ಧಾರವಾಡ: ಮುಸ್ಲಿಂ ಕುಟುಂಬದಿಂದ ಅಯ್ಯಪ್ಪ ಮಾಲಾಧಾರಿಗಳ ಪಾದಪೂಜೆ!
ಅಯ್ಯಪ್ಪ ಮಾಲಾಧಾರಿಗಳಿಗೆ ಪಾದಪೂಜೆ ಮಾಡಿ, ಮನೆಯಲ್ಲಿ ಅಯ್ಯಪ್ಪಸ್ವಾಮಿಗೆ ಪೂಜೆ ಪುನಸ್ಕಾರ ಏರ್ಪಡಿಸಿ. ಮನೆಯಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ
ಕುಂದಗೋಳ(ಜ.02): ಸಂತ ಶಿಶುನಾಳ ಶರೀಫರು ಹಾಗೂ ಗುರು ಗೋವಿಂದ ಭಟ್ಟರ ನಾಡು, ತಾಲೂಕಿನ ಯರಗುಪ್ಪಿ ಗ್ರಾಮದ ಗಾರೆ ಕೆಲಸ ಮಾಡುವ ಹಜರೇಸಾಬ ಬುಡ್ಡೇಸಾಬ್ ಬೆಳಗಲಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಾವೈಕೈತೆ ಮೆರೆದಿದ್ದಾರೆ.
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಜಾತಿ, ಮತ, ಪಂಥ ಮೇಲು, ಕೀಳು ಧರ್ಮ ಇವು ಯಾವುದು ಗಣನೆಗೆ ತೆಗದುಕೊಳ್ಳದೆ ಭಾವೈಕ್ಯತೆಗೆ ಮುನ್ನುಡಿ ಬರೆದ ಗ್ರಾಮವಿದು. ತಲೆತಲಾಂತರಗಳಿಂದಲೂ ಸಾಮರಸ್ಯ ಬದುಕನ್ನು ಗ್ರಾಮ ಕಲಿಸಿದೆ. ಇಲ್ಲಿ ನಾವೆಲ್ಲ ಒಂದೇ ಕುಟುಂಬದ ಸಹೋದರ-ಸಹೋದರಿಯರು ಎಂಬ ಭಾವನೆಯಿಂದ ಬೆಳೆದು ಬಂದಿದ್ದೇವೆ. ಆ ನಿಟ್ಟಿನಲ್ಲಿ ಇವತ್ತು ಅಯ್ಯಪ್ಪಸ್ವಾಮಿ ಪಾದಪೂಜೆ ಏರ್ಪಡಿಸಿ ಕುಟುಂಬದಲ್ಲಿ ಶಾಂತಿ ಸಹಬಾಳ್ವೆ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದು ಹಜರೇಶ ಬೆಳಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಯರಗುಪ್ಪಿ ಗ್ರಾಮದಲ್ಲಿ ಪ್ರತಿವರ್ಷ ಹಿಂದೂ ಮುಸ್ಲಿಂ ಸಮುದಾಯದವರು ಸೇರಿ ಯುವಕ ಮಂಡಳದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಶಾಸ್ತ್ರೋಕ್ತವಾಗಿ ಪೂಜೆ, ಪುನಸ್ಕಾರ, ಸತ್ಕರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳಿಗೆ ಪಾದಪೂಜೆ ಮಾಡಿ, ಮನೆಯಲ್ಲಿ ಅಯ್ಯಪ್ಪಸ್ವಾಮಿಗೆ ಪೂಜೆ ಪುನಸ್ಕಾರ ಏರ್ಪಡಿಸಿ. ಮನೆಯಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿ ಭಾವೈಕ್ಯತೆ ಮೆರೆದಿದ್ದಾರೆ.
ದೇವಸ್ಥಾನ ನಿರ್ಮಾಣಕ್ಕೆ 6 ಲಕ್ಷ ರೂ ಮೌಲ್ಯದ ಭೂಮಿ ದಾನ ನೀಡಿದ ಮುಸ್ಲಿಂ ಕುಟುಂಬ!
ಚೆನ್ನೈ: ಸೌಹಾರ್ಧಯುತ ಬದುಕು ಇದೀಗ ವಿರಳವಾಗುತ್ತಿದೆ. ಕೋಮು ಸಂಘರ್ಷಗಳು, ಒಡಕು, ಸಮುದಾಯಗಳ ನಡುವಿನ ಬಡಿದಾಟಗಳೇ ಸದ್ದು ಮಾಡುತ್ತಿರುವ ಈ ಕಾಲದಲ್ಲಿ ಹಿಂದೂ -ಮುಸ್ಲಿಮರು ಒಗ್ಗಟ್ಟಾಗಿ ಜೀವನ ನಡೆಸುತ್ತಿರುವ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಇದೀಗ ಹಿಂದೂಗಳ ದೇವಸ್ಥಾನ ನಿರ್ಮಾಣಕ್ಕೆ ಮುಸ್ಲಿಮ್ ಕುಟುಂಬ ತಮ್ಮ 6 ಲಕ್ಷ ರೂಪಾಯಿ ಮೌಲ್ಯದ ಜಮೀನನ್ನು ಉಚಿತವಾಗಿ ನೀಡಿದ ಘಟನೆ ತಮಿಳುನಾಡಿನ ಪಡಿಯೂರಿನಲ್ಲಿ ನಡೆದಿದೆ.
