Asianet Suvarna News Asianet Suvarna News

ಮುಸಲ್ಮಾನರ ಕತ್ತು ಹಿಸುಕುವ ಉದ್ದೇಶದಿಂದ ಮೀಸಲಾತಿ ರದ್ದು; ಸಿಎಂ ವಿರುದ್ಧ ಅಂಜುಮನ್‌ ಇಸ್ಲಾಂ ಸಮಿತಿ ಕಿಡಿ

ಸಮಾಜದಲ್ಲಿ ಸಾಮರಸ್ಯ ಕದಡಲು ಸಿಎಂ ಬೊಮ್ಮಾಯಿ ಅವರು ಮುಸ್ಲಿಂ ಸಮುದಾಯದ ಕತ್ತುಹಿಸುಕುವ ಉದ್ದೇಶದಿಂದ ಶೇ. 4 ಮೀಸಲಾತಿ ರದ್ದುಗೊಳಿಸಿದ್ದಾರೆ. ಹೀಗಾಗಿ ತಕ್ಷಣವೇ ಸರ್ಕಾರ ನಿರ್ಧಾರ ಹಿಂಪಡೆಯದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಂಜುಮನ್‌ ಇಸ್ಲಾಂ ಸಮಿತಿ ಚೇರಮನ್‌ ಎ.ಡಿ. ಕೋಲಕಾರ ಎಚ್ಚರಿಸಿದರು.

Muslim reservation issue  ; Anjuman Islam Committee outrage against CM  rav
Author
First Published Mar 26, 2023, 2:18 PM IST

ಗಜೇಂದ್ರಗಡ (ಮಾ.26) : ಸಮಾಜದಲ್ಲಿ ಸಾಮರಸ್ಯ ಕದಡಲು ಸಿಎಂ ಬೊಮ್ಮಾಯಿ ಅವರು ಮುಸ್ಲಿಂ ಸಮುದಾಯದ ಕತ್ತುಹಿಸುಕುವ ಉದ್ದೇಶದಿಂದ ಶೇ. 4 ಮೀಸಲಾತಿ ರದ್ದುಗೊಳಿಸಿದ್ದಾರೆ. ಹೀಗಾಗಿ ತಕ್ಷಣವೇ ಸರ್ಕಾರ ನಿರ್ಧಾರ ಹಿಂಪಡೆಯದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಂಜುಮನ್‌ ಇಸ್ಲಾಂ ಸಮಿತಿ ಚೇರಮನ್‌ ಎ.ಡಿ. ಕೋಲಕಾರ ಎಚ್ಚರಿಸಿದರು.

ಸ್ಥಳೀಯ ಅಂಜುಮನ್‌ ಶಾದಿ ಮಹಲ್‌ನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರ ಮೀಸಲಾತಿ 2ಬಿ ರದ್ದುಗೊಳಿಸಿ ಆದೇಶ ಹಿನæ್ನಲೆಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.

2B ಮೀಸಲಾತಿ ರದ್ದು: ಸರ್ಕಾರದ ನಡೆಗೆ ಮುಸ್ಲಿಮ್‌ ಸಮುದಾಯದಿಂದ ಆಕ್ರೋಶ, ಕಾನೂನು ಸಮರಕ್ಕೆ ಸಿದ್ಧತೆ?

ನಾವು ಪಂಕ್ಚರ್‌ ಹಾಕುವವರು ಎಂದು ನಿಮ್ಮವರೆ ನಿಂದಿಸುತ್ತಾ ಬರುತ್ತಿದ್ದಾರೆ. ಆದರೆ ಬೊಮ್ಮಾಯಿ ಅವರು ರಾಜಕೀಯ ಉದ್ದೇಶದಿಂದ ಸಮುದಾಯಗಳಲ್ಲಿ ಒಗ್ಗಟ್ಟು, ಸಾಮರಸ್ಯ ಮುರಿಯಲು ಹಾಗೂ ತಮ್ಮ ಓಟಿಗಾಗಿ ನಮ್ಮ ಮೀಸಲಾತಿ ರದ್ದು ಮಾಡಿದ್ದಾರೆ. ಮೀಸಲಾತಿ ಬೇಡಿಕೆಗಾಗಿ ಹೋರಾಟವನ್ನು ಮಾಡುವ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಸರ್ಕಾರ ಹೆಚ್ಚಿಸಿದರೆ ನಮ್ಮ ಸ್ವಾಗತವಿದೆ. ಆದರೆ ಒಬ್ಬರ ಕತ್ತು ಹಿಸುಕಿ ಇನ್ನೊಬ್ಬರಿಗೆ ಊಟ ಹಾಕುವ ನಿಮ್ಮ ರಾಜಕೀಯ ನೀತಿಗೆ ನಮ್ಮ ಧಿಕ್ಕಾರವಿದೆ ಎಂದು ಕಿಡಿಕಾರಿದರು.

