ಮುಂಬೈಯಿಂದ ಬಂದು 2 ಗಂಟೆಗಳ ಕಾಲ ಕ್ವಾರಂಟೈನ್‌ನಲ್ಲಿದ್ದ 55ರ ಹರೆಯದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮೂಡುಬಿದಿರೆ(ಮೇ 22): ಮುಂಬೈಯಿಂದ ಬಂದು 2 ಗಂಟೆಗಳ ಕಾಲ ಕ್ವಾರಂಟೈನ್‌ನಲ್ಲಿದ್ದ 55ರ ಹರೆಯದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆತ್ಮಹತ್ಯೆ ಮಾಡಿಕೊಂಡವರು ಕಡಂದಲೆ ನಿವಾಸಿಯಾಗಿದ್ದು, ಅಣ್ಣ ತಮ್ಮಂದಿರು 3 ಜನ ಮುಂಬೈಯ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಬಂದಿದ್ದ ಅವರು, ಬುಧವಾರ ತಡರಾತ್ರಿ 1 ಗಂಟೆಯಿಂದ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಆರ್ಥಿಕ ತೊಂದರೆ, ಕೋವಿಡ್‌ 19 ಬಗ್ಗೆ ಹೆದರಿದ್ದ ಅವರು ಮುಂದೆ ಜೀವನೋಪಾಯಕ್ಕಾಗಿ ಏನು ಕೆಲಸ ಮಾಡುವುದೆಂದು ಗೊಂದಲದಲ್ಲಿದ್ದು, ಈ ಬಗ್ಗೆ ಸಹೋದರರ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ.

ವಿಪರೀತ ಮದ್ಯ ಸೇವಿಸಿ ಮಲಗಿದ್ದ ವ್ಯಕ್ತಿ ಸಾವು

ನಂತರ ಯಾರ ಗಮನಕ್ಕೂ ಬಾರದಂತೆ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಮೂವರು ಮಕ್ಕಳಿದ್ದಾರೆ. ಈ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇನ್ನೂ ಹಲವರಿದ್ದು, ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಮದನ ಮೋಹನ್‌ ಸಿ. ಭೇಟಿ ನೀಡಿದ್ದಾರೆ. ಮೃತರು ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಪರಿಹಾರ ಘೋಷಣೆ:

ಆತ್ಮಹತ್ಯೆಗೆ ಶರಣಾದ ಕಡಂದಲೆ ವ್ಯಕ್ತಿಯ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 3 ಲಕ್ಷ ರು. ನೆರವಿನ ಘೋಷಣೆಯಾಗಿದೆ ಎಂದು ತಿಳಿದು ಬಂದಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]