ಚೌಡಮ್ಮನ ಕೆರೆಯಲ್ಲಿ ಮುಳುಗಿ ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ಸಾವು
ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ತಾಲೂಕಿನ ದೇವಗಿರಿ ಗ್ರಾಮದ ಶ್ರೀ ಚೌಡಮ್ಮನ ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರುವ ಹಿನ್ನೆಲೆ ಇಂದು ಬೆಳಗ್ಗೆ ಶಾಸಕ ವಿರೂಪಾಕ್ಷಪ್ಪ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಹಾವೇರಿ (ಜ.9) : ಹಾವೇರಿ ವೈದ್ಯಕೀಯ ವಿದ್ಯಾರ್ಥಿಗಳು ತಾಲೂಕಿನ ದೇವಗಿರಿ ಗ್ರಾಮದ ಶ್ರೀ ಚೌಡಮ್ಮನ ಕೆರೆಯಲ್ಲಿ ಈಜಾಡುವ ವೇಳೆ ಆಕಸ್ಮಿಕವಾಗಿ ಮೈಸೂರು ಮೂಲದ ವಿದ್ಯಾರ್ಥಿ ಮುಳುಗಿ ಮೃತಪಟ್ಟಿರುವ ಹಿನ್ನೆಲೆ ಇಂದು ಬೆಳಗ್ಗೆ ಶಾಸಕ ವಿರೂಪಾಕ್ಷಪ್ಪ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಮೊದಲನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿಗಳು ನಿನ್ನೆ ಮಧ್ಯಾಹ್ನ ಸುಮಾರು 12 ಗಂಟೆಗೆ ಹಾವೇರಿ ಹೊರವಲಯದ ದೇವಗಿರಿ ಗ್ರಾಮದ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನ ಹಿಂಭಾಗದಲ್ಲಿ ಇರುವ ಚೌಡಮ್ಮನ ಕೆರೆಯಲ್ಲಿ ಸ್ನಾನ ಮಾಡಲು ಬಂದಿದ್ದರು.
ಈಜಲು ಹೋಗಿದ್ದ ಟಿಬೇಟಿಯನ್ ವಿದ್ಯಾರ್ಥಿಗಳು ನೀರುಪಾಲು
ಹಾವೇರಿ ವೈದ್ಯಕೀಯ ಕಾಲೇಜಿನ ಒಟ್ಟು 5 ವಿದ್ಯಾರ್ಥಿಗಳು ತೆರಳಿದ್ದರು. ಕೆರೆಯಲ್ಲಿ ಸ್ನಾನ ಮಾಡುತ್ತಿರುವಾಗ ಇವರ ಪೈಕಿ ಒಬ್ಬ ಮೈಸೂರು ಮೂಲದ ನೋಮಾನ್ ಪಾಷಾ(Noman pasha) (18)ಎನ್ನುವ ವಿದ್ಯಾರ್ಥಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ಉಳಿದ ನಾಲ್ಕೂ ವಿದ್ಯಾರ್ಥಿಗಳು ಅವನನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ರಕ್ಷಣಾ ತಂಡದಿಂದ ಶೋಧಕಾರ್ಯ ನಡೆಸಿದರೂ ನಿನ್ನೆ ಮೃತದೇಹ ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಇದೇ ವರ್ಷ ಹಾವೇರಿ ಮೆಡಿಕಲ್ ಕಾಲೇಜು ಆರಂಭವಾಗಿದ್ದು, ಮೊದಲ ವರ್ಷದ ತರಗತಿ 15 ದಿನಗಳ ಹಿಂದಷ್ಟೇ ಶುರುವಾಗಿತ್ತು.
ಚೆಕ್‌ಡ್ಯಾಮ್‌ನಲ್ಲಿ ಈಜಲು ಹೋಗಿ ಜಲಸಮಾಧಿಯಾದ ಬಾಲಕಿಯರು
ಕುಶಾಲನಗರ: ಹೃದಯಾಘಾತದಿಂದ ಆರನೇ ತರಗತಿ ಬಾಲಕ ಸಾವು:
ಕುಶಾಲನಗರ ತಾಲೂಕು ಕೂಡುಮಗಳೂರು ಗ್ರಾಮದಲ್ಲಿ ಆರನೇ ತರಗತಿ ವಿದ್ಯಾರ್ಥಿ ಕೀರ್ತನ್ (12) ಎಂಬಾತ ಹೃದಯಾಘಾತದಿಂದ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಗ್ರಾಮದ ನಿವಾಸಿ ಮಂಜಾಚಾರಿ ಎಂಬುವರ ಪುತ್ರ ಈತ. ಶನಿವಾರ ರಾತ್ರಿ ಮಲಗಿದ ನಂತರ ಎರಡು ಬಾರಿ ಕಿರುಚಿಕೊಂಡ. ತಕ್ಷಣವೇ ಪೋಷಕರು ಆತನನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಮಾರ್ಗಮಧ್ಯೆ ಆತ ಕೊನೆಯುಸಿರೆಳೆದ. ಈತ ಸಮೀಪದ ಕೊಪ್ಪ ಭಾರತ್ ಮಾತಾ ಶಾಲೆಯ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಅದೇ ಶಾಲೆಯ ವಾಹನದ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