ಕರ್ನಾಟಕ ಮುಸ್ಲಿಂ ಯುನಿಟಿ ಕಾರ್ಯಕಾರಿ ಸಮಿತಿ ಸದಸ್ಯ ಸುಭಾನಸಾಬ ಆರಗಿದ್ದಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿಯಂತೆ 2ಬಿ ಕೆಟಗರಿಯಲ್ಲಿ ಶೇ. 4ರಷ್ಟು1995ರಲ್ಲಿ ಮೀಸಲಾತಿ ನೀಡಲಾಗಿದೆ. ಸಿಎಂ ಬೊಮ್ಮಾಯಿ ಅವರ ಸಚಿವ ಸಂಪುಟವು ಶೇ.4ರ ಮೀಸಲಾತಿ ರದ್ದು ಮಾಡಿದ್ದು ದುರ್ದೈವ. ಸರ್ಕಾರದ ನಿರ್ಣಯವು ಮುಸ್ಲಿಂರ ಬೆಳವಣಿಗೆ ಹಾಗೂ ಭವಿಷ್ಯವನ್ನು ಮಂಕಾಗಿಸುವುದರ ಜತೆಗೆ ಶಿಕ್ಷಣ ಮತ್ತು ರಾಜಕೀಯವಾಗಿ ನಮ್ಮನ್ನು ತುಳಿಯಲು ಅತ್ಯಂತ ಅಮಾನವೀಯ ನಿರ್ಧಾರ ಕೈಗೊಂಡಿರುವ ಸಿಎಂ ಬೊಮ್ಮಾಯಿ ಅವರು ಇತಿಹಾಸದಲ್ಲಿ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದಾಗುತ್ತೀರಿ ಎಂದರು.

2B ಮೀಸಲಾತಿ ರದ್ದು: ಸರ್ಕಾರದ ನಡೆಗೆ ಮುಸ್ಲಿಮ್‌ ಸಮುದಾಯದಿಂದ ಆಕ್ರೋಶ, ಕಾನೂನು ಸಮರಕ್ಕೆ ಸಿದ್ಧತೆ?

 

ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ದೇಶದ 2013ರ ಜನಗಣತಿಯಂತೆ ಶೇ. 13.8ರಷ್ಟುಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಬಗ್ಗೆ ಕೇಂದ್ರ ಸರ್ಕಾರಗಳ ನ್ಯಾ.ರಾಜೇಂದ್ರ ಸಾಚಾರ ಸಮಿತಿ ಹಾಗೂ ನ್ಯಾ.ರಂಗನಾಥ ಮಿಶ್ರಾ ಆಯೋಗ ವರದಿಗಳನ್ನು ನೀಡಿವೆ. ಶೈಕ್ಷಣಿಕವಾಗಿ ಸಾಕ್ಷರತೆ ಪ್ರಮಾಣ, ಸರ್ಕಾರಿ ನೌಕರರ ಸಂಖ್ಯೆಯೂ ಸಹ ಕಡಿಮೆಯಿದೆ ಎಂದು ವರದಿ ಜತೆಗೆ ಅಲ್ಪಸಂಖ್ಯಾತರಿಗೆ ಶೇ.15ರಷ್ಟುಮೀಸಲಾತಿ ಅದರಲ್ಲಿ ಮುಸ್ಲಿಂರಿಗೆ ಶೇ. 10 ನೀಡಬೇಕು ಎಂದು ಶಿಫಾರಸು ಮಾಡಿದೆ. ಆದರೆ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಸುಳ್ಳು ಹೇಳುತ್ತಿದೆ. ಹೀಗಾಗಿ ಸರ್ಕಾರ ಆದೇಶವನ್ನು ಹಿಂಪಡೆಯಲು ಮುಂದಾಗದಿದ್ದರೆ ಉಗ್ರ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

Follow Us:
Download App:
  • android
  • ios