* ಕೊಪ್ಪಳ ಜಿಲ್ಲೆಯ ಗಂಗಾವಾತಿ ನಗರದಲ್ಲಿ ನಡೆದ ಘಟನೆ* ಮೇ 19ರಂದು ಮೃತಪಟ್ಟಿದ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಹಿಳೆ * ನಿಮ್ಮ ಕುಟುಂಬದವರನ್ನು ಇಲ್ಲದಂತೆ ಮಾಡುತ್ತೇನೆ 

ಗಂಗಾವತಿ(ಜೂ.10):ಕೋವಿಡ್‌ ಆಸ್ಪತ್ರೆಯಲ್ಲಿ ತನ್ನ ತಾಯಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದ ಮೃತಳ ಪುತ್ರ ಇಬ್ಬರು ವೈದ್ಯರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. 

ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಹಿಳೆ ನಗರದ ಎಂಸಿಎಚ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 19ರಂದು ಮೃತಪಟ್ಟಿದ್ದರು. 

ಲಾಕ್‌ಡೌನ್‌ ಎಫೆಕ್ಟ್‌: ಮನೆ ಮನೆಯಲ್ಲಿ ಮದ್ಯ, ಮಾಂಸ ಮಾರಾಟ..!

ಮಹಿಳೆಯ ಪುತ್ರ ಸೈಯದ್‌ ಇಸ್ಮಾಯಿಲ್‌ ವೈದ್ಯಾಧಿಕಾರಿ ಡಾ. ಸಲಾವುದ್ದೀನ್‌ ಖಾಲೀದ್‌ ಮತ್ತು ಡಾ. ರೇಣುಕಾರಾಧ್ಯ ಹಿರೇಮಠ ಎನ್ನುವವರಿಗೆ ಮೊಬೈಲ್‌ ಮೂಲಕ ಬೆದರಿಕೆ ಹಾಕಿ, ನಿಮ್ಮ ಕುಟುಂಬದವರನ್ನು ಇಲ್ಲದಂತೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಈ ಸಂಬಂಧ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ವೈದ್ಯರು ದೂರು ದಾಖಲಿಸಿದ್ದಾರೆ.