರಿಗೂ ಕಷ್ಟವಾಗಲಿದೆ. ಇದೇ ಕಾರಣದಿಂದ ಸುಮಾರು ಎರಡು ದಶಕಗಳಿಂದ ಮೈಷುಗರ್‌ ಕಾರ್ಖಾನೆ ಸಮರ್ಥವಾಗಿ ಕಬ್ಬು ನುರಿಸದಂತೆ ತಡೆಯುವಲ್ಲಿ ಖಾಸಗಿ ಕಾರ್ಖಾನೆಯವರ ಪಾತ್ರವೂ ಮಹತ್ವದ್ದಾಗಿದೆ ಎಂದು ರೈತ ಮುಖಂಡರು ಹೇಳುವ ಮಾತಾಗಿದೆ.

300 ರು. ಹೆಚ್ಚು ಹಣ ಕೊಡಲಿ: ಮೈಷುಗರ್‌ ವ್ಯಾಪ್ತಿಯ ರೈತರು ಖಾಸಗಿ ಕಾರ್ಖಾನೆಯವರಿಗೆ ಕಬ್ಬನ್ನು ಕೊಡುವುದೇ ಆದಲ್ಲಿ ಎಫ್‌ಆರ್‌ಪಿ ದರದ ಮೇಲೆ 300 ರು. ಹೆಚ್ಚು ಹಣಕ್ಕೆ ಬೇಡಿಕೆ ಇಡಬೇಕು. ಏಕೆಂದರೆ, ಸಕ್ಕರೆ ಮತ್ತು ಮೊಲಾಸಸ್‌ ದರ ಈಗ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಪ್ರತಿ ಕೆಜಿ ಸಕ್ಕರೆಗೆ 31 ರು. ನಿಗದಿಪಡಿಸಿದ್ದರೆ ಖಾಸಗಿ ಕಾರ್ಖಾನೆಯವರು ಪ್ರತಿ ಕೆಜಿ ಸಕ್ಕರೆಯನ್ನು 34 ರಿಂದ 35 ರು.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟುನಷ್ಟವಾಗುತ್ತಿದೆ. ಪ್ರತಿ ಕ್ವಿಂಟಾಲ್‌ ಸಕ್ಕರೆ ಬೆಲೆ 200 ರಿಂದ 250 ರು. ಹೆಚ್ಚಳವಾಗಿರುವುದರಿಂದ ಎಫ್‌ಆರ್‌ಪಿ ದರದ ಮೇಲೆ 300 ರು. ಹೆಚ್ಚು ಹಣ ನೀಡುವಂತಹ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ. ಇಲ್ಲದಿದ್ದರೆ ಮೈಷುಗರ್‌ ಕಾರ್ಖಾನೆ ಆರಂಭವಾಗುವವರೆಗೆ ಕಾದುನೋಡಿ. ಈಗ ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ ಕಬ್ಬು ಬೆಳೆ ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಖಾಸಗಿಯವರಿಗೆ ಕಬ್ಬು ಕೊಟ್ಟು ನಷ್ಟಕ್ಕೆ ಗುರಿಯಾಗದಂತೆ ಮೈಷುಗರ್‌ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣ ರೈತರಲ್ಲಿ ಮನವಿ ಮಾಡಿದ್ದಾರೆ.

