ಉಡುಪಿ(ಜು.05): ಉಡುಪಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಲ್ಪೆಯ ನಗರಸಭಾ ಸದಸ್ಯನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸುತ್ತಿದ್ದಾರೆ.

ಕೆಲದಿನಗಳ ಹಿಂದೆ ಇವರ ಸಂಬಂಧಿಕನನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೋನಾ ಮಹಾಮಾರಿಯ ಹಿಟ್ ಲಿಸ್ಟಲ್ಲಿ ಈಗ ಜನಪ್ರಿಯ ಹೋಟೆಲ್‌ಗಳು ಕಂಡು ಬಂದಿವೆ.

ಪಾಸಿಟಿವ್ ಇದ್ರೂ ಕೊರೋನಾ ಆಸ್ಪತ್ರೆಗೆ ಬರಲ್ಲ ಎಂದು ಹಠ ಮಾಡಿದ JDS ಮುಖಂಡ..!

ಹೋಟೆಲ್ ಮಾಲಿಕನಿಗೆ ಕೊರೋನಾ ಬಂದಿರುವ ಹಿನ್ನೆಲೆ ಉಡುಪಿಯ ಪ್ರಸಿದ್ಧ ಮೀನು ಊಟದ ಹೋಟೆಲ್ ಸೀಲ್ ಡೌನ್ ಮಾಡಲಾಗಿದೆ. ಹೋಟೆಲಿನ ಗ್ರಾಹಕರಲ್ಲಿ ಇದೀಗ ಆತಂಕ ಮನೆಮಾಡಿದೆ. ಒಂದು ವಾರದಲ್ಲಿ ಜಿಲ್ಲೆಯ ಮೂರು ಪ್ರಸಿದ್ದ ಹೋಟೆಲ್ ಗಳು ಸೀಲ್ ಡೌನ್ ಆಗಿದ್ದು, ಕೊರೋನಾ ಮಹಾಮಾರಿ ಸ್ಥಳೀಯರಲ್ಲಿ ಹರಡುತ್ತಿದೆ.