ಮೈಸೂರು ಅರಮನೆಯಲ್ಲಿ ನಡೆಯುವ ಜೆಟ್ಟಿ ಕಾಳಗದಲ್ಲಿ ಸೆಣಸಾಡುವ ಉಸ್ತಾದ್ ತಿಲಕ್ ಜೆಟ್ಟಿ ನಿಧನರಾಗಿದ್ದಾರೆ. ವಜ್ರಮುಷ್ಠಿ ಕಾಳಗದಲ್ಲಿ ಸೆಣಸಿದ್ದ ಉಸ್ತಾದ್ ತಿಲಕ್ ಜೆಟ್ಟಿ ಕಳೆದ ಕೆಲವು ದಿನಗಳಿಂದ ಅನರೋಗ್ಯದಿಂದ ಬಳಲುತ್ತಿದ್ದರು.
ಮೈಸೂರು(ಜ.29): ಮೈಸೂರು ಅರಮನೆಯ ಉಸ್ತಾದ್ ತಿಲಕ್ ಜಟ್ಟಿ (56) ನಿಧನರಾಗಿದ್ದಾರೆ. ವಜ್ರಮುಷ್ಠಿ ಕಾಳಗದಲ್ಲಿ ಸೆಣಸಿದ್ದ ಉಸ್ತಾದ್ ತಿಲಕ್ ಜೆಟ್ಟಿ ಕಳೆದ ಕೆಲವು ದಿನಗಳಿಂದ ಅನರೋಗ್ಯದಿಂದ ಬಳಲುತ್ತಿದ್ದರು. ತಿಲಕ್ ಜೆಟ್ಟಿ ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.
ತಿಲಕ್ ಜೆಟ್ಟಿ ಒಬ್ಬ ಪುತ್ರ, ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಮೈಸೂರಿನ ನಜರ್ ಬಾದ್‌ನಲ್ಲಿರೋ ನಿಂಬಜಾದೇವಿ ದೇವಾಲಯದಲ್ಲಿ ವ್ಯವಸ್ಥಾಪಕರಾಗಿದ್ದರು. ವಿದ್ಯಾರಣ್ಯಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಗೆ ಚಾಮುಂಡಿಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಮೈಸೂರಿಗೆ ಬಂತು ಕೇರಳ ಮೆಡಿಕಲ್ ವೇಸ್ಟ್ ತುಂಬಿದ್ದ ಲಾರಿಗಳು
ಮೈಸೂರು ದಸರಾದಲ್ಲಿ ವಜ್ರ ಮುಷ್ಠಿ ಕಾಳಗ ಅತ್ಯಂತ ಜನಪ್ರಿಯ. ಈ ಜಟ್ಟಿ ಕಾಳಗವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹಲವು ವರ್ಷಗಳಿಂದ ಮೈಸೂರಿನಲ್ಲಿ ಜಟ್ಟಿ ಕಾಳಗ ಆಡುತ್ತಿರುವ ತಿಲಕ್ ಜಟ್ಟಿ ನಿಧನರಾಗಿದ್ದು, ಜಟ್ಟಿ ಕಾಳಗ ಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
