ಮಂಗಳೂರು(ಫೆ.28): 30 ವರ್ಷದಿಂದ ಜೊತೆಯಲ್ಲಿದ್ದ ಆಪ್ತನನ್ನೇ ಮುತ್ತಪ್ಪ ರೈ ಕೊಲ್ಲೋಕೆ ನೋಡಿದ್ರಾ..? ಹೀಗೊಂದು ಆರೋಪ ಕೇಳಿ ಬಂದಿದೆ. ಮುತ್ತಪ್ಪ ರೈ ತನ್ನನ್ನು ಕೊಲೆ ಮಾಡಲು ಯತ್ನಿಸಿರುವುದಾಗಿ ಅವರ ಆಪ್ತನೊಬ್ಬ ಆರೋಪಿಸಿದ್ದಾನೆ.

ಮುತ್ತಪ್ಪ ರೈ ವಿರುದ್ದ ಮಾಜಿ ಆಪ್ತನಿಂದಲೇ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದ್ದು, ಮಂಗಳೂರಿನಲ್ಲಿ ಮುತ್ತಪ್ಪ ರೈ ಮಾಜಿ ಆಪ್ತ ರಾಕೇಶ್ ಮಲ್ಲಿ ಹೇಳಿದ್ದಾರೆ. ಮುತ್ತಪ್ಪ ರೈ ಗೆ ಹಣದ ಮೇಲೆ ಅತಿಯಾಸೆ. ಸಂಘಟನೆ ಮಾಡಿ ಈ ಹಿಂದಿನ ಕೆಲಸಗಳಿಗೆ ಬೇಲಿ ಹಾಕುವ ಕೆಲಸ ಮಾಡಿದ್ದಾರೆ. ಮುತ್ತಪ್ಪ ರೈ ಜೊತೆ ಮೂವತ್ತು ವರ್ಷದಿಂದ ಜೊತೆಯಲ್ಲಿದ್ದೇನೆ ಎಂದಿದ್ದಾರೆ.

ಮುತ್ತಪ್ಪ ರೈ ಆಸ್ತಿ ಮೇಲೆ ಯಾರ ಕಣ್ಣು? ಅಸಲಿ ವಿಚಾರ ಏನು?

ಬಂಟ್ವಾಳದಲ್ಲಿ ಹದಿನೇಳುವರೆ ಎಕರೆ ಜಾಗಕೊಂಡಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಮುತ್ತಪ್ಪ ರೈ ಜೊತೆ ಸೇರಿ ಜಾಗ ಖರೀದಿ ಮಾಡಿದ್ದೇನೆ. ಜಾಗಕ್ಕಾಗಿ ನಾನು ರೈ ಜೊತೆ ದುಡ್ಡು ಕೊಟ್ಟಿದ್ದೇನೆ. ಈಗ ದುಡ್ಡು ಕೇಳಿದಾಗ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಮುತ್ತಪ್ಪ ರೈಯ ನಾಲಗೆ ಚೆನ್ನಾಗಿದೆ. ಮಾತಿನಿಂದಲೇ ಒಲೈಸುವ ಕೆಲಸ ಮಾಡುತ್ತಾರೆ ಎಂದಿದ್ದಾರೆ.

ಮುತ್ತಪ್ಪ ರೈ ಜೊತೆ ಈಗ ಹಳಬರು ಯಾರು ಇಲ್ಲ. ಪುತ್ತೂರು ಕೋರ್ಟ್ ನಲ್ಲಿ ರೈಗೆ  ಗುಂಡು ಹಾಕಿದವರಿಂದಲೇ ನನ್ನನ್ನು ಕೊಲೆ ಮಾಡಲು ನೋಡಿದ್ದಾರೆ. ಅವರ ವೈರಿಗಳಿಗೆ ಫೋನ್ ಮಾಡಿ ನನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ. ರೈಗೆ ತಾಕತ್ ಇದ್ದರೆ ಕೊಲೆ ಯತ್ನ ಮಾಡಲಿ. ನಾನೂ ನೋಡುತ್ತೇನೆ, ನಾನು ತಯಾರಿದ್ದೇನೆ ಎಂದಿದ್ದಾರೆ.

ಪಿಎಂ ಮೋದಿ ದೇಶವನ್ನು ಒಗ್ಗಟ್ಟುಗೊಳಿಸಿದ ನಾಯಕ: ಮುತ್ತಪ್ಪ ರೈ

ಮುತ್ತಪ್ಪ ರೈ ಇದುವರೆಗೆ ಯಾರಿಗೂ ಹಣ ಕೊಟ್ಟಿಲ್ಲ. ರೈ ಒಬ್ಬರಿಗೂ ಸೈಟ್,ಹಣ ನೀಡಿಲ್ಲ. ಮುತ್ತಪ್ಪ ರೈ ತುಂಬಾ ಮಂದಿಗೆ ತೆಗೆದುಕೊಂಡ ಹಣ ಕೊಡೋಕೆ ಬಾಕಿ ಇದೆ ಎಂದು ಹೇಳಿದ್ದಾರೆ.

ಫೆಬ್ರವರಿ 28ರ ಟಾಪ್ 10 ಸುದ್ದಿಗಾಗಿ  ಇಲ್ಲಿ ಕ್ಲಿಕ್ ಮಾಡಿ: