'ಪ್ರಧಾನಿ ಮೋದಿಯಿಂದ ಉತ್ತಮ ಆಡಳಿತ'

ಪಕ್ಷ ಸಂಘಟನೆಗೆ ಎಲ್ಲರೂ ಕಟಿ ಬದ್ಧರಾಗಬೇಕು| ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು| ಮಹಿಳಾ ಮೋರ್ಚಾದಿಂದ ಕೊರೋನಾ ವಾರಿಯ​ರ್ಸ್‌ಗಳಿಗೆ ಸನ್ಮಾನ| 

MP Y Devendrappa Talks Over PM Narendra Modi grg

ಹೊಸಪೇಟೆ(ಮಾ.08): ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದು, ದೇಶದ ಜನರ ಆರೋಗ್ಯ ಕಾಪಾಡಲು ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದ್ದಾರೆ. 

ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಮಹಿಳೆಯರಿಗೆ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು, ಕೊರೋನಾ ವಾರಿಯ​ರ್ಸ್‌ಗಳಿಗೆ ಸನ್ಮಾನಿಸಿ ಮಾತನಾಡಿ, ಜನೌಷಧಿ ಕೇಂದ್ರದಿಂದ ಕಡಿಮೆ ದರದಲ್ಲಿ ಔಷಧಿ ದೊರೆಯುತ್ತದೆ. ಹೀಗಾಗಿ ಎಲ್ಲರೂ ಕಡಿಮೆ ದರದಲ್ಲಿ ದೊರೆಯುವ ಔಷಧಿಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಬಳ್ಳಾರಿ ಮಹಿಳಾ ಮೋರ್ಚಾ ಉತ್ತಮ ಕೆಲಸ ಮಾಡುತ್ತಿದೆ. ಮೋರ್ಚಾದ ಕಾರ್ಯದಿಂದ ರಾಜ್ಯದಲ್ಲೇ ಪಕ್ಷಕ್ಕೆ ಉತ್ತಮ ಹೆಸರು ಬಂದಿದೆ. ಕೊರೋನಾ ವಾರಿಯ​ರ್ಸ್‌ಗಳನ್ನು ಸನ್ಮಾನಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಮಾತನಾಡಿ, ಪಕ್ಷ ಸಂಘಟನೆಗೆ ಎಲ್ಲರೂ ಕಟಿ ಬದ್ಧರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಸಮಾಜ ಸೇವಕ ಧರ್ಮೇಂದ್ರ ಸಿಂಗ್‌ ಮಾತನಾಡಿ, ಆರೋಗ್ಯದತ್ತ ಗಮನ ಹರಿಸಬೇಕು. ಹಸಿವು ಆದಾಗ ಊಟ ಮಾಡಬೇಕು. ಕೆಲಸ ಮಾಡದೇ ಜೀವನ ನಡೆಸುವುದು ಸರಿಯಲ್ಲ. ಎಷ್ಟೇ ಶ್ರೀಮಂತರಾದರೂ ಚಟುವಟಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ತಾಯಿಯ ಲೈಂಗಿಕ ಹಗರಣಕ್ಕೆ ಮಗನೇ ಸಾಥ್‌