ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್‌ಗೆ ಗಣೇಶನ ದರ್ಶನ ಇಲ್ಲ. ಹೌದು, ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇರುವ ಹಿನ್ನೆಲೆಯಲ್ಲಿ ದರ್ಶನ್‌ಗೆ ಗಣೇಶನ ದರ್ಶನದ ಭಾಗ್ಯ ಇಲ್ಲ. 

ಬಳ್ಳಾರಿ(ಸೆ.07):  ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣೇಶ ಮೂರ್ತಿ ಕೂರಿಸಲು ಜೈಲು ಒಳಭಾಗದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಬಾಳೆ ಕಂಬ, ಬಲೂನ್, ಲೈಟಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. 

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಸಿಹಿ ತಿಂಡಿ ನೀಡಲಾಗುತ್ತದೆ.ಮೋದಕ, ಬೆಲ್ಲದ ಕಡಬು, ರವೆ ಪಾಯಿಸ ಕೈದಿಗಳಿಗೆ ಹಬ್ಬದ ಸಿಹಿ ಸಿಗಲಿದೆ. ಒಂಬತ್ತು ಗಂಟೆಗೆ ಗಣೇಶ ಪೂಜೆಯಲ್ಲಿ ಕೈದಿಗಳು ಭಾಗಿಯಾಗಲಿದ್ದಾರೆ. ಕೈದಿಗಳೂ ಕೂಡ ಗಣೇಶನಿಗೆ ಪೂಜೆ ಸಲ್ಲಿಸಲಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ವಿರುದ್ಧ ಪಟ್ಟಣಗೆರೆ ಶೆಡ್‌ನ ಮಣ್ಣೂ ಪ್ರಬಲ ಸಾಕ್ಷ್ಯ..!

ಕೊಲೆ ಆರೋಪಿ ನಟ ದರ್ಶನ್‌ಗೆ ಇಲ್ಲ ಗಣೇಶನ ದರ್ಶನ

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್‌ಗೆ ಗಣೇಶನ ದರ್ಶನ ಇಲ್ಲ. ಹೌದು, ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇರುವ ಹಿನ್ನೆಲೆಯಲ್ಲಿ ದರ್ಶನ್‌ಗೆ ಗಣೇಶನ ದರ್ಶನದ ಭಾಗ್ಯ ಇಲ್ಲ ಎಂದು ತಿಳಿದು ಬಂದಿದೆ. 
ಜೈಲು ಸಭಾಂಗಣದಲ್ಲಿ ಗಣೇಶನ ಮೂರ್ತಿ ಕೂರಿಸಲಾಗುತ್ತದೆ. ಅಲ್ಲಿ ಒಂಬತ್ತು ಬ್ಯಾರಕ್ ನಲ್ಲಿರುವ ಎಲ್ಲ ಕೈದಿಗಳು ಗಣೇಶನ ದರ್ಶನ ಪಡೆಯಬಹುದು. ಆದರೆ, ಹೈ ಸೆಕ್ಯುರಿಟಿ ಸೆಲ್‌ನಲ್ಲಿರುವ ದರ್ಶನ ಸೇರಿದಂತೆ ನಾಲ್ಕು ಕೈದಿಗಳಿಗಿಲ್ಲ ಗಣೇಶನ ದರ್ಶನದ ಭಾಗ್ಯ ಇಲ್ಲ.