ಮೈಸೂರು [ಸೆ.20]: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಹಾಗೂ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್‌.ಎಲ್ ಭೈರಪ್ಪ ಅವರನ್ನು ರಾಜ್ಯ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು. 

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅರಮನೆಗೆ ತೆರಳಿ ಪ್ರಮೋದಾ ದೇವಿ ಒಡೆಯರ್‌ ಅವರನ್ನು ಹಾಗೂ ಮೈಸೂರಿನ ಕುವೆಂಪುನಗರದ ಡಾ.ಎಸ್‌.ಎಲ್ ಭೈರಪ್ಪ ಅವರ ಮನೆಗೆ ತೆರಳಿ, ಫಲತಾಂಬೂಲ ನೀಡಿ ನಾಡಹಬ್ಬಕ್ಕೆ ಸಾಂಪ್ರದಾಯಿಕ ಸ್ವಾಗತ ಕೋರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ದೇಶನದ ಮೇರೆಗೆ, ನಾಡಹಬ್ಬಕ್ಕೆ ಪ್ರಮೋದಾದೇವಿ ಒಡೆಯರ್‌ ಹಾಗೂ ಡಾ.ಎಸ್‌.ಎಲ್ ಭೈರಪ್ಪ ಅವರನ್ನು ಅತ್ಯಂತ ಗೌರವಯುತವಾಗಿ ಆಹ್ವಾನಿಸಲಾಗಿದ್ದು, ಇವರಿಬ್ಬರೂ ನಾಡಹಬ್ಬದಲ್ಲಿ ಭಾಗವಹಿಸಲು ಸಂತೋಷದಿಂದ ಒಪ್ಪಿದ್ದಾರೆ ಎಂದರು.