ಮೈಸೂರು(ಸೆ.07): ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ತಂಡದಲ್ಲಿ ಆಗಮಿಸಿರುವ ಆರು ಆನೆಗಳ ಪೈಕಿ ಅಂಬಾರಿ ಆನೆ ಅರ್ಜುನ ಮೈಮೇಲೆ ಶುಕ್ರವಾರ ಮರಳು ಮೂಟೆಗಳನ್ನು ಹೊರಿಸಿ ತಾಲೀಮು ನಡೆಸಲಾಯಿತು.

ಅರ್ಜುನ ಆನೆಯ ಮೈಮೇಲೆ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ 350 ಕೆ.ಜಿ ಮರಳು ಮೂಟೆ ಹೊರಿಸಿದರು. ಬಳಿಕ ಅರಮನೆ ಆವರಣದಿಂದ ಅರ್ಜುನ ನೇತೃತ್ವದಲ್ಲಿ ಗಜಪಡೆಯ ತಾಲೀಮು ಆರಂಭವಾಯಿತು. ಮರಳು ಮೂಟೆ ಹೊತ್ತು ಸಾಗಿದ ಅರ್ಜುನನ ಹಿಂದೆ ವರಲಕ್ಷ್ಮಿ, ವಿಜಯ, ಅಭಿಮನ್ಯು, ಧನಂಜಯ ಮತ್ತು ಈಶ್ವರ ಆನೆಗಳು ಸಾಗಿದವು.

ದಸರಾ ವೆಬ್‌ಸೈಟ್‌ ಕನ್ನಡ, ಇಂಗ್ಲಿಷ್‌ ಸೇರಿ 10 ಭಾಷೆಗಳಲ್ಲಿ ಲಭ್ಯ

ಬೆಳಗ್ಗೆ 8ರಿಂದಲೇ ತಾಲೀಮು ಆರಂಭ:

ಬೆಳಗ್ಗೆ 8.05ಕ್ಕೆ ಅರಮನೆ ಆವರಣದಿಂದ ಹೊರಟ ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್‌. ವೃತ್ತ, ಸಯ್ಯಾಜಿರಾವ್‌ ರಸ್ತೆ, ಹೈವೇ ವೃತ್ತದ ಮೂಲಕ ಬನ್ನಿಮಂಟಪಕ್ಕೆ 9.32ಕ್ಕೆ ತಲುಪಿದವು. ಕೆಲ ಹೊತ್ತು ವಿಶ್ರಾಂತಿಯ ಬಳಿಕ ಅದೇ ಮಾರ್ಗವಾಗಿ ಆನೆಗಳು ಅರಮನೆಗೆ ಬೆಳಗ್ಗೆ 11ಕ್ಕೆ ವಾಪಸ್‌ ಆದವು.

ಹೆಚ್ಚಿನ ಭಾರ ಹೊರೆಸಿ ಅಭ್ಯಾಸ:

ಆನೆಗಳಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತಿದ್ದು, ಇದರ ಪ್ರಮಾಣ ದಿನೇದಿನೇ ಹೆಚ್ಚಾಗಲಿದೆ. ಚಿನ್ನದ ಅಂಬಾರಿ 750 ಕೆ.ಜಿ. ಭಾರವಿದ್ದು, ಇದನ್ನು ಹೊತ್ತು ಸಾಗಲು ಆನೆಗಳಿಗೆ ತಾಲೀಮು ಅಗತ್ಯವಿದೆ. ಹೀಗಾಗಿ, ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಭಾರದ ಪ್ರಮಾಣ ದಿನೇ ದಿನೇ ಹೆಚ್ಚಿಸಲಾಗುವುದು ಎಂದು ಡಿಸಿಎಫ್‌ ಅಲೆಕ್ಸಾಂಡರ್‌ ತಿಳಿಸಿದರು.

ಮೈಸೂರು ದಸರಾದಲ್ಲಿ ಸಿದ್ಧಗಂಗಾ ಶ್ರೀ ಸ್ತಬ್ಧಚಿತ್ರ

ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು. ಪೊಲೀಸರು ಜಂಬೂ ಸವಾರಿ ಮಾರ್ಗದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರ