Russia-Ukraine War: 'ಭಾರತ ಉಕ್ರೇನ್ ಪರ ನಿಲ್ಲದ್ದಕ್ಕೆ ಸಿಟ್ಟಿಗೆದ್ದು ಕಿರುಕುಳ ಕೊಟ್ಟರು'
* ತವರಿಗೆ ಮರಳಿದ ಸ್ನೇಹಾ ಹೊಸಮನಿ ಮನದಾಳದ ಮಾತು
* ಉಕ್ರೇನ್ ಪರವಾಗಿ ಮತ ಚಲಾಯಿಸಿ ಬೆಂಬಲ ನೀಡದ ಭಾರತ
* ಸ್ಪಂದಿಸಿದ ಭಾರತದ ಆಡಳಿತ
ಸಂತೋಷ ದೈವಜ್ಞ
ಮುಂಡಗೋಡ(ಮಾ.05): ‘ಯುದ್ಧದ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಭಾರತ(India) ಉಕ್ರೇನ್(Ukraine) ಪರವಾಗಿ ಮತ ಚಲಾಯಿಸಿ ಬೆಂಬಲ ನೀಡದೇ ತಟಸ್ಥವಾಗಿ ಇರುವುದರಿಂದ ಆ ದೇಶದವರು ತೀವ್ರ ಸಿಟ್ಟಿಗೆದ್ದು ಭಾರತೀಯರಿಗೆ(Indians) ಕಿರುಕುಳ ನೀಡುತ್ತಿದ್ದರು. ಅವರ ಅಸಮಾಧಾನದಿಂದ ಹಲವಾರು ಭಾರತೀಯ ವಿದ್ಯಾರ್ಥಿಗಳು ತೊಂದರೆ, ಚಿತ್ರಹಿಂಸೆ ಅನುಭವಿಸಬೇಕಾಯಿತು...!’
ಯುದ್ಧಭೂಮಿ ಉಕ್ರೇನ್‌ನ ಖಾರ್ಕೀವ್‌ನಿಂದ ಪೋಲಂಡ್‌ಗೆ(Poland) ತೆರಳಿ ಅಲ್ಲಿಂದ ಶುಕ್ರವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ ಮುಂಡಗೋಡದ ವೈದ್ಯ ವಿದ್ಯಾರ್ಥಿನಿ(Medical Student) ಸ್ನೇಹಾ ಹೊಸಮನಿ ಬಿಚ್ಚಿಟ್ಟಅಸಲಿ ಸತ್ಯ ಇದು.
ಉಕ್ರೇನ್‌ನವರು ಸ್ವಭಾವತಃ ಒಳ್ಳೆಯವರು. ಯಾವಾಗಲೂ ನಮಗೆ ತೊಂದರೆ ನೀಡಿದ್ದಿಲ್ಲ. ಭಾರತದ ಬಗ್ಗೆ ಗೌರವ ಇದೆ ಅವರಿಗೆ. ಆದರೆ ಯುದ್ಧದ(War) ಸಂದರ್ಭದಲ್ಲಿ ಉಕ್ರೇನ್ ಪರವಾಗಿ ಭಾರತ ಮತ ನೀಡಿಲ್ಲ ಎಂಬ ಸಿಟ್ಟಿತ್ತು. ಇದರಿಂದ ಟ್ರೇನ್, ಮೆಟ್ರೋ ಸ್ಟೇಷನ್, ಗಡಿ ಪ್ರದೇಶ ಸೇರಿದಂತೆ ಹಲವೆಡೆ ಭಾರತೀಯ ವಿದ್ಯಾರ್ಥಿಗಳಿಗೆ ಕಿರುಕುಳ(Harassment) ನೀಡುತ್ತಿದ್ದರು.
Russia-Ukraine Crisis: ಮೋದಿ-ಪುಟಿನ್ ರಾತ್ರೋರಾತ್ರಿ ಭೇಟಿ, ಇದರ ಉದ್ದೇಶ ಏನು?: HDK
ನಮಗೆ ಸರಿಯಾಗಿ ತಂಗುವ ವ್ಯವಸ್ಥೆ ಮಾಡಲಿಲ್ಲ. ಊಟ, ನೀರು ಸಿಗದಂತೆ ಮಾಡುತ್ತಿದ್ದರು. ಸದಾ ತಿರಸ್ಕಾರದಿಂದ ಕಾಣುತ್ತಿದ್ದರು. ರೈಲುಗಳನ್ನು ಏರುವಾಗ ಭಾರತೀಯ ವಿದ್ಯಾರ್ಥಿಗಳನ್ನು(Indian Students) ಗುರುತಿಸಿ ಕೆಳಕ್ಕೆ ಇಳಿಸುತ್ತಿದ್ದರು. ಕೆಲವೆಡೆ ಹೊಡೆದು ಹಿಂಸಿಸಿದರು. ಉದ್ದೇಶಪೂರ್ವಕವಾಗಿಯೇ ನಾವು ಸಂಕಷ್ಟಅನುಭವಿಸುವಂತೆ ಮಾಡಿದರು.
ಮುನ್ಸೂಚನೆ ಇರಲಿಲ್ಲ
ರಷ್ಯಾ(Russia) ಮತ್ತು ಉಕ್ರೇನ್ ಮಧ್ಯೆ ಯುದ್ಧ ತಕ್ಷಣ ಆರಂಭವಾಗಿ ಈ ಮಟ್ಟಕ್ಕೆ ಮುಟ್ಟುತ್ತದೆ ಎಂಬ ಮುನ್ಸೂಚನೆ ಯಾರಿಗೂ ಇರಲಿಲ್ಲ. ಫೆ. 24ರ ಬೆಳಗಿನ ಜಾವ ಇದ್ದಕ್ಕಿದ್ದಂತೆ ರಷ್ಯಾ ಬಾಂಬ್(Bomb) ದಾಳಿ ಆರಂಭಿಸಿದ್ದರಿಂದ ವಾರ ಕಾಲ ಅನ್ನ, ನೀರಿಲ್ಲದೇ ತೀವ್ರ ಪರದಾಡಬೇಕಾಯಿತು. ಫೆ. 23ರ ವರೆಗೆ ಕಾಲೇಜು ತರಗತಿ ನಡೆಸಲಾಗಿದ್ದು, ಯುದ್ಧ ನಡೆದರೆ ಕಷ್ಟವಾಗುತ್ತದೆ, ಹಾಗಾಗಿ ನಾವು ನಮ್ಮ ದೇಶಕ್ಕೆ ತೆರಳುತ್ತೇವೆ ಎಂದು ಒಂದು ವಾರ ಮೊದಲು ವಿದ್ಯಾರ್ಥಿಗಳೆಲ್ಲ ಸೇರಿ ಕಾಲೇಜು ಮುಖ್ಯಸ್ಥರಿಗೆ ತಿಳಿಸಿದೆವು. ನೀವು ಸ್ವದೇಶಕ್ಕೆ ತೆರಳಿದರೆ ನಿಮ್ಮನ್ನು ಕಾಲೇಜಿನಿಂದ ವಜಾ ಮಾಡುವುದಾಗಿ ಆಡಳಿತ ಮಂಡಳಿಯವರು ಬೆದರಿಸಿದರು. ಭವಿಷ್ಯದ ದೃಷ್ಟಿಯಿಂದ ನಾವೆಲ್ಲ ಅಲ್ಲಿಯೇ ಉಳಿಯಬೇಕಾಯಿತು. ರಷ್ಯಾ ಗಡಿ ಭಾಗದಲ್ಲಿಯೇ ಇರುವ ಖಾರ್ಕೀವ್ ನಗರದಲ್ಲಿ ನಾವು ತಂಗಿದ್ದ ಅಪಾರ್ಟ್‌ಮೆಂಟ್‌ಗಳೆಲ್ಲ ಬಾಂಬ್, ಶೆಲ್ ದಾಳಿಗೆ ಅಲುಗಾಡಿದವು. ಇದರಿಂದ ಭಯಭೀತರಾಗಿ ಹತ್ತಿರದ ಮೆಟ್ರೋ ಸ್ಟೇಶನ್ ಬಂಕರ್‌ಗಳಿಗೆ ತೆರಳಿ ಆಶ್ರಯ ಪಡೆದು ಸುಮಾರು 3-4 ದಿನಗಳ ಕಾಲ ಊಟ, ನೀರಿಲ್ಲದೆ ಪರದಾಡಿದೆವು.
