*  ಕರ್ನಾಟಕದ ಸಂಸ್ಕೃತಿ ಬಿಂಬಿಸುವ ‘ಎಕ್ಸಪೀರಿಯನ್ಸ್‌ ಬೆಂಗಳೂರು’ ಮ್ಯೂಸಿಯಂ ಸ್ಥಾಪನೆ*  21 ಎಕರೆ ಜಾಗವನ್ನು ಪರಭಾರೆ ಮಾಡುವ ಯಾವುದೇ ಉದ್ದೇಶವಿಲ್ಲ*  ಹೈಕೋರ್ಟ್‌ನಲ್ಲಿ ಇನ್ನೂ ನಡೆಯುತ್ತಿರುವ ವಿಚಾರಣೆ  

ಬೆಂಗಳೂರು(ಫೆ.16): ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯ(Mysore Lamps Factory) 21 ಎಕರೆ ಜಾಗವನ್ನು ಪರಭಾರೆ ಮಾಡುವ ಯಾವುದೇ ಉದ್ದೇಶವಿಲ್ಲ, ಬದಲಾಗಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ‘ಎಕ್ಸಪೀರಿಯನ್ಸ್‌ ಬೆಂಗಳೂರು’(Bengaluru Experience) ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ(Murugesh Nirani) ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆ ಅನುಷ್ಠಾನ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿಗಳು, ಸಾರ್ವಜನಿಕ ಗಣ್ಯರನ್ನು ಒಳಗೊಂಡ ಟ್ರಸ್ಟ್‌ ರಚಿಸಲಾಗಿದೆ. ಅಲ್ಲದೇ ಕಾರ್ಖಾನೆಯ ಜಾಗದಲ್ಲಿ ಇರುವ ಕಟ್ಟಡಗಳಲ್ಲಿ ಬೆಂಗಳೂರಿನ ಬೆಳವಣಿಗೆ ಬಗ್ಗೆ ವಿನೂತನ ಅನುಭವಗಳನ್ನು ಸಾರ್ವಜನಿಕರಿಗೆ ನೀಡಲು ವಿವಿಧ ಗ್ಯಾಲರಿಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೆ.ಟಿ. ಶ್ರೀಕಂಠೇಗೌಡ, ಸಾವಿರಾರು ಕೋಟಿ ರು. ಬೆಲೆ ಬಾಳುವ ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ಟ್ರಸ್ಟ್‌ ಮಾಡಲಾಗಿದೆ. ಮ್ಯೂಸಿಯಂ ಮಾಡುವ ಬದಲು ಉದ್ಯಾನವನ ಮಾಡಿ ಎಂದು ಸಲಹೆ ನೀಡಿದರು.

ನಿರಾಣಿ ಮಠಕ್ಕೆ ದಾನವಾಗಿ ಕೊಟ್ಟಿರುವುದನ್ನು ವಾಪಸ್ ನೀಡುವೆ, ಜಯಮೃತ್ಯುಂಜಯ ಸ್ವಾಮೀಜಿ

ಕಾರ್ಖಾನೆಯ ವಿವಾದ ಇನ್ನೂ ಹೈಕೋರ್ಟ್‌ನಲ್ಲಿ(High Court) ವಿಚಾರಣೆ ನಡೆಯುತ್ತಿದೆ. ಶೇರುದಾರರು ಇದ್ದಾರೆ, ಹೀಗಿರುವಾಗ ಸರ್ಕಾರದ ಈ ನಿರ್ಧಾರ ಸರಿಯಲ್ಲ. ಈ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಇನ್ನೂ ಕೆಲವರು ಸದಸ್ಯರು ಸಹಮತ ವ್ಯಕ್ತಪಡಿಸಿದಾಗ ಸಭಾಪತಿ ಬಸವರಾಜ ಹೊರಟ್ಟಿಪ್ರಸ್ತಾವನೆ ಸಲ್ಲಿಸಿದರೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

ದಾನ ಕೊಟ್ಟ ವಸ್ತು ವಾಪಸ್ ಕೊಡುವೆ ಎಂದ ಸ್ವಾಮೀಜಿ ಹೇಳಿಕೆಗೆ ನಿರಾಣಿ ಹೇಳಿದ್ದಿಷ್ಟು

ಮೈಸೂರು: ಸಚಿವ ಮುರುಗೇಶ್ ನಿರಾಣಿ ಹಾಗೂ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Nruthyunjaya Swamiji ) ನಡುವಿನ ಮುಸುಕಿನ ಗುದ್ದಟ ಜೋರಾಗಿದೆ.

ಸಚಿವ ಮುರುಗೇಶ್ ನಿರಾಣಿ ಅವರು ಶ್ರೀ ಪೀಠಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನ ವಾಪಸ್ ಅವರ ಮನೆಗೆ ಕಳುಹಿಸುವೆ ಎಂದ ಸ್ವಾಮೀಜಿ ಹೇಳಿಕೆಗೆ ಸಚಿವ ನಿರಾಣಿ ಪ್ರತಿಕ್ರಿಯೆ ಕೊಟ್ಟಿದ್ದರು. ಮೈಸೂರಿನಲ್ಲಿ ಫೆ.4 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ನಾನು ಪೀಠಕ್ಕೆ ಕೊಟ್ಟಿದ್ದೇನೆ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಕೊಟ್ಟಿಲ್ಲ. ಕೊಟ್ಟಿರುವ ವ್ಯಕ್ತಿಯೂ ಶಾಶ್ವತವಾಗಿರುವುದಿಲ್ಲ, ಆದರೆ ಮಠ ಮಾತ್ರ ಶಾಶ್ವತವಾಗಿರುತ್ತದೆ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ಕೊಟ್ಟಿದ್ದರು. 

Karnataka Govt : ರಾಜ್ಯದಲ್ಲಿ 12,250 ಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ

ನಮ್ಮಂಥವರು ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು ಮಠದ ಮೇಲಿನ ಗೌರವದಿಂದ ಕಾಣಿಕೆಗಳನ್ನು ಭಕ್ತಿ ರೂಪದಲ್ಲಿ ಕೊಟ್ಟಿದ್ದೇನೆ. ಇದು ನನಗೆ ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಭಕ್ತಿಭಾವದಿಂದ ಕೊಟ್ಟ ಕಾಣಿಕೆಯನ್ನು ಪ್ರಚಾರಕ್ಕಾಗಿ ಪಡೆಯುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದ್ದರು. 

ನಮ್ಮ ಇಡೀ ಕುಟುಂಬವೇ ಸಮಾಜದಲ್ಲಿರುವ ಎಲ್ಲ ಮಠಗಳನ್ನು(Mutts) ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದೇವೆ. ಎಂಥ ಸಂದರ್ಭದಲ್ಲೂ ಕೂಡ ಯಾರನ್ನು ಅಗೌರವದಿಂದ ಕಂಡಿಲ್ಲ, ಮಠಗಳಿಗೆ ಕೊಟ್ಟ ಕಾಣಿಕೆಯನ್ನು ಹಿಂಪಡೆಯುವಂತಹ ಸಣ್ಣ ಮನುಷ್ಯ ನಾನಲ್ಲ. ಅಂತಹ ಕೆಳಮಟ್ಟಕ್ಕೂ ನಾನು ಹೋಗುವುದಿಲ್ಲ. ಶ್ರೀಗಳು ಯಾಕೆ ಈ ರೀತಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.