ನಿತ್ಯ ನೀರು ಹೊರುತ್ತಿರುವ ಶಾಲಾ ಮಕ್ಕಳು, ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಎಚ್ಚೆತ್ತ ಸ್ಥಳೀಯ ಆಡಳಿತ
ಮೂಡಿಗೆರೆ ತಾಲೂಕಿನ ಸುಂಕಶಾಲೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ಕುಡಿಯುವ ನೀರಿಗಾಗಿ ಪರದಾಟ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಬಂದು ವಿದ್ಯೆ ಕಲಿಬೇಕು ಅಂದ್ರೆ ಕುಡಿಯುವ ನೀರನ್ನು ಕೂಡ ಹೊರಲೇಬೇಕು. ಮಕ್ಕಳಷ್ಟೆ ಅಲ್ಲ. ಅವರ ಹೆತ್ತವರು ಹೊರಬೇಕು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.7): ಸಮುದ್ರದ ಜೊತೆ ನೆಂಟಸ್ಥಿಕೆ, ಉಪ್ಪಿಗೆ ಬರ ಎಂಬಂತಹಾ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಯಾಕಂದ್ರೆ ಮೂಡಿಗೆರೆ ತಾಲೂಕಿನ ಸುಂಕಶಾಲೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ಕುಡಿಯುವ ನೀರಿಗಾಗಿ ಪರದಾಟ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಬಂದು ವಿದ್ಯೆ ಕಲಿಬೇಕು ಅಂದ್ರೆ ಕುಡಿಯುವ ನೀರನ್ನು ಕೂಡ ಹೊರಲೇಬೇಕು. ಮಕ್ಕಳಷ್ಟೆ ಅಲ್ಲ. ಅವರ ಹೆತ್ತವರು ಹೊರಬೇಕು. ಆರಂಭದಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇತ್ತು. ಸರ್ಕಾರಿ ಶಾಲೆಯನ್ನ ಉಳಿಸಬೇಕೆಂಬ ಶಿಕ್ಷಕರ ಹೋರಾಟದ ಫಲವಾಗಿ ಇಂದು 25ಕ್ಕೂ ಹೆಚ್ಚು ಓದುತ್ತಿದ್ದಾರೆ. ಆದ್ರೆ, ಸರ್ಕಾರ ಮೂಲಭೂತ ಸೌಲಭ್ಯ ಅಲ್ಲ. ಕಡೇ ಪಕ್ಷ ಕುಡಿಯೋ ನೀರನ್ನೂ ಕೊಡ್ತಿಲ್ಲ. ಇದರಿಂದ ಮಕ್ಕಳೇ ದಿನಂ ಪ್ರತಿ ಬೆಳಗ್ಗೆ ಬೇಗ ಬಂದು ಶಾಲೆಗೆ ನೀರು ತಂದರೆ ಮಾತ್ರ ಬಿಸಿಯೂಟ ಸೇರಿದಂತೆ ಎಲ್ಲದಕ್ಕೂ ನೀರು. ಕಳೆದ ಒಂದು ತಿಂಗಳು ಹಿಂದೆ ಪೈಪ್ ಹೊಡೆದುಹೋಗಿರುವ ಪರಿಣಾಮ ನೀರಿನ ಸಮಸ್ಯೆ ಉದ್ಬವವಾಗಿದೆ.
ಸಮಸ್ಯೆಯನ್ನು ಬಗೆಹರಿಸಿದ ಗ್ರಾಮ ಪಂಚಾಯತಿ:
ವರ್ಷಕ್ಕೆ ಎರಡರಂತೆ ಸರ್ಕಾರಿ ಶಾಲೆಗೆ ಬೀಗ ಬೀಳ್ತಿದೆ. ಸರ್ಕಾರ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರ್ಸಿ ಅಂತ ಆಫರ್ ಮೇಲೆ ಆಫರ್ ಕೊಡ್ತಿದೆ. ಆದ್ರೆ, ಮೂಲಭೂತ ಸೌಲಭ್ಯ ನೀಡ್ತಿಲ್ಲ. ಶಾಲೆಗೆ ನೀರು ಪೂರೈಕೆ ಮಾಡುವ ಪೈಪ್‍ಲೈನ್ ಹಾಳಾಗಿ ಶಾಲೆಗೆ ನೀರು ಇಲ್ಲದಂತಾಗಿದೆ. ಸ್ಥಳಿಯರು ಹಲವು ಬಾರಿ ಮನವಿ ಸಲ್ಲಿಸದರೂ ಸರ್ಕಾರ ಸ್ಪಂದಿಸಿಲ್ಲ ಅಂತ ಸ್ಥಳಿಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗ್ಳೂರಿನ ಧೂಳು ಸಮಸ್ಯೆ ನಿವಾರಿಸಲು ಬರಲಿವೆ ಸ್ಟ್ರಿಂಕ್ಲರ್ ವಾಹನ..!
ಅಧಿಕಾರಿಗಳು, ಜನಪ್ರತಿನಿಧಿಗಳ ಸುಂಕಸಾಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಿಷ್ಠ ಕುಡಿಯುವ ನೀರೂ ಇಲ್ಲದೆ ಮಕ್ಕಳು, ಅವರ ಪೋಷಕರು ನಿತ್ಯ ಜಲಭಾರ ಹೊರುವಂತಾಗಿದೆ. ನಿರ್ಲಕ್ಷ್ಯದಿಂದಾಗಿ ಶಾಲೆಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಹಾಳಾಗಿರುವುದರಿಂದ ಸಮಸ್ಯೆ ತಲೆದೋರಿದ್ದು ಶಾಲಾ ಮಕ್ಕಳು, ಪೋಷಕರು, ಅಡುಗೆ ಸಿಬ್ಬಂದಿ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ನಲ್ಲಿಯಿಂದ ನೀರು ಹೊತ್ತು ತರುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಕೆಲವೇ ಗಂಟೆಗಳಲ್ಲೇ ನೀರಿನ ಪೈಪ್ ನ್ನು ದುರಸ್ಥಿಗೊಳಿಸಿದ್ದಾರೆ.
ಬಿಸಿಲು ನಾಡು ಯಲಬುರ್ಗಾಕ್ಕೆ ಬಂದ ಕೃಷ್ಣೆ; ಸಂಭ್ರಮಿಸಿದ ರೈತರು
ಒಟ್ಟಾರೆ, ಕಾಫಿನಾಡಲ್ಲಿ ಕಳೆದ 10 ವರ್ಷದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಅದಕ್ಕೆ ಕಾರಣ ಹತ್ತಾರಿವೆ. ದೇಶದ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದ ಮೇಲೆ ನಿಂತಿದೆ ಎಂದು ವೇದಿಕೆ ಮೇಲೆ ಭಾಷಣ ಮಾಡುವ ಅಧಿಕಾರಿಗಳು ಹಾಗೂ ಜನನಾಯಕರು ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಗಮನಹರಿಬೇಕಾಗಿದೆ.