Chitradurga: ಕಾರಂಜಿಯಿಂದ ಕಂಗೊಳಿಸಿದ ಕೋಟೆ ನಾಡಿನ ವೃತ್ತಗಳಿಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಚಾಲನೆ

ಚಿತ್ರದುರ್ಗ ಅಂದ್ರೆ ಸಾಕು ಬರದನಾಡು, ಬಿಸಿಲನಾಡು ಎಂದು ಮೂಗು ಮುರಿಯುವವರೇ ಹೆಚ್ಚು. ಅಂತದ್ರಲ್ಲಿ ಇಲ್ಲಿನ ಸ್ಥಳೀಯ ಶಾಸಕರು ಮಾಡಿರೋ ಅಭಿವೃದ್ಧಿ ಕಾರ್ಯಕ್ಕೆ ಜಿಲ್ಲೆಯ ಜನರು ಶಹಬ್ಬಾಶ್ ಎನ್ನುತ್ತಿದ್ದಾರೆ.

musical fountain start in chitradurga gvd

ಚಿತ್ರದುರ್ಗ (ಏ.05): ಚಿತ್ರದುರ್ಗ (Chitradurga) ಅಂದ್ರೆ ಸಾಕು ಬರದನಾಡು, ಬಿಸಿಲನಾಡು ಎಂದು ಮೂಗು ಮುರಿಯುವವರೇ ಹೆಚ್ಚು. ಅಂತದ್ರಲ್ಲಿ ಇಲ್ಲಿನ ಸ್ಥಳೀಯ ಶಾಸಕರು (MLA) ಮಾಡಿರೋ ಅಭಿವೃದ್ಧಿ (Development) ಕಾರ್ಯಕ್ಕೆ ಜಿಲ್ಲೆಯ ಜನರು ಶಹಬ್ಬಾಶ್ ಎನ್ನುತ್ತಿದ್ದಾರೆ. ಅರೇ ಅಷ್ಟಕ್ಕೂ ಆ ಶಾಸಕರು ಮಾಡಿರೋ ಅಭಿವೃದ್ಧಿ ಕಾರ್ಯವಾದ್ರು ಏನಪ್ಪ ಅಂತೀರಾ ಈ ವರದಿ ನೋಡಿ.

ಹೀಗೆ ಕಲರ್‌ಫುಲ್ ಆಗಿ ಮಿಂಚುತ್ತಾ ಜನರ ಕಣ್ಮನ ಸೆಳೆಯುತ್ತಿರೋ ಪ್ರತಿಮೆಗಳು. ಅದರ ಮುಂಭಾಗ ಮ್ಯೂಸಿಕಲ್ ಜೊತೆಗೆ ಕಾರಂಜಿಯಿಂದ (Musical Fountain) ಚಿಮ್ಮುತ್ತಿರುವ ನೀರು. ಇಂತಹ ಅದ್ಭುತ ಸ್ಥಳಗಳ ಮುಂದೆ ಸೆಲ್ಫಿ ತೆಗೆದುಕೊಳ್ತಿರೋ ಜನರು. ಇವೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಅದೇ ಬಿಸಿಲನಾಡು ಚಿತ್ರದುರ್ಗ. ಹೌದು! ಬೇಸಿಗೆ ಸಮಯದಲ್ಲಂತೂ ಚಿತ್ರದುರ್ಗ ಅಂದ್ರೆ ಸಾಕು, ಅಯ್ಯೋ ಸಿಕ್ಕಾಪಟ್ಟೆ ಬಿಸಿಲಿರುತ್ತೆ ನಾವು ಬರಲ್ಲಪ್ಪ ಎಂದು ಪ್ರವಾಸಿಗರು ಹಿಂದೇಟು ಹಾಕ್ತಾರೆ. 

ಜಮೀನಿಗಾಗಿ ಮಾರಾಮಾರಿ, ಅಣ್ತಮ್ಮಂದಿರ ನಡುವೆ ಹುಳಿ ಹಿಂಡಿದ್ರಾ ರಾಜಕೀಯ ಮುಖಂಡರು, ಪೊಲೀಸ್ರು?

ಆದ್ರೆ ಇಲ್ಲಿನ ಹಿರಿಯ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ (GH Thippareddy) ಅವರು ಜನರ ಮನೋರಂಜನೆಗಾಗಿ ನಗರದಲ್ಲಿರುವ ಕನದಾಸರ ಪ್ರತಿಮೆಯ ವೃತ್ತ, ಒನಕೆ ಓಬವ್ವಳ ಪ್ರತಿಮೆಯ ವೃತ್ತ, ಮತ್ತು ರಾಜವೀರ ಮದಕರಿ ನಾಯಕನ ಪ್ರತಿಮೆ ವೃತ್ತ. ಹೀಗೆ ಮೂರು ವೃತ್ತಗಳಲ್ಲಿ ಕಾರಂಜಿ ನಿರ್ಮಿಸುವ ಮೂಲಕ ಇಡೀ ಜಿಲ್ಲೆಯ ಜನರ ಕಣ್ಮನ ಸೆಳೆಯುವಲ್ಲಿ ಶಾಸಕರ ಈ ಅಭಿವೃದ್ಧಿ ಕಾರ್ಯ ಮಹತ್ವವಾಗಿದೆ. ಇನ್ನೂ ಈ ಕಾರ್ಯಕ್ಕೆ ಸುಮಾರು 80 ರಿಂದ 90 ಲಕ್ಷ ಖರ್ಚಾಗಿದೆ, ಈ ರೀತಿ ಕಾರಂಜಿ ಕ್ರಿಯೇಟ್ ಆಗಿರೋದ್ರಿಂದ ಜನರು ಖುಷಿ ಪಡ್ತಿದ್ದಾರೆ ಅಂತಾರೆ ಶಾಸಕರು. ಇನ್ನೂ ಈ ಬಗ್ಗೆ ಸ್ಥಳೀಯರನ್ನ ಮಾತನಾಡಿಸಿದ್ರೆ, ಬೇಸಿಗೆ ಬಂತು ಅಂದ್ರೆ ಸಾಕು ನಾವೆಲ್ಲರೂ ಬೇರೆ ಬೇರೆ ಜಿಲ್ಲೆಗಳಲ್ಲಿರುವ ತಂಪಾದ ಪ್ರವಾಸಿ ತಾಣಗಳಿಗೆ ತೆರಳುತಿದ್ದೆವು. 

ಆದರೆ ನಮ್ಮ ಜಿಲ್ಲೆಯಲ್ಲೇ  ಈ ರೀತಿಯ ಕಲರ್ ಫುಲ್ ಕಾರಂಜಿ ನಿರ್ಮಾಣ ಆಗಿರೋದು ನಿಜಕ್ಕೂ ತುಂಬಾ ಖುಷಿ ತಂದಿದೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅದರ ಮುಂಭಾಗ ಸೆಲ್ಫಿ ತೆಗೆದುಕೊಳ್ತಿದ್ದಾರೆ.‌ ಜೊತೆಗೆ ಮ್ಯೂಸಿಕ್ ಕಾರಂಜಿಯನ್ನು ನೋಡುತ್ತಾ ಮೈ ಮರೆಯುತ್ತಿದ್ದಾರೆ. ಇದೇ ರೀತಿ ಜಿಲ್ಲೆಯಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯಗಳು ಆಗಲಿ ಎಂಬುದು ನಮ್ಮ ಆಸೆ ಅಂತಾರೆ ಸ್ಥಳೀಯರು. ಒಟ್ಟಾರೆಯಾಗಿ ಬೇಸಿಗೆ ಸಮಯದಲ್ಲಿ ಮನೆಯಿಂದ ಹೊರಬರವುದಕ್ಕೂ ಯೋಚಿಸ್ತಿದ್ದ ಜನರು ಇಂದು ಕಲರ್‌ಫುಲ್ ಕಾರಂಜಿ ನೋಡದಕ್ಕೆ ನಾ ಮುಂದು ತಾ ಮುಂದು ಅಂತ ಬರ್ತಿರೋದು ಸಂತಸದ ವಿಷಯ.

ಕೋಟೆನಾಡಿನಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಲೇಔಟ್!

ರಥೋತ್ಸವದಲ್ಲೂ ವಿಜೃಂಭಿಸಿದ ಪುನೀತ್: ನಗುವಿನ ಒಡೆಯ, ಕರ್ನಾಟಕ ರತ್ನ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಮೇಲಿನ ಅಭಿಮಾನ ರಾಜ್ಯದಲ್ಲಿ ಇನ್ನೂ ಕಡಿಮೆ ಆಗಿಲ್ಲ ಮುಂದೆಯೂ ಅಗಲ್ಲ ಬಿಡಿ.  ಅದಕ್ಕೆ ನಿದರ್ಶನವೆಂಬಂತೆ, ಇಂದು(ಭಾನುವಾರ) ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಕೋಟೆನಾಡಿನ ಪ್ರಸಿದ್ದ ಪುಣ್ಯಕ್ಷೇತ್ರ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ನಡೆದ, ತಿಪ್ಪಜ್ಜನ ಬೃಹತ್ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ತೇರು ಎಳೆಯುವ ವೇಳೆಯಲ್ಲಿ, ಪವರ್ ಸ್ಟಾರ್ ಪೋಟೋ ಕೈಯಲ್ಲಿ ಹಿಡಿದು ಅಪ್ಪು, ಅಪ್ಪು ಎಂದು ಘೋಷ ವಾಕ್ಯ ಕೂಗುವ ಮೂಲಕ ಅಭಿಮಾನಿಗಳ ದೇವರಾದ ಕರುನಾಡ ರತ್ನನನ್ನು ಮನದಲ್ಲಿ ನೆನೆದರು. 

ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ನೆರೆದಿದ್ದರೂ ಎಲ್ಲರ ಗಮನ ಮಾತ್ರ ಅಪ್ಪು ಭಾವಚಿತ್ರದ ಮೇಲೆ ಇತ್ತು ಎಂದ್ರೆ ತಪ್ಪಾಗಲಿಕ್ಕಿಲ್ಲ. ಅದೇನೆ ಇರ್ಲಿ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾತಿನಂತೆ ಅಪ್ಪು ಅಭಿಮಾನಿಗಳು ಎಲ್ಲೆಡೆ ಅವರನ್ನು ಸ್ಮರಿಸ್ತಿರೋದು ನಿಜಕ್ಕೂ ದೊಡ್ಮನೆಗೆ ಸಂದ ದೊಡ್ಡ ಗೌರವವೇ ಸರಿ.  ಪುನೀತ್​ ರಾಜ್​ಕುಮಾರ್ ಅವರ ಅಭಿಮಾನಿಗಳ ಪಾಲಿಗೆ ‘ಜೇಮ್ಸ್​’ ಎಂದರೆ ಕೇವಲ ಸಿನಿಮಾವಾಗಿ ಉಳಿದಿಲ್ಲ. ಇದು ಅಪ್ಪು ನಟಿಸಿದ ಕೊನೇ ಚಿತ್ರವಾದ್ದರಿಂದ ಒಂದು ಎಮೋಷನ್​ ಆಗಿ ಬದಲಾಗಿದೆ. ‘ಜೇಮ್ಸ್​’ ಸಿನಿಮಾ ರಿಲೀಸ್​ ಆದಾಗ ಜನರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ಹಲವು ಅಭಿಮಾನಿಗಳು ಈ ಹಿಂದೆಯೇ ಮಾತು ನೀಡಿದ್ದರು. ಅದಕ್ಕೆ ತಕ್ಕಂತೆಯೇ ಫ್ಯಾನ್ಸ್​ ನಡೆದುಕೊಂಡಿದ್ದಾರೆ. 

Latest Videos
Follow Us:
Download App:
  • android
  • ios