ಬಿಜೆಪಿ ಗೆಲುವು ನಿಶ್ಚಿತ ಎಂದ ಎಂಟಿಬಿ : ಶರತ್ ಬಚ್ಚೇಗೌಡರ ವಿರುದ್ಧ ಕಿಡಿಕಿಡಿ

  • ಹಾನಗಲ್ ಹಾಗೂ ಸಿಂದಗಿಯಲ್ಲಿ ನಡೆಯುವ  ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ ಎಂದ ಎಂಟಿಬಿ
  • ಪ್ರಚಾರ ಗಿಟ್ಟಿಸಿಕೊಂಡು  ಜನರನ್ನು ದಿಕ್ಕು ತಪ್ಪಿಸುವ  ಕೆಲಸ ಮಾಡುತ್ತಿದ್ದಾರೆ ಎಂದು ಶರತ್ ಬಚ್ಚೇಗೌಡರ ವಿರುದ್ಧ ಕಿಡಿ
MTB Nagaraj Slams MLA sharath Bachegowda snr

ಹೊಸಕೋಟೆ (ಅ.24): ಹಾನಗಲ್ (Hanagal) ಹಾಗೂ ಸಿಂದಗಿಯಲ್ಲಿ (Sindagi) ನಡೆಯುವ  ಉಪ ಚುನಾವಣೆಯಲ್ಲಿ (By election) ಬಿಜೆಪಿ (BJP) ಅಭ್ಯರ್ಥಿ ಗೆಲುವು ಶತಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಹೇಳಿದರು. 

ತಾಲೂಕಿನ ಕೆಂಬಳಿಗಾನಹಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ 5 ಲಕ್ಷ ವೆಚ್ಚದ ಸಿಸಿ ರಸ್ತೆ (CC Road) ಕಾಮಗಾರಿಗೆ  ಚಾಲನೆ ನೀಡಿ ಮಾತನಾಡಿದರು. 

ವಿಪಕ್ಷ ನಾಯಕರು ಬಿಜೆಪಿ (BJP) ಅಭ್ಯರ್ಥಿಗಳನ್ನು ಸೋಲಿಸಲು  ಬೆಲೆ ಏರಿಕೆ ಸೇರಿದಂತೆ ಏನೆಲ್ಲಾ ಪ್ರಯೋಗ ಮಾಡಿದರೂ ಕೂಡ ಮತದಾರರು ಸಾಕಷ್ಟು ಪ್ರಬುದ್ಧರಾಗಿದ್ದಾರೆ. ದೇಶದಲ್ಲಿ ಮೋದಿ (Narendra modi), ರಾಜ್ಯದಲ್ಲಿ  ಬೊಮ್ಮಾಯಿ  (Basavaraj Bommai) ನೇತೃತ್ವದಲ್ಲಿ ಪಾರದರ್ಶಕ  ಹಾಗೂ ಅಭಿವೃದ್ಧಿಶೀಲ  ಅಡಳಿತ ನಡೆಸುತ್ತಿರುವ ವಿಶ್ವಾಸ ಇದೆ. ಕೊರೋನಾ ಸಂಕಷ್ಟದ ಸಮಯದಲ್ಲಿ  ಅಗತ್ಯ ಬೆಲೆ ಏರಿಕೆ, ಪೆಟ್ರೋಲ್, (Petrol) ಡೀಸೆಲ್ (Diesel) ಏರಿಕೆಯ ವಿಚಾರ ಹಾಗು ಕಾರಣ ಮತದಾರರಿಗೆ ತಿಳಿಸಿದ್ದು ವಿಪಕ್ಷಗಳ ತಂತ್ರ ಫಲ ಕೊಡುವುದಿಲ್ಲ ಎಂದರು. 

