ಮುಂಡರಗಿ: ದಲಿತರು ಚಹಾ ಕುಡಿದ ಕಪ್ ತೊಳೆದ ತಹಸೀಲ್ದಾರ್
ಚಹಾದ ಅಂಗಡಿಗೆ ದಲಿತರೊಂದಿಗೆ ತೆರಳಿ, ಅಲ್ಲಿ ತಾವೇ ಸ್ವತಃ ದಲಿತರು ಚಹಾ ಕುಡಿದ ಕಪ್ ಮತ್ತು ನೀರಿನ ಲೋಟ ತೊಳೆದು ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದ ತಹಸೀಲ್ದಾರ್ ಆಶಪ್ಪ ಪೂಜಾರಿ| ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದ ಘಟನೆ|
ಮುಂಡರಗಿ(ಮಾ.06): ದಲಿತರು ಕುಡಿದ ಚಹಾ ಕಪ್ ಅನ್ನು ಸ್ವತಃ ತಹಸೀಲ್ದಾರ್ ಅವರೇ ತೊಳೆದು ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಾರೋಗೇರಿಯಲ್ಲಿ ಮಾ.2ರಂದು ಅಸ್ಪೃಶ್ಯತೆ ನಿವಾರಣೆ ಕುರಿತು ಸಭೆ ನಡೆಸಿದ ತಹಸೀಲ್ದಾರ್ ಆಶಪ್ಪ ಪೂಜಾರಿ, ಆನಂತರ ಗ್ರಾಮದ ಚಹಾದ ಅಂಗಡಿಗೆ ದಲಿತರೊಂದಿಗೆ ತೆರಳಿ, ಅಲ್ಲಿ ತಾವೇ ಸ್ವತಃ ದಲಿತರು ಚಹಾ ಕುಡಿದ ಕಪ್ ಮತ್ತು ನೀರಿನ ಲೋಟ ತೊಳೆದು ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು
ಈ ಸಂದರ್ಭದಲ್ಲಿ ಗ್ರಾಮದ ದಲಿತ ಸಮುದಾಯದ ಮುಖಂಡರೊಬ್ಬರು ಮಾತನಾಡಿ, ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ. ಹೋಟೆಲ್‌ಗಳಲ್ಲಿ ನಾವು ಉಪಾಹಾರ ಸೇವಿಸಿದ ಪ್ಲೇಟ್, ನೀರಿನ ಲೋಟ, ಚಹಾ ಕುಡಿದ ಕಪ್‌ಗಳನ್ನು ನಾವೇ ತೊಳೆದಿಡಬೇಕು ಎಂದರು.
ಈ ಮಾತನ್ನು ಆಲಿಸಿದ ತಹಸೀಲ್ದಾರ್ ಇನ್ನುಮುಂದೆ ಹೀಗೆ ಅಸ್ಪೃಶ್ಯತೆ ಆಚರಣೆ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.