ವಿದ್ಯಾರ್ಥಿನಿಯೋರ್ವಳ ಐಪಿಎಸ್ ಕನಸಿಗೆ ನಿರಾಣಿ ನೇತೃತ್ವದ ಎಂಆರ್‌ಎನ್ ಫೌಂಡೇಶನ್ ಆಸರೆಯಾಗಿ ನಿಂತಿದೆ. ಆಕೆಯ ಕನಸಿಗೆ ನಿತ್ಯವೂ ನೀರೆರೆಯುತ್ತಿದೆ. 

ಬೆಂಗಳೂರು (ಮಾ.08): ಜೀವನದಲ್ಲಿ 'ಐಪಿಎಸ್' ಅಧಿಕಾರಿಯಾಗಬೇಕೆಂಬ ಛಲ ಆ ವಿದ್ಯಾರ್ಥಿನಿಗೆ ಇತ್ತು. ಆದರೆ, ಮನೆಯಲ್ಲಿ ಎದುರಾದ ಆರ್ಥಿಕ ಸಂಕಷ್ಟ ತಾಯಿಯೇ ದುಡಿಯಬೇಕಾದ ಅನಿವಾರ್ಯತೆ, ದುಡಿಯಲು ಕೆಲಸವಿಲ್ಲದ ಕಾರಣ, ಆಕೆಯ ಕನಸು ಕನಸಾಗಿಯೇ ಉಳಿಯುವ ಆತಂಕದಲ್ಲಿತ್ತು. ಇನ್ನೇನು ನನ್ನ ಕನಸು ಈಡೇರುವುದಿಲ್ಲ ಎಂದು ಚಿಂತೆಯಲ್ಲಿದ್ದ ಆ ವಿದ್ಯಾರ್ಥಿನಿ ಪಾಲಿಗೆ ' ಸಂಜೀವಿನಿ' ಯಂತೆ ಆಸರೆಯಾಗಿದ್ದು, " ಎಂಆರ್ ಎನ್ "ಫೌಂಡೇಶನ್.

ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಎಂಆರ್ ಎನ್ ಫೌಂಡೇಶನ್ ಇದೀಗ ವಿದ್ಯಾರ್ಥಿನಿಯೊಬ್ಬಳ ಕನಸಿಗೆ ನೀರೆರೆಯುತ್ತಿದೆ. ದೀಪಾ ಎಂಬ ಗೃಹಿಣಿಗೆ ಮೂವರು ಮಕ್ಕಳಲ್ಲಿ ಜಯಶ್ರೀ ಎಂಬ 9 ನೇ ತರಗತಿ ವಿದ್ಯಾರ್ಥಿನಿ ಕನಸಿಗೆ ನೆರವಾಗುತ್ತಿದೆ ಸಂಸ್ಥೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಯತ್ನಾಳ್ ಹೇಳಿದ್ದು ಸತ್ಯವಾಯ್ತು...!

ತನ್ನ ಮಕ್ಕಳನ್ನು ಎಲ್ಲರಂತೆ ಓದಿಸಬೇಕೆಂಬ ಛಲ ತಾಯಿಯಲ್ಲಿತ್ತು. ಆದರೆ, ಕೋವಿಡ್ -19 ಕಾರಣ,ಸರಿಯಾದ ಕೆಲಸ ಇಲ್ಲದಿದ್ದರಿಂದ ಶಿಕ್ಷಣ ಕೊಡಿಸಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಒಂದು ಕಡೆ ಕುಟುಂಬದ ನಿರ್ವಾಹಣೆ, ಮಕ್ಕಳ ಭವಿಷ್ಯ, ಕೈಯಲ್ಲಿ ಕೆಲಸವೂ ಇಲ್ಲದೆ,ಮಾನಸಿಕ ತೊಳಲಾಟಕ್ಕೆ ಸಿಕ್ಕಾಗ ಅವರ ' ನೆರವಿಗೆ' ಬಂದಿದ್ದೇ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರ ನೇತೃತ್ವದ ಎಂಆರ್ ಎನ್ ಫೌಂಡೇಶನ್. ನಿರಾಣಿ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಪೋಷಕರನ್ನು ಸಂಪರ್ಕಿಸಿದ ಅವರು, ಶಿಕ್ಷಣಕ್ಕೆ ಅಗತ್ಯವಾದ ನೆರವು ನೀಡಲಾಗುವುದು.ಯಾವುದೇ ಕಾರಣಕ್ಕೂ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಮಾಡಬೇಡಿ ಎಂದರು.

ಜಯಶ್ರೀ ತಾಯಿ ದೀಪಾ ಅವರು ತಮಗೆ ನೆರವಾದ ಎಂಆರ್ ಎನ್ ಫೌಂಡೇಶನ್ ನ ಸಾಮಾಜಿಕ ಕಳಕಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ದಾರಿ ತೋರಿದ ಎಂಆರ್ ಎನ್ ಫೌಂಡೇಶನ್. ಮುರುಗೇಶ್ ನಿರಾಣಿ ಹಾಗೂ ಅವರ ಕುಟುಂಬದವರ ನೆರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಇನ್ನು ಜಯಶ್ರೀ ಕೂಡ ಎಂಆರ್ ಎನ್ ಫೌಂಡೇಶನ್ ನೀಡಿರುವ ಸಹಾಯಕ್ಕೆ ಕೃತೃರ್ಥಾಳಾಗಿದ್ದಾಳೆ. ಎಂಆರ್ ಎನ್ ಫೌಂಡೇಶನ್ ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದು, ಇಚ್ಛೆಯಂತೆ ಐಪಿಎಸ್ ಓದಿ ಕನಸು ನನಸು ಮಾಡುವುದಾಗಿ ಹೇಳಿದ್ದಾಳೆ.