ಮುಳಬಾಗಿಲು (ಸೆ.09): ತಾಲೂಕಿನ ದುಗ್ಗಸಂದ್ರ ಹೋಬಳಿಯ ಎಚ್‌.ಗೊಲ್ಲಹಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿಎಸ್‌ ಪಕ್ಷದ ಮುಖಂಡ ಎಚ್‌. ರಮೇಶ್‌ ಜೆಡಿಎಸ್‌ ಪಕ್ಷ ತೋರೆದು ಸಚಿವ ಎಚ್‌.ನಾಗೇಶ್‌ ಬಣಕ್ಕೆ ಸೆರ್ಪಡೆಗೊಂಡರು.

ಈ ಸಂದರ್ಭದಲ್ಲಿ ಸಚಿವ ಎಚ್‌.ನಾಗೇಶ್‌ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಗೊಳ್ಳುತ್ತಿರುವ ನಮ್ಮ ಕೆಲಸ ಕಾರ್ಯಗಳನ್ನು ಹಾಗೂ ಕಾರ್ಯವೈಖರಿಯನ್ನು ಕಂಡು ಅನ್ಯ ಪಕ್ಷಗಳಲ್ಲಿನ ಹಲವರು ಮುಖಂಡರು ನಮ್ಮೊಂದಿಗೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ. ಗ್ರಾಮಗಳ ಅಭಿವೃದ್ಧಿಗೆ ಮುಖಂಡರು ತೆಗೆದುಕೊಳ್ಳುತ್ತಿರುವ ಇಂತಹ ನಿರ್ಧರಗಳು ಗ್ರಾಮಗಳಲ್ಲಿ ರಾಜಕೀಯವನ್ನು ಹೊರತುಪಡಿಸಿ ಅಭಿವೃದ್ಧಿಗೆ ಪೂರಕವಾಗುವಂತಹ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ ಎಂದರು.

ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾದ ಪ್ರಭಾವಿ ಮುಖಂಡ ...

ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಎಚ್‌. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಯುವ ಮುಖಂಡ ಜಿ.ಎಸ್‌. ಜಗದೀಶ್‌, ಆವಣಿ ವಿಜಯ ಕುಮಾರ್‌ ಮತ್ತಿತರರು ಇದ್ದರು.

ರಾಜ್ಯದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೇನು ಶೀಘ್ರದಲ್ಲೇ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ವಿವಿಧ ಪಕ್ಷಗಳಲ್ಲಿ ಚುನಾವಣೆ ಸಿದ್ಧತೆಯೂ ನಡೆಯುತ್ತಿದೆ.