Russia Ukraine Crisis 17 ವಿಮಾನಗಳ ಕಾರ್ಯಾಚರಣೆ, ಮತ್ತೆ 3772 ಮಂದಿ ಭಾರತಕ್ಕೆ
ಸ್ಪಂದಿಸಿದ ಭಾರತದ ಆಡಳಿತ
ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿರುವುದನ್ನು ಮನಗಂಡ ಭಾರತ ಸರ್ಕಾರ(Government of India) ಸಚಿವರನ್ನು ಉಕ್ರೇನ್‌ನ ಗಡಿಗೆ ಕಳುಹಿಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಗಡಿ ತಲುಪಿ ಅಲ್ಲಿಂದ ಭಾರತಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಿತು. ಉಕ್ರೇನ್ ಗಡಿಯ ನಾಲ್ಕು ದೇಶಗಳ ಗಡಿಯಲ್ಲಿ ರಾಯಭಾರ ಕಚೇರಿಯವರು ಕ್ಯಾಂಪಸ್ ಆರಂಭಿಸಿದರು. ನಾವು ಬುಲೆಟ್ ಟ್ರೇನ್ ಮೂಲಕ ಗಡಿ ತಲುಪಲು ನೆರವು ಕಲ್ಪಿಸಲಾಯಿತು. ಪೊಲೆಂಡ್ ಕ್ಯಾಂಪಸ್‌ನಲ್ಲಿ 1 ದಿನ ತಂಗಿದ್ದು ಗುರುವಾರ ರಾತ್ರಿ ಹೊರಟು ಶುಕ್ರವಾರ ಬೆಳಗ್ಗೆ 8 ಗಂಟೆಗೆ ದೆಹಲಿ ತಲುಪಿದ್ದು, ಕರ್ನಾಟಕ ಭವನದಲ್ಲಿ ವಾಸ್ತವ್ಯ ಮಾಡಿದ್ದು, ಸಂಜೆ 7 ಗಂಟೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದೇನೆ ಎಂದರು.
ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದ ತಮ್ಮನ್ನು ಸುರಕ್ಷಿತವಾಗಿ ತವರಿಗೆ ಕರೆ ತಂದ ಭಾರತ ರಾಯಭಾರಿಗೆ ಧನ್ಯವಾದ ಅರ್ಪಿಸಿರುವ ಸ್ನೇಹಾ ಹೊಸಮನಿ, ನನ್ನಂತೆಯೇ ಉಕ್ರೇನ್ ನಲ್ಲಿ ಸಿಲುಕಿ ಸಂಕಷ್ಟಎದುರಿಸುತ್ತಿರುವ ಇನ್ನಷ್ಟು ಜನ ನಮ್ಮ ಸಹಪಾಠಿಗಳು, ತಮ್ಮ ಆಯುಷ ಮುಗಿದು ಹೋಯಿತು ತಾಯ್ನಾಡಿಗೆ ಮರಳಲು ಸಾಧ್ಯವಿಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಅವರನ್ನು ಕೂಡ ಆದಷ್ಟುಬೇಗ ತವರಿಗೆ ಕರೆ ತರುವಂತೆ ಸ್ನೇಹಾ ಮನವಿ ಮಾಡಿದ್ದಾರೆ.
ಮುಂಡಗೋಡನಿಂದ ಸ್ನೇಹಾ ಪಾಲಕರು ಬೆಂಗಳೂರಿಗೆ ತೆರಳಿದ್ದು ಸ್ವಾಗತಿಸಿದ್ದು, ಶನಿವಾರ ವಾಪಸಾಗುವ ನಿರೀಕ್ಷೆ ಇದೆ.