ಮೈಸೂರು: ಯುವ ದಸರೆಯಲ್ಲಿ ಎ.ಆರ್. ರೆಹಮಾನ್ ಹವಾ!
ನವರಾತ್ರಿಯ ಏಳನೇ ದಿನವಾದ ಬುಧವಾರ ಮೈಸೂರು ಅರಮನೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಅರಮನೆಯಲ್ಲಿ ನಡೆದ ಸಾಂಪ್ರದಾಯಿಕ ಪೂಜೆಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಪಾಲ್ಗೊಂಡಿದ್ದವು. ನಿಶಾನೆ ಆನೆಯಾಗಿ ಭೀಮ, ಪಟ್ಟದ ಆನೆಯಾಗಿ ಕಂಜನ್ ಹಾಗೂ ಅರಮನೆಯ ಎರಡು ಆನೆಗಳು ಸಹ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗವಹಿಸಿದ್ದವು.
ಮೈಸೂರು(ಅ.10): ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಮೈಸೂರಿನ ಹೊರವಲಯದಲ್ಲಿ ಆಯೋಜಿಸಲಾಗಿರುವ ಯುವ ದಸರಾದ 4ನೇ ದಿನದ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪಾಲ್ಗೊಂಡಿದ್ದರು. ತಮ್ಮ ನಿರ್ದೇಶನದ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿ, ಸಂಗೀತ ಪ್ರಿಯರನ್ನು ರಂಜಿಸಿದರು.
ಈ ಮಧ್ಯೆ, ನವರಾತ್ರಿಯ ಏಳನೇ ದಿನವಾದ ಬುಧವಾರ ಮೈಸೂರು ಅರಮನೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಅರಮನೆಯಲ್ಲಿ ನಡೆದ ಸಾಂಪ್ರದಾಯಿಕ ಪೂಜೆಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಪಾಲ್ಗೊಂಡಿದ್ದವು. ನಿಶಾನೆ ಆನೆಯಾಗಿ ಭೀಮ, ಪಟ್ಟದ ಆನೆಯಾಗಿ ಕಂಜನ್ ಹಾಗೂ ಅರಮನೆಯ ಎರಡು ಆನೆಗಳು ಸಹ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗವಹಿಸಿದ್ದವು.
ಮೈಸೂರು ದಸರಾ: 435 ಕೆ.ಜಿ. ತೂಕ ಹೆಚ್ಚಿಸಿಕೊಂಡ ಬಲಭೀಮ!
ಬೃಂದಾವನ ಗಾಜಿನ ಮನೆಯಲ್ಲಿ ಪುಷ್ಪ ದರ್ಶನ:
ಈ ಮಧ್ಯೆ, ಮಂಡ್ಯ ಜಿಲ್ಲೆಯ ವಿಶ್ವಪ್ರಸಿದ್ದ ಕೆಆರ್‌ಎಸ್‌ನ ಬೃಂದಾವನದ ಗಾಜಿನ ಮನೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಬಗೆಯ ಹೂಗಳಿಂದ ಸಿದ್ದಗೊಂಡಿರುವ ಪುಷ್ಪಪ್ರದರ್ಶನ ಗಮನ ಸೆಳೆಯುತ್ತಿದೆ. ಮೈಸೂರು ಹಾಗೂ ಶ್ರೀರಂಗಪಟ್ಟಣದ ದಸರಾ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಪ್ರವಾಸಿಗರನ್ನು ಸೆಳೆಯಲು ಕಾವೇರಿ ನೀರಾವರಿ ನಿಗಮ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ವಿಶೇಷ ಹೂ ಮತ್ತು ಹೂವಿನ ರೆಂಬೆಗಳಿಂದ ನಿರ್ಮಿಸಿರುವ ಕಲಾಕೃತಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ದಸರಾ ಅಂಗವಾಗಿ ಸುಮಾರು 50 ಮತ್ತು 150 ಅಡಿ ವಿಸ್ತೀರ್ಣವಿರುವ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆ ಹೆಚ್ಚು ಬಣ್ಣ ಬಣ್ಣಗಳಿಂದ ಆಕರ್ಷಣೀಯವಾಗಿ ಕಾಣಲು ಹೆಚ್ಚಿನ ಪುಷ್ಪಗಳ ಗುಂಚಲುಗಳನ್ನು ತಂದು ಜೋಡಣೆ ಮಾಡಿ ಸುಮಾರು 15 ಸಾವಿ ರಕ್ಕೂ ಹೆಚ್ಚು ವಿವಿಧ ಹೂ ಕುಂಡಗಳನ್ನು ಅಕರ್ಷ ಅಕರ್ಷಣೀಯವಾಗಿ ಜೋಡಿಸಿದೆ.