ಗದಗ ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲೂ ವ್ಯಾಪಾರ ಧರ್ಮ ಸಮರ
- ಗದಗದ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ
- ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನಿರಾಕರಿಸಲು ಅಭಿಯಾನ
- ವ್ಯಾಪಾರಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶ ಕೊಡಿ ಎಂದು ಫೇಸ್ ಬುಕ್ ಅಭಿಯಾನ
ವರದಿ: ಗಿರೀಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಗದಗ(ಮಾ.28): ಗದಗದ ಜಗದ್ಗುರು ತೋಂಟದಾರ್ಯ (Gadag Tontadarya) ಜಾತ್ರಾ ಮಹೋತ್ಸವದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ (Muslim Traders) ಅವಕಾಶ ನಿರಾಕರಿಸಬೇಕು ಅನ್ನೋ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡ್ತಿವೆ. ಶ್ರೀಮಠದ ಜಾತ್ರೆಯನ್ನು ಭಾವೈಕ್ಯತೆ ಹಾಗೂ ಸಾಹಿತ್ಯದ ಉತ್ಸವವನ್ನಾಗಿ ಆಚರಿಸಲಾಗುತ್ತೆ. ಪುಸ್ತಕ ಮೇಳ, ವಚನಗಳ ಕಟ್ಟು ಮೆರವಣಿಗೆಯಂಥ ಅರ್ಥ ಪೂರ್ಣ ಕಾರ್ಯಕ್ರಮಗಳು ಜಾತ್ರೆ ಸಂದರ್ಭದಲ್ಲಿ ನಡೆಯುತ್ತವೆ.
ಕೊರೊನಾ ಕಾರಣದಿಂದ ಕಳೆದಕೆಲ ವರ್ಷದಿಂದ ಜಾತ್ರೆ ಮಂಕಾಗಿತ್ತು. ಈ ಬಾರಿ ಏಪ್ರಿಲ್ 15 ರಿಂದ ಜಾತ್ರೆಗೆ ಚಾಲನೆ ಸಿಗಲಿದೆ ತಿಂಗಳುಗಳ ಕಾಲ ಶ್ರೀಮಠದ ಆವರಣದಲ್ಲಿ ವ್ಯಾಪಾರ ವ್ಯವಹಾರ ಭರ್ಜರಿಯಾಗೇ ನಡೆಯಲಿದೆ. ಜಾತ್ರೆ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದ್ದಂತೆ, ಹಿಂದೂಗಳಿಗೆ ಮಾತ್ರ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಅನ್ನೋ ಕೂಗು ಕೇಳಿ ಬರ್ತಿದೆ.
Assembly Elections 2023: ಮುಂದಿನ ವರ್ಷದ ಚುನಾವಣೆಗೆ ಹೊಸಪೇಟೆಯಿಂದಲೇ ಬಿಜೆಪಿ ರಣಕಹಳೆ
ಹಿಂದೂ ಸಂಘಟನೆ ಅಭಿಯಾನಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಪರ ವಿರೋಧ ಮಾತುಗಳು ಕೇಳಿ ಬರ್ತಿದೆ.. ಈ ಬಗ್ಗೆ ಮಾತ್ನಾಡಿರೋ ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ, ಹಿಜಾಬ್ ತೀರ್ಪನ್ನು ಅವಹೇಳನ ಮಾಡಲಾಗಿದೆ. ಹೀಗಾಗಿ ರಾಜ್ಯದ ವಿವಿಧೆಡೆ ಮುಸ್ಲಿಂ ವ್ಯಾಪಾರ ನಿರ್ಭಂಧಿಸಿದಂತೆ ತೋಂಟದಾರ್ಯ ಮಠದಲ್ಲೂ ನಿಷೇಧಿಸಿ ಅಂತಾ ಹೇಳಿದ್ದಾರೆ.
ಈ ಬಗ್ಗೆ ತೋಂಟದ ಸಿದ್ದರಾಮ ಶ್ರೀಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾತನಾಡಿಸೋದಕ್ಕೆ ಮುಂದಾಗಿತ್ತು. ಆದ್ರೆ, ಫೇಸ್ ಬುಕ್ ಪೋಸ್ಟ್ ಗಳ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡೋದು ಬೇಡ. ಸಹಾಬಾಳ್ವೆ, ಸಮಗ್ರತೆ ನಮ್ಮ ನಿಲುವಾಗಿರಬೇಕೆಂದಷ್ಟೆ ಪ್ರತಿಕ್ರಿಯೆ ನೀಡಿದ್ದು. ಮುಂದೆ ಎಲ್ಲವೂ ಸರಿ ಹೋಗಲಿದೆ ಅನ್ನೋ ಆಶಯ ವ್ಯಕ್ತ ಪಡಿಸಿದ್ದಾರೆ.
ಪರೀಕ್ಷೆ ಬರೆಯಲು ಹೊರಟ ವಿಜಯಪುರ ವಿದ್ಯಾರ್ಥಿಗೆ ತಿಥಿ ಮಾಡಿ ಕಿಡಿಗೇಡಿಗಳ ಕಾಟ!
ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಠದ ಜಾತ್ರಾ ಮಹೋತ್ಸವದ ಹೆಸರಲ್ಲಿ ಸದ್ಯ ವ್ಯಾಪಾರ 'ಧರ್ಮ' ಸಮರ ಶುರುವಾಗಿದೆ. ಮುಸ್ಲಿಂ ವ್ಯಾಪಾರಸ್ಥರನ್ನು ನಿರ್ಬಂಧಿಸಬೇಕು ಅನ್ನೋ ನಿಲುವನ್ನ ಹಿಂದೂ ಸಂಘಟನೆ ತೆಗೆದುಕೊಂಡಿದ್ದು, ಜಾತ್ಯಾತೀತ, ಸಹಬಾಳ್ವೆ ನಿಲುವು ಹೊಂದಿರುವ ಶ್ರೀಮಠದಲ್ಲಿ ವ್ಯಾಪಾರ ನಿರ್ಬಂಧ ಸಲ್ಲದು ಅನ್ನೋದು ಕೆಲ ಭಕ್ತರ ನಿಲುವಾಗಿದೆ.