ಸಿಎಂ ಬೊಮ್ಮಾಯಿಗೆ ಉಡುಗೊರೆಯೊಂದನ್ನು ನೀಡಿದ ಎಂಟಿಬಿ

ಕಳೆದ ಉಪ ಚನಾವಣೆಯಲ್ಲಿ ನನ್ನನ್ನು ಕ್ಷೇತ್ರದ ಜನ ಅಯ್ಕೆ ಮಾಡಿದ್ದರೆ ಅಭವೃದ್ಧಿಯ ಹೊಸ ಶಕೆ ಆರಂಭವಾಗುತಿತ್ತು.  ಆದರೆ ನಾನು ಸೋತ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ.  ಗ್ರಾಮದಲ್ಲಿ 8 ವರ್ಷಗಳಿಂದ ಬೇಡಿಕೆ ಇದ್ದ ರಸ್ತೆ ಕಾಮಗಾರಿಗೆ ಚಾಲನೆ  ನೀಡಲಾಗಿದೆ.  ಇದರಿಂದ ಸಮರ್ಪಕ  ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಬಿಎಂಆರ್‌ಡಿಎ (BMRDA) ಅಧ್ಯಕ್ಷ ಸಿ. ನಾಗರಾಜ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಮು, ಕುರುಬರ ಸಂಘದ ಅಧ್ಯಕ್ಷ  ರಘುವೀರ್, ಮಾಜಿ ತಾಪಂ ಅಧ್ಯಕ್ಷ ಜಯದೇವಯ್ಯ ಇತರರು ಇದ್ದರು. 

ಶಾಸಕ ಶರತ್ ವಿರುದ್ಧ ಕಿಡಿ

ಹೊಸಕೋಟೆ (Hosakote) ತಾಲೂಕಿನ ಮೂಲಕ ಕೋಲಾರಕ್ಕೆ (Kolar) ಹೊಗಿರುವ ಕೆಸಿ ವ್ಯಾಲಿ (KC vally) ನೀರನ್ನು  ತಾವರೆಕೆರೆ ಗ್ರಾಮದ ಕೆರೆಯ ಮೂಲಕ 7  ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗಿತ್ತು. ಅದರ ಭಾಗವಾಗಿ 22 ಎಂಎಲ್‌ಡಿ (MLD) ನೀರು ಹರಿಸಲಾಗುತಿತ್ತು. ಅದರೆ 22 ಎಂಎಲ್‌ಡಿ ನೀರಿನಿಂದ ಒಂದು ಕೆರೆ  ತುಂಬಲು 2 ವರ್ಷ ಬೇಕಾಗುವ ಕಾರಣ  ಜಲ ಸಂಪನ್ಮೂಲ  ಸಚಿವರಾದ ಮಾಧುಸ್ವಾಮಿ (Madhuswamy) ಹಾಗೂ ಇಲಾಖೆ ಕಾರ್ಯದರ್ಶಿ  ಜೊತೆ ಚರ್ಚಿಸಿ  ಹೆಚ್ಚುವರಿ  ನೀರು ಹರಿಸುವಂತೆ ಲಿಖಿತವಾಗಿ ಮನವಿ ಸಲ್ಲಿಸಿದ್ದೆ.  ಆ ಮನವಿ ಪ್ರತಿ ಕೂಡ  ನನ್ನ ಬಳಿ ಇದೆ.  ಆದರೆ ಬೆಂಗಳೂರು (Bengaluru) ನಗರದಿಂದ ಹೆಚ್ಚುವರಿ ನೀರು ಪಂಪ್ ಆಗದ  ಕಾರಣ ನೀರು ಹೆಚ್ಚಾದಾಗ  ಪಂಪ್ ಮಾಡಿ ಹರಿಸುವ ಭರವಸೆ ನೀಡಿದ್ದರು. 

ಆದರೆ ನೀರನ್ನು ಬಿಡುವ ಮೊದಲೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ (Sharat Bachegowda)  ತಮ್ಮ ಮೂಲಕವೇ ನೀರು ಹರಿಸುತ್ತಿರುವುದಾಗಿ ಪ್ರಚಾರ ಗಿಟ್ಟಿಸಿಕೊಂಡು  ಜನರನ್ನು ದಿಕ್ಕು ತಪ್ಪಿಸುವ  ಕೆಲಸ ಮಾಡುತ್ತಿದ್ದಾರೆ.  ತಂದೆ ಮಗ ಇಬ್ಬರಿಗು ಸುಳ್ಳು  ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ವಾಡಿಕೆ ಎಂದರು. 

Latest Videos
Follow Us:
Download App:
  • android
  • ios