Mysur : ಸಾ.ರಾ. ಮಹೇಶ್‌ ಜಯಗಳಿಸಲು ನನ್ನ ಕೊಡುಗೆ ಅಪಾರ - ಎಚ್ ವಿಶ್ವನಾಥ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಶಾಸಕ ಸಾ.ರಾ. ಮಹೇಶ್‌ ಜಯಗಳಿಸಲು ನನ್ನ ಕೊಡುಗೆ ಅಪಾರವಾಗಿದ್ದು, ನಾನು ಜೆಡಿಎಸ್‌ ಸೇರಿದ್ದರಿಂದ ಇದು ಸಾಧ್ಯವಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು

 my Contribution is main  Behind Sara Mahesh victory Says H Vishwanath snr

  ಕೆ.ಆರ್‌. ನಗರ (ಅ.25);  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಶಾಸಕ ಸಾ.ರಾ. ಮಹೇಶ್‌ ಜಯಗಳಿಸಲು ನನ್ನ ಕೊಡುಗೆ ಅಪಾರವಾಗಿದ್ದು, ನಾನು ಜೆಡಿಎಸ್‌ ಸೇರಿದ್ದರಿಂದ ಇದು ಸಾಧ್ಯವಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಕಾಂಗ್ರೆಸ್‌ (Congress)  ನನ್ನನ್ನು ಎಂದು ಕಡೆಗಾಣಿಸಿಲ್ಲ, ನಾನೆ ಕೆಲವು ಸಿದ್ದಾಂತಗಳನ್ನು ವಿರೋಧಿಸಿ ರಾಜೀನಾಮೆ ನೀಡಿದೆ, ನಂತರ ಶಾಸಕರಾಗಿದ್ದ ಎಸ್‌. ಚಿಕ್ಕಮಾದು ಅವರು ನನ್ನನ್ನು ಜೆಡಿಎಸ್‌ಗೆ (JDS)  ಸೇರ್ಪಡೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಆಮೇಲೆ ಖುದ್ದು ಎಚ್‌.ಡಿ. ದೇವೇಗೌಡರೆ ಹುಣಸೂರಿಗೆ ಬಂದು ಪಕ್ಷಕ್ಕೆ ಸೇರಿಸಿಕೊಂಡರೆಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಇದ್ದಾಗ ಸಂಸತ್‌ ಚುನಾವಣೆಯಲ್ಲಿ ಸೋತ ನಂತರ ನಾನು ಅವರನ್ನು ಜೆಡಿಎಸ್‌ಗೆ ಕರೆ ತಂದು ಹುಣಸೂರು ಕ್ಷೇತ್ರದಲ್ಲಿ ಶಾಸಕನನ್ನಾಗಿ ಮಾಡಲು ಶ್ರಮ ವಹಿಸಿದೆ ಎಂದು ಜೆಡಿಎಸ್‌ ಕುರುಬ ಸಮಾಜದ ಸಭೆಯಲ್ಲಿ ಸಾ.ರಾ. ಮಹೇಶ್‌ ಹೇಳಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದರು. ನಾನು ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಲು ಆ ಕ್ಷೇತ್ರದ ಮತದಾರರು ಮತ್ತು ಜಿಟಿಡಿ ಕುಟುಂಬ ಕಾರಣವಾಗಿದ್ದು, ಈ ವಿಚಾರದಲ್ಲಿ ಸಾ.ರಾ. ಮಹೇಶ್‌ ಅವರ ಯಾವ ಕೊಡುಗೆಯು ಇಲ್ಲವೆಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನಲ್ಲಿ ನಾನು ಇದ್ದಾಗ ನನ್ನ ಬೆಂಬಲಿಗರು ಮತ್ತು ಸಮಾಜದವರು ಮತ ಹಾಕಿದ್ದಕ್ಕೆ ಇವರು ಗೆಲುವು ಸಾಧಿಸಲು ಸಾಧ್ಯವಾಯಿತು, ಉದಾಹರಣೆಗೆ ನಮ್ಮೂರಿನಲ್ಲಿ ಇವರಿಗೆ ಹಿಂದಿನ ಚುನಾವಣೆಯಲ್ಲಿ 5 ಅಥವಾ 10 ಮತಗಳು ಬರುತ್ತಿದ್ದವು, ಆದರೆ ನಾನು ಬಂದ ನಂತರ 270 ಮತಗಳು ಬಂದಿವೆ, ಹೀಗಾಗಿ ಇದು ಯಾರ ಕೊಡುಗೆ ಎಂದು ಪ್ರಶ್ನಿಸಿದರಲ್ಲದೆ, ಹುಣಸೂರಿನಲ್ಲಿ ಎಚ್‌. ವಿಶ್ವನಾಥ್‌ ಶಾಸಕನಾಗುವುದಕ್ಕೂ ಸಾ.ರಾ. ಮಹೇಶ್‌ಗೂ ಯಾವುದೇ ಸಂಬಂಧವಿಲ್ಲ ಎಂದರು.

ಸಾ.ರಾ. ಮಹೇಶ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ನನಗೆ ಅವರ ಬಗ್ಗೆ ಅಭಿಮಾನವಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕುರುಬ ಸಮಾಜವನ್ನು ತಾರತಮ್ಯದಿಂದ ನೋಡುತ್ತಿದ್ದು, ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಮತ್ತು ಗಂಧನಹಳ್ಳಿ ಸಮುದಾಯ ಭವನದ ಅನುದಾನ ತಡೆ ಹಿಡಿಸಿದ್ದು, ಮುಂದಾದರು ಅವರು ಇಂತಹ ವರ್ತನೆ ಬಿಟ್ಟು ಹೃದಯ ವೈಶಾಲ್ಯತೆ ಬೆಳೆಸಿಕೊಂಡು ಸಮಾಜದ ಎಲ್ಲ ಸಮುದಾಯದ ಶಾಸಕರಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ನನ್ನ ರಾಜಕೀಯ ಜೀವನದಲ್ಲಿ ಎಂದೂ ಯಾವ ಸಮಾಜದವರನ್ನು ಧಿಕ್ಕರಿಸಿಲ್ಲ, ಜತೆಗೆ ಒಕ್ಕಲಿಗ ಸಮಾಜದ ಹಲವು ನಾಯಕರನ್ನು ಬೆಳೆಸಿ ಆ ಸಮುದಾಯದ ಕೆಲಸ ಮಾಡಿದ್ದೇನೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಸಾ.ರಾ. ಅರ್ಥ ಮಾಡಿಕೊಳ್ಳಬೇಕೆಂದರು. ಈಗಲೂ ನಾನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರ ರಾಜಕೀಯ ಮುಲಾಜಿನಲ್ಲಿ ಇದ್ದೇನೆಂದು ನುಡಿದರು.

ಖರ್ಗೆಯವರಿಗೆ ಅಭಿನಂದನೆ: ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ರಾಜಕೀಯ ಮುತ್ಸದ್ದಿ, ಕಾಂಗ್ರೆಸ್‌ ಕಟ್ಟಾಳು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಪಕ್ಷದ ಪರಮೋಚ್ಚ ಸ್ಥಾನ ಅಲಂಕರಿಸಿರುವುದು ನಾಡು ಹೆಮ್ಮೆ ಪಡುವ ವಿಚಾರವಾಗಿದ್ದು, ಇದಕ್ಕಾಗಿ ನಾನು ಅವರನ್ನು ಮತ್ತು ಆಯ್ಕೆಯಾಗಲು ಕಾರಣರಾದ ಕಾಂಗ್ರೆಸ್‌ ವರಿಷ್ಠೆ ಸೋನಿಯಾಗಾಂಧಿ ಮತ್ತು ಪಕ್ಷದ ಹಿರಿಯರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಶಾಸಕ ಸಾ.ರಾ. ಮಹೇಶ್‌ ಜಯ

ಸಾ.ರಾ. ಮಹೇಶ್‌ ಜಯಗಳಿಸಲು ನನ್ನ ಕೊಡುಗೆ ಅಪಾರವಾಗಿದ್ದು, ನಾನು ಜೆಡಿಎಸ್‌ ಸೇರಿದ್ದರಿಂದ ಇದು ಸಾಧ್ಯವಾಯಿತು

Latest Videos
Follow Us:
Download App:
  • android
  • ios