ಉಡುಪಿ(ಮೇ 22): ಮದ್ಯದಂಗಡಿಗಳು ತೆರೆಯುವ ಮುನ್ನ ರಾಜ್ಯದಲ್ಲಿ ಮದ್ಯ ಸಿಗದೆ ಆತ್ಮಹತ್ಯೆ ಪ್ರಕರಣಗಳು ನಡೆದಿತ್ತು. ಇದೀಗ ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ಮೂಡುಬಿರ್ತಿ ನಿವಾಸಿ ದಿನೇಶ್‌ ವಿಪರೀತ ಮದ್ಯಪಾನ ಮಾಡಿ ಸಾವನ್ನಪ್ಪಿದ್ದಾರೆ.

ಅವರು ಬುಧವಾರ ಬೆಳಗ್ಗೆ 9 ಗಂಟೆಗೆ ವಿಪರೀತ ಮದ್ಯ ಸೇವನೆಯಿಂದ ವಾಂತಿ ಮಾಡಿ ಮನೆಯ ಹಾಲ್‌ನಲ್ಲಿ ಮಲಗಿದ್ದರು. ಸಂಜೆವರೆಗೂ ಏಳದೇ ಇದ್ದಾಗ ಮನೆಯವರು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮಲಗಿದಲ್ಲೇ ಮೃತಪಟ್ಟಿದ್ದರು.

ಲಾಕ್‌ಡೌನ್‌ ಎಫೆಕ್ಟ್‌: ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ, ಸಂಕಷ್ಟದಲ್ಲಿ ಅಲೆಮಾರಿ ಕುಟುಂಬ

ನಿತ್ಯ ಮದ್ಯಸೇವನೆ ಮಾಡುತ್ತಿದ್ದು, ವಿಪರೀತ ಮದ್ಯ ಸೇವಿಸಿದ ಮೇಲೆ ಊಟ ಮಾಡದೇ ಇದ್ದುದರಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.