ಮೈಸೂರು (ಸೆ.08):  ಎಂಡಿಎ ಅಧ್ಯಕ್ಷ ಎಚ್‌.ವಿ.ರಾಜೀವ್‌ ಸೋಮವಾರ ಎಂಡಿಎ ರೂಪಿಸಿರುವ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಬಾಕಿ ಉಳಿದಿರುವ ಕಾಮಗಾರಿ ಪರಿಶೀಲಿಸಿದರು.

ಕಡಿಮೆ ದರಕ್ಕೆ ಗುಂಪು ಮನೆ ನಿರ್ಮಿಸಿ ಮಾರಾಟ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿರುವ ಎಂಡಿಎ ಗುರಿಗೆ ಪೂರಕವಾದ ನಿವೇಶನಗಳು, ಎಂಡಿಎಗೆ ಸೇರಿದ ಆಸ್ತಿಯನ್ನು ವೀಕ್ಷಿಸಿ ಅಲ್ಲಿ ಸಿದ್ಧಪಡಿಸಲಾದ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. 

ಬಿ.ಎ, ಬಿ.ಕಾಂ, ಬಿಎಸ್ಸಿ, ಬಿ.ಸಿ.ಎ ವಿದ್ಯಾರ್ಥಿಗಳಿಗೆ ಫ್ರೀ ಟ್ರೈನಿಂಗ್ ...

2012 ರಿಂದಲೂ ನೆನಗುದಿಗೆ ಬಿದ್ದಿರುವ 2 ಸಾವಿರ ಗುಂಪು ಮನೆ ನಿರ್ಮಾಣ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸಿ ಬಡವರಿಗೆ ಮನೆ ಹಂಚಿಕೆ ಆಡಬೇಕು. ದಟ್ಟಗಳ್ಳಿ, ಆರ್‌.ಟಿ. ನಗರ, ವಿಜಯನಗರ 2ನೇ ಹಂತ, ಬಸವನಹಳ್ಳಿ, ಲಲಿತಾದ್ರಿನಗರ, ಜೆ.ಪಿ. ನಗರ, ಹೂಟಗಳ್ಳಿ ಮತ್ತು ಕೇರ್ಗಳ್ಳಿ ಭಾಗದಲ್ಲಿ ಗುಂಪು ಮನೆ ನಿರ್ಮಿಸಲು ಉದ್ದೇಶಿಸಿದೆ. ಮನೆ ನಿರ್ಮಾಣದ ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶವು ಇದೆ.

ಅಲ್ಲದೆ ಸಿಂಗಲ್‌ ಬೆಡ್‌ರೂಂ, ಡಬಲ್‌ ಬೆಡ್‌ರೂಂ ಮತ್ತು ಮೂರು ಬೆಡ್‌ ರೂಂ ಇರುವ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದು, ಗ್ರಾಹಕರಿಗೆ ಅನುಕೂಲವಾಗವ ರೀತಿಯಲ್ಲಿ ಮನೆಗಳನ್ನು ವಿನ್ಯಾಸಗೊಳಿಸಲು ಉದ್ದೇಶಿಸಿದೆ. ಎಂಡಿಎ ನಿವೇಶನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿನಿತ್ಯ ನೂರಾರು ಮಂದಿ ಎಂಡಿಎಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅಲ್ಲದೆ ಎಂಡಿಎ ವತಿಯಿಂದ ಈ ಎಲ್ಲಾ ಯೋಜನೆಗೆ ಎಷ್ಟುವೆಚ್ಚವಾಗಬಹುದು ಎಂಬ ಅಂದಾಜುಪಟ್ಟಿತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.