150 ರಿಂದ 170 ತಂಡ ಅವಶ್ಯ: ದಿನಕ್ಕೆ 2500 ರಿಂದ 3000 ಟನ್‌ ಕಬ್ಬು ಕಟಾವು ಮಾಡುವ ಜನರನ್ನು ಹೊಂದಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗಾಗಿ ಕಳೆದ ವರ್ಷ ಕಬ್ಬು ಕಟಾವು ಮಾಡಲು ನೀಡಿದ್ದ ಗ್ಯಾಂಗ್‌ಮನ್‌ಗಳನ್ನು ಬದಲಾಯಿಸಲಾಗುತ್ತಿದೆ. ಸ್ಥಳೀಯವಾಗಿ 60 ರಿಂದ 70 ತಂಡ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ 50 ತಂಡಗಳನ್ನು ಕರೆಸಲು ನಿರ್ಧರಿಸಲಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ ಪಾಟೀಲ್‌ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು. ಸ್ಥಳೀಯ ತಂಡಕ್ಕೆ ತಲಾ 1 ಲಕ್ಷ ರು. ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ ಬರುವ ತಂಡಗಳಿಗೆ ತಲಾ 2.50 ಲಕ್ಷ ರು. ಹಣವನ್ನು ನೀಡಲು ತೀರ್ಮಾನಿಸಲಾಗಿದೆ. ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡಲು ನೀಡಿದ್ದ ಹಣದಲ್ಲಿ 72 ಲಕ್ಷ ರು. ಬಾಕಿ ಇದೆ. ನಾಲ್ಕೈದು ವರ್ಷದ ಹಿಂದೆ ಕೊಟ್ಟಿದ್ದ ಹಣದಲ್ಲಿ 30 ಲಕ್ಷ ರು. ಬಾಕಿ ವಸೂಲಿಯಾಗಬೇಕಿದೆ. ಕಂಪನಿಯವರು ಆ ಗ್ಯಾಂಗ್‌ಮನ್‌ ಸಂಪರ್ಕಿಸಿದ್ದು ಅವರು ಹಣವನ್ನು ವಾಪಸ್‌ ತಂದುಕೊಡುವುದಾಗಿ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದರಲ್ಲಿ ತಪ್ಪೇನಿಲ್ಲ: ಸಚಿವ ಚಲುವರಾಯಸ್ವಾಮಿ

ಕಳೆದ ವರ್ಷ ಕಬ್ಬು ಅರೆಯುವಲ್ಲಿ ವಿಫಲ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುಣೆಯ ಆರ್‌.ಬಿ.ಟೆಕ್ನೋಕ್ರೇಟ್ಸ್‌ ಅಂಡ್‌ ರೀಕ್ಲೈಮ​ರ್‍ಸ್ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಹೈದರಾಬಾದ್‌ನ ಎಸ್ಸೆನ್ನಾರ್‌ ಪವರ್‌ಟೆಕ್‌ ಸವೀರ್‍ಸ್‌ ಸಂಸ್ಥೆಯವರು ಮೈಷುಗರ್‌ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿ ಮತ್ತು ಓವರ್‌ಹಾಲಿಂಗ್‌ ಕೆಲಸ ಮಾಡಿಸಿ ಅವರಿಗೆ ನಿರ್ವಹಣೆ ಮತ್ತು ಕಾರ್ಯಾಚರಣೆ ಜವಾಬ್ದಾರಿ ಕೊಟ್ಟು ಮೈಷುಗರ್‌ ಪುನಾರಂಭಕ್ಕೆ ಚಾಲನೆ ದೊರಕಿಸಿದ್ದರು. ಕಳೆದ ವರ್ಷ ನಿರೀಕ್ಷೆಯಂತೆ ಮೈಷುಗರ್‌ ಕಾರ್ಖಾನೆ ಕಬ್ಬನ್ನು ಅರೆಯಲಿಲ್ಲ. ಕೇವಲ 1 ಲಕ್ಷ ಟನ್‌ ಕಬ್ಬು ಅರೆಯುವುದಕ್ಕಷ್ಟೇ ಕಾರ್ಖಾನೆ ಶಕ್ತವಾಯಿತು. ಬಿಜೆಪಿ ಸರ್ಕಾರವೂ ಸಕಾಲದಲ್ಲಿ ಕಾರ್ಖಾನೆಗೆ ಹಣವನ್ನು ಬಿಡುಗಡೆ ಮಾಡದೆ ವಿಳಂಬ ನೀತಿ ಅನುಸರಿಸಿದ್ದು ಕೂಡ ಕಾರ್ಖಾನೆ ಕಾರ್ಯಾಚರಣೆಗೆ ಹಿನ್ನಡೆ ಉಂಟುಮಾಡಿತು. ಸಹ ವಿದ್ಯುತ್‌ ಘಟಕ ಚಾಲನೆಯನ್ನು ಪಡೆಯುವುದಕ್ಕೆ ಸಾಧ್ಯವಾಗಲೇ ಇಲ್ಲ.

Latest Videos
Follow Us:
Download App:
  • android
  • ios