ಶಿವಮೊಗ್ಗ(ಡಿ.30): ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದ ನಾಲ್ವರಿಗೆ ರೂಪಾಂತರಗೊಂಡ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಶಿವಮೊಗ್ಗದ ಕೋವಿಡ್ ಮೆಗ್ಗಾನ್ ಅಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಶಿವಮೊಗ್ಗ ಬ್ರಿಟನ್‌ನಿಂದ ಒಂದೇ ಕುಟುಂಬದ ನಾಲ್ವರು, ಪತಿ ಪತ್ನಿ ಮತ್ತು ಇಬ್ಬರು ಮಕ್ಕಳು ಬಂದಿದ್ದರು. ಪತಿ (40), ಪತ್ನಿ (35), 7 ಮತ್ತು 9 ವರ್ಷ ದ ಇಬ್ಬರು ಮಕ್ಕಳಿಗೂ ವೈರಸ್ ತಗುಲಿರುವುದು ದೃಢಪಟ್ಟಿದೆ.

ರಾಜ್ಯಕ್ಕೆ ಬ್ರಿಟನ್ ವೈರಸ್ ಎಂಟ್ರಿ; ನೈಟ್‌ ಕರ್ಫ್ಯೂ ಜಾರಿ ಸಾಧ್ಯತೆ..?

ಕಳೆದೊಂದು ವಾರ ದಿಂದ ಮೆಗ್ಗಾನ್ ಅಸ್ಪತ್ರೆಯಲ್ಲಿ ಇವರನ್ನು ದಾಖಲು ಮಾಡಿಕೊಂಡು ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ರೂಪಾಂತರ ಕೊರೋನಾ ವೈರಸ್ ಬಂದಿರುವುದನ್ನು ಜಿಲ್ಲಾಡಳಿತ ದೃಢಪಡಿಸಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ಯವರು ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಸಾವರ್ಕರ್ ನಗರದಲ್ಲಿ ಇರುವ ಮನೆಯನ್ನು ಆರೋಗ್ಯ ಇಲಾಖೆ ಸ್ಯಾನಿಟೈಸ್ ಮಾಡಲಿದೆ.

ಇಡೋ ದೇಶದಲ್ಲಿ 107 ಪಾಸಿಟಿವ್ ಬಂದವರಲ್ಲಿ ಆರ್ ಟಿಪಿ ಸಿ ಆರ್ ಟೆಸ್ಟ್ ಮಾಡಿದಾಗ 20 ಜನರಿಗೆ ರೂಪಾಂತರ ಕರೋನಾ ಇರುವುದು ದೃಢಪಟ್ಟಿದೆ. ಡೆಲ್ಲಿಯಲ್ಲಿ 8,  
ಬೆಂಗಳೂರು 7, ಶಿವಮೊಗ್ಗ 4, Bbmp ವ್ಯಾಪ್ತಿಯಲ್ಲಿ -3 ಕೇಸುಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 7 ಜನರ ಕಾಂಟೆಕ್ಟ್ ಇದೆ. ಅದರಲ್ಲಿ ಮೂವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.