ಪಡಿಯೂರು ಬಳಿ ಇರುವ ರೋಸ್ ಗಾರ್ಡನ್‌ನಲ್ಲಿನ ಹಿಂದೂ ಕುಟುಂಬಗಳು ಗಣೇಶನ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಅತೀ ಹೆಚ್ಚು ಮುಸ್ಲಿಮ ಜನಸಂಖ್ಯೆ ಇರುವ ಈ ರೋಸ್ ಗಾರ್ಡನ್‌ನಲ್ಲಿದೇವಸ್ಥಾನ ನಿರ್ಮಾಣಕ್ಕೆ ಭೂಮಿಯೇ ಇಲ್ಲದಾಗಿದೆ. ಹಿಂದೂ ಕುಟುಂಬ ತಮ್ಮ ಮನೆಯ ಪಕ್ಕದಲ್ಲಿರುವ ಸಣ್ಣ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಈ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಅಸಾಧ್ಯವಾಗಿತ್ತು. ಇದಕ್ಕೆ ಹೊಂದಿ ಕೊಂಡಿರುವ ಮುಸ್ಲಿಮ್ ಕುಟುಂಬದ ಖಾಲಿ ಜಾಗ ಸಿಕ್ಕರೆ ದೇವಸ್ಥಾನ ನಿರ್ಮಾಣ ಮಾತ್ರ ಸಾಧ್ಯವಿತ್ತು.
ಹೀಗಾಗಿ ಹಿಂದೂ ಕುಟುಂಬಗಳು ಮುಸ್ಲಿಮರು ಸ್ವಲ್ಪ ಜಮೀನು ಖರೀದಿಸಲು ಮುಂದಾಗಿತ್ತು. ಇದಕ್ಕಾಗಿ ಮುಸ್ಲಿಮ್ ಕುಟುಂಬಕ್ಕೆ ಮನವಿ ಮಾಡಲಾಗಿತ್ತು. ಮೊಹಮ್ಮದ್ ರಾಜಾ ಕುಟುಂಬಸ್ಥರಲ್ಲಿದ್ದ ಜಮೀನು ಖರೀದಿಸಲು ಮುಂದಾಗಿತ್ತು. ಈ ಮನವಿ ಕುರಿತು ಮೊಹಮ್ಮದ್ ರಾಜಾ, ರೋಸ್ ಗಾರ್ಡನ್ ಮುಸ್ಲಿಮ್ ಜಮಾತ್ ಗಮನಕ್ಕೆ ತಂದಿದ್ದರು. ಬಳಿಕ ಮುಸ್ಲಿಮ್ ಕುಟುಂಬಸ್ಥರು, ಮುಸ್ಲಿಮ್ ಜಮಾತ್ ಚರ್ಚಿಸಿ, 3 ಸೆಂಟ್ ನಿವೇಷನವನ್ನು ಉಚಿತವಾಗಿ ನೀಡಲು ಮುಸ್ಲಿಮ್ ಕುಟುಂಬ ನಿರ್ಧರಿಸಿತ್ತು.
ಗಣೇಶನ ದೇವಸ್ಥಾನ ನಿರ್ಮಾಣಕ್ಕೆ ಮುಸ್ಲಿಮ್ ಕುಟುಂಬ ತಮ್ಮ 3 ಸೆಂಟ್ ಜಾಗ ಅಂದರೆ 6 ಲಕ್ಷ ರೂಪಾಯಿ ಮೌಲ್ಯದ ಭೂಮಿಯನ್ನು ಹಿಂದೂ ಕುಟುಂಬಗಳಿಗೆ ಉಚಿತವಾಗಿ ನೀಡಿದೆ. ಭೂಮಿ ದಾನ ಮಾಡಿದ ಬಳಿಕ ದೇವಸ್ಥಾನ ನಿರ್ಮಾಣದಲ್ಲೂ ಮುಸ್ಲಿಮ್ ಕುಟುಂಬಗಳು ಕೈಜೋಡಿಸಿದೆ. ಇದೀಗ ದೇವಸ್ಥಾನ ನಿರ್ಮಾಣ ಪೂರ್ಣಗೊಂಡು, ಮೇ.26ರಂದು ಪ್ರಾಣಪ್ರತಿಷ್ಠೆ ನೆರವೇರಿತ್ತು.
ಗಣೇಶನ ಪ್ರಾಣಪ್ರತಿಷ್ಠಗೆ ಮುಸ್ಲಿಮ್ ಕುಟುಂಬ ಉಡುಗೊರೆಯೊಂದಿಗೆ ಆಗಮಿ ಪೂಜೆಯಲ್ಲಿ ಪಾಲ್ಗೊಂಡಿದೆ. ಇಲ್ಲಿನ ಹಿಂದೂ -ಮುಸ್ಲಿಮ್ ಕುಟುಂಬಗಳ ಸೌಹಾರ್ಧತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಮುಸ್ಲಿಮ್ ಕುಟುಂಬದ ನಿರ್ಧಾರಕ್ಕೆ ಭಾರಿ ಪ್ರಶಂಸೆಗಳು ವ್ಯಕ್ತವಾಗಿದೆ. ಈ ಊರಿನ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ ಎಂದು ಹಾರೈಸಿದ್ದರು.