Asianet Suvarna News Asianet Suvarna News

ದಾವಣಗೆರೆಯ ವಿರಕ್ತ ಮಠದಲ್ಲಿ ಮುರುಘಾ ಶ್ರೀ ವಾಸ್ತವ್ಯ

ದಾವಣಗೆರೆ ಶಿವಯೋಗಿ ಮಂದಿರದಲ್ಲಿ ಮುರುಘಾ ಶರಣರ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಹಳೇ ದಾವಣಗೆರೆಯಲ್ಲಿರುವ ವಿರಕ್ತ ಮಠಕ್ಕೆ ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿದರು. ಶ್ರೀಯವರು ದಾವಣಗೆರೆ ವಿರಕ್ತ ಮಠದಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಲಿದ್ದಾರೆ. 

Muruga Shri Stay at Virakta Matha in Davangere grg
Author
First Published Nov 16, 2023, 9:15 PM IST

ವರದಿ: ವರದರಾಜ್

ದಾವಣಗೆರೆ(ನ.16):  ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೈಲು ಸೇರಿದ್ದಾ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಸಧ್ಯ ಚಿತ್ರದುರ್ಗ ಜೈಲಿನಿಂದ ರಿಲೀಸ್ ಆಗಿದ್ದಾರೆ‌‌. ಜೈಲಿನಿಂದ ಹೊರಬಂದ ಅವರು ಚಿತ್ರದುರ್ಗ ಮಠಕ್ಕೆ ಹೋಗಲು ಕೋರ್ಟ್ ನಿರ್ಬಂಧ ಹೇರಿದ ಬೆನ್ನಲ್ಲೇ ಜೈಲಿನಿಂದ ನೇರ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ಆಗಮಿಸಿ ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.

ಮುರುಘಾ ಶರಣರ ಗದ್ದುಗೆಯಿಂದ ಶಾಖಾ ಮಠಕ್ಕೆ ಆಗಮಿಸಿದ ಮುರುಘಾ ಶ್ರೀ‌

ದಾವಣಗೆರೆ ಶಿವಯೋಗಿ ಮಂದಿರದಲ್ಲಿ ಮುರುಘಾ ಶರಣರ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಹಳೇ ದಾವಣಗೆರೆಯಲ್ಲಿರುವ ವಿರಕ್ತ ಮಠಕ್ಕೆ ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿದರು. ಶ್ರೀಯವರು ದಾವಣಗೆರೆ  ಈ ವಿರಕ್ತ ಮಠ ಜಯದೇವ ಮುರುಘಾ ಮಠದ ಶಾಕಾ ಪೀಠಗಳಲ್ಲಿ ಒಂದಾಗಿದ್ದು, ಇಲ್ಲೆ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಈ ವಿರಕ್ತ ಮಠದಲ್ಲಿ ಆಪ್ತಕೋಣೆಯಲ್ಲಿರುವ ಸ್ವಾಮೀಜಿಯನ್ನು ಕಾಣಲು ಬರುವ ಭಕ್ತರಿಗೆ ವಿರಕ್ತ ಮಠದಲ್ಲೇ ಸಿಗುತ್ತಾರೆಂದು ಭಕ್ತರು ಮಾಹಿತಿ ನೀಡಿದರು.  14 ತಿಂಗಳ ನಂತರ ದಾವಣಗೆರೆಗೆ ಆಗಮಿಸಿರುವ ಸ್ವಾಮೀಜಿಯವರನ್ನು ಭೇಟಿಯಾಗಲು ಸಮಾಜದ ಮುಖಂಡರು, ಗಣ್ಯಾತಿಗಣ್ಯರು ವಿರಕ್ತ ಮಠದ ಆವರಣಕ್ಕೆ ಆಗಮಿಸುತ್ತಿದ್ದರಿಂದ ಸಧ್ಯ ಶ್ರೀಮಠದ ಆವರಣದಲ್ಲಿ ಒಂದು ರೀತಿಯ ಹಬ್ಬದ ವಾತವರಣ ನಿರ್ಮಾಣ ಆಗಿದೆ. 

ಬಿಜೆಪಿ ಟೀಕಿಸಲು ಪ್ರಿಯಾಂಕ್ ಖರ್ಗೆಗೆ ನೈತಿಕತೆ ಇಲ್ಲ: ಎಂ.ಪಿ.ರೇಣುಕಾಚಾರ್ಯ

ಭಕ್ತವಲಯದಲ್ಲಿ ಮೂಡಿದ ಸಂತಸ...ಸಿಹಿ ಹಂಚಿ ಸಂಭ್ರಮ

ಶಿವಮೂರ್ತಿ ಮುರುಘಾ ಶರಣರು ಜೈಲಿನಿಂದ ಆಗಮಿಸಿದ್ದರಿಂದ ದಾವಣಗೆರೆಯ ವಿರಕ್ತ ಮಠದತ್ತ ಭಕ್ತರು ಆಗಮಿಸುತ್ತಿದ್ದಾರೆ. ಸಧ್ಯ ವಿಶ್ರಾಂತಿಗೆ ಜಾರಿರುವ ಮುರುಘಾ ಶರಣರನ್ನು ಕಾಣಲು ಭಕ್ತರ ಮಠದ ಆವರಣದಲ್ಲಿ ಕಾದು ಕೂತಿದ್ದಾರೆ. ಅಲ್ಲದೆ ಮುಸ್ಲಿಂ ಮುಖಂಡರು ಹಾಗು ಮುಸ್ಲಿಂ‌ ಸಮಾಜ ಸಾಕಷ್ಟು ಜನ ಶ್ರೀಗಳನ್ನು ಕಾಣಲು ಆಗಮಿಸುತ್ತಿರುವುದು ವಿಶೇಷವಾಗಿದೆ. ಇನ್ನು ಕುತೂಹಲ ಏನೇಂದ್ರೇ ದಾವಣಗೆರೆಗೆ ಆಗಮಿಸು  ಮೊದಲು ಮುರುಘಾ ಶರಣರು ಕೋರ್ಟ್ ವಿಸಿಗೆ ಆಟೆಂಡ್ ಆಗಿ ಶಿವಯೋಗಿ ಮಂದಿರಕ್ಕೆ ಆಗಮಿಸಿದ್ದು, ಇದೀಗ 03 ಗಂಟೆಗೊಂದು ವಿಸಿಗೆ ಅಟೆಂಡ್ ಆಗಲಿದ್ದಾರೆಂದು ವಕೀಲ ಪ್ರತಾಪ್ ಜೋಗಿ ಮಾಹಿತಿ ನೀಡಿದರು. 

ನಾವು ಮೌನವಾಗಿರುತ್ತೇವೆ: ಭಕ್ತರಿಗೆ ಮೌನವೇ ದೊಡ್ಡ ಸಂದೇಶ: ಮುರುಘಾ ಶ್ರೀ..

ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ: ಭಕ್ತರಿಗೆ ಮೌನವೇ ದೊಡ್ಡ ಸಂದೇಶ ಎಂದು ಮುರುಘಾ ಶ್ರೀ ಭಕ್ತರಿಗೆ ಸಂದೇಶ ರವಾನಿಸದರು. ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠಕ್ಕೆ ಭೇಟಿ ನೀಡುವ ಮುನ್ನ ಮಾತನಾಡಿದ ಅವರು ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ, ಭಕ್ತರಿಗೆ ಮೌನವೇ ದೊಡ್ಡ ಸಂದೇಶ, ಇದು ಏನೂ ಹೇಳುವ ಸಂದರ್ಭವಲ್ಲ, ಯಾವುದನ್ನೂ ಹೇಳಲ್ಲ, ನಿಮ್ಮನ್ನೂ ಮತ್ತೊಮ್ಮೆ ಕರೆಯಿಸಿ ಮಾತನಾಡುತ್ತೇನೆ, ಚಿಂತೆ ಬೇಡ, ಈಗ ಸಂದೇಶ ಕೊಡುವ ಕಾಲವಲ್ಲ, ಎರಡನೇ ಕೇಸ್ ಕಾನೂನು ತೊಡಕು ಹಿನ್ನಲೆಯಲ್ಲಿ ವಿಚಾರಣೆ ನಡೀತಾ ಇದೆ, ಏನೂ ಹೇಳಲ್ಲ, ಭಕ್ತರು ಎಲ್ಲಿ ವ್ಯವಸ್ಥೆ ಮಾಡುತ್ತಾರೋ ಅಲ್ಲಿ ಇರುತ್ತೇನೆ ಎಂದು ತಿಳಿಸಿದರು. ಇನ್ನು ದಾವವಣಗೆರೆ ವಿರಕ್ತ ಮಠದಲ್ಲಿ ನೆಲೆಸಿರುವ ಮುರುಘಾ ಶರಣರು ಅಪ್ತಾಕೋಣೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ. ಕೆಲ ಅತ್ಯಪ್ತಾ ಭಕ್ತರು ಮುಖಂಡರು ವಿರಕ್ತ ಮಠಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. 

ಬಿಜೆಪಿಯಿಂದ ಕಾಂಗ್ರೆಸ್‌ ಪ್ರಣಾಳಿಕೆ ಪಂಚರಾಜ್ಯ ಚುನಾವಣೆಯಲ್ಲಿ ನಕಲು: ಶಾಸಕ ಶಾಮನೂರು ಶಿವಶಂಕರಪ್ಪ

ಮುರುಘಾ ಶರಣರಿಗೆ ಭೇಟಿಯಾಗಲು ಆಗಮಿಸಿದ ಶ್ರೀಗಳ ದಂಡು

14 ತಿಂಗಳ ಸೆರೆವಾಸದಿಂದ ಜೈಲಿನಿಂದ ಬಿಡುಗಡೆಯಾದ ಶಿವಮೂರ್ತಿ ಮುರುಘಾ ಶರಣರು ಸಧ್ಯ ದಾವಣಗೆರೆ ವಿರಕ್ತ ಮಠದ ನೆಲೆಸಿದ್ದರಿಂದ ಮುರುಘಾ ಶ್ರೀಗಳನ್ನು ಭೇಟಿಯಾಗಲು ವಿವಿಧ ಮಠಾಧೀಶರು ವಿರಕ್ತ ಮಠದತ್ತ ಆಗಮಿಸುತ್ತಿದ್ದಾರೆ. ದಾವಣಗೆರೆಯ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ 

ಚಿತ್ರದುರ್ಗದ ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀಗಳು, ಮಡಿವಾಳ ಮಾಚಿದೇವ ಸ್ವಾಮೀಜಿ, ಸೇರಿದಂತೆ ಹಲವು ಮಠಾಧೀಶರು ಆಗಮಿಸಿ ಯೋಗಕ್ಷೇಮ ವಿಚಾರಿಸಿದರು.‌ ಪೋಕ್ಸೋ ಪ್ರಕರಣದಿಂದ ಜಾಮೀನನ‌ ಮೇಲೆ ಬಿಡುಗಡೆಯಾಗಿರುವ ಮುರುಘಾ ಶ್ರೀಗಳನ್ನು ಭೇಟಿಯಾಗಿ ಕೆಲ ಕಾಲ ಮಾತನಾಡಿಸಿ ಕೆಲ ವಿಚಾರಗಳನ್ನು ಚರ್ಚಿಸಿದರು.

Follow Us:
Download App:
  • android
  • ios