ಕಾರವಾರ: ಕೆಸರಲ್ಲಿ ಓಟ, ಹಗ್ಗಜಗ್ಗಾಟ; ಗ್ರಾಮೀಣ ಕ್ರೀಡಾ ಸೊಗಡಿನಲ್ಲಿ ಮಿಂದೆದ್ದ ಯುವಜನತೆ

ಒಂದೆಡೆ ಸುತ್ತಲೂ ಹಸಿರಿನಿಂದ ಕಂಗೊಳಿಸೋ ಪ್ರದೇಶದಲ್ಲಿ ಹಸನುಗೊಳಿಸಿರೋ ಗದ್ದೆ. ಮತ್ತೊಂದೆಡೆ ಉತ್ಸಾಹದಿಂದ ಹಲವು ರೀತಿಯ ಕೆಸರಾಟಗಳಲ್ಲಿ ಭಾಗವಹಿಸೋ ಜನರು. ಇನ್ನೊಂದೆಡೆ ಕೆಸರಲ್ಲಿ ಓಡುವ, ಆಡುವ ಭರದಲ್ಲಿ ಬಿದ್ದೇಳುವ ಕ್ರೀಡಾಪಟುಗಳನ್ನು ನೋಡಿ ಉದ್ಗಾರ ಮಾಡುವ ಪ್ರೇಕ್ಷಕರು. 
 

muddy games event highlighted in Karwar gvd

ಕಾರವಾರ (ಆ.14): ಒಂದೆಡೆ ಸುತ್ತಲೂ ಹಸಿರಿನಿಂದ ಕಂಗೊಳಿಸೋ ಪ್ರದೇಶದಲ್ಲಿ ಹಸನುಗೊಳಿಸಿರೋ ಗದ್ದೆ. ಮತ್ತೊಂದೆಡೆ ಉತ್ಸಾಹದಿಂದ ಹಲವು ರೀತಿಯ ಕೆಸರಾಟಗಳಲ್ಲಿ ಭಾಗವಹಿಸೋ ಜನರು. ಇನ್ನೊಂದೆಡೆ ಕೆಸರಲ್ಲಿ ಓಡುವ, ಆಡುವ ಭರದಲ್ಲಿ ಬಿದ್ದೇಳುವ ಕ್ರೀಡಾಪಟುಗಳನ್ನು ನೋಡಿ ಉದ್ಗಾರ ಮಾಡುವ ಪ್ರೇಕ್ಷಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ಗಾ ಗ್ರಾಮದಲ್ಲಿ. ಖಾರ್ಗಾ ಗ್ರಾಮಸ್ಥರು ಮತ್ತು ಪತ್ರಿಕಾ ನಿರ್ವಹಣ ಸಮಿತಿ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 

ಈ ಕ್ರೀಡೆಗಾಗಿಯೇ ಖಾರ್ಗಾ ಗ್ರಾಮವನ್ನು ಮದುವಣ ಗಿತ್ತಿಯಂತೆ ಸಜ್ಜುಗೊಳಿಸಲಾಗಿತ್ತು. ತಳಿರು ತೋರಣಗಳ ಜತೆಗೆ ವಿಶಾಲವಾದ ಗದ್ದೆಯನ್ನು ಹದ ಮಾಡಿ ಕೆಸರು ಮಾಡಿ ಸಜ್ಜುಗೊಳಿಸಿದ್ದರು. ಅದರಂತೆ ಮಹಿಳೆಯರು, ಮಕ್ಕಳೆನ್ನದೇ ಎಲ್ಲರೂ ದಿನವಿಡಿ ಮೈ ರಾಡಿಯನ್ನು ಲೆಕ್ಕಿಸದೇ ಕೆಸರಿನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಹಳ್ಳಿಗಳಿಂದ ಜನರು ಪಟ್ಟಣದತ್ತ ಆಕರ್ಷಿತರಾಗಿ ನೆಲೆಸಲು ತೆರಳುವುದರಿಂದ ನಿಜವಾದ ಹಳ್ಳಿಯ ಸೊಬಗನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರಲ್ಲಿ ಹಳ್ಳಿಯ ಸೊಗಡನ್ನು ಬಿಂಬಿಸುವ ಹಾಗೂ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಬೆಳೆಸುವ ಉದ್ದೇಶದಿಂದ  ಇಂತಹದೊಂದು ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. 

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಸಚಿವ ಬೋಸರಾಜು ಸೂಚನೆ

ಕೆಸರು ಗದ್ದೆಯಲ್ಲಿ ಓಟ, ಹಗ್ಗ ಜಗ್ಗಾಟ, ಲಿಂಬೆ ಚಮಕ ಓಟ, ಕೆಸರಲ್ಲಿ ವಾಲಿಬಾಲ್ ಹೀಗೆ ಹಲವು ಗ್ರಾಮೀಣ ಆಟಗಳನ್ನು  ಮಕ್ಕಳು, ಯುವತಿಯರು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಡಿಸಲಾಯಿತು. ಇದೇ ಮೊದಲ ಬಾರಿಗೆ ಇಂತಹ ಕ್ರೀಡಾಕೂಟ ಖಾರ್ಗಾದಲ್ಲಿ ಜರುಗಿದ್ದರಿಂದ ಉತ್ಸಾಹದಿಂದ ಪಾಲ್ಗೊಂಡ ಜನರು ಹೊಸ ಅನುಭವ ಪಡೆದರು. ಅದರಲ್ಲೂ ಕೇವಲ ಮನೆಯಲ್ಲೇ ಇರುತ್ತಿದ ಇಲ್ಲಿನ ಮಹಿಳೆಯರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಂಜಾಯ್ ಮಾಡಿದ್ರು. ಇನ್ನು ಈ ವಿಭಿನ್ನ ಕ್ರೀಡಾಕೂಟ ಆಯೋಜನೆ ಮಾಡಿರುವುದರಿಂದ ಕ್ರೀಡಾಕೂಟ ನೋಡುವುದಕ್ಕಾಗಿಯೇ ಅಕ್ಕಪಕ್ಕದ ಹಳ್ಳಿಗಳಿಂದ ಸಾಕಷ್ಟು ಮಂದಿ ಆಗಮಿಸಿ ಕೆಸರುಗದ್ದೆ ಕ್ರೀಡಾಕೂಟವನ್ನು ಕಣ್ತುಂಬಿಕೊಂಡರು. 

Latest Videos
Follow Us:
Download App:
  • android
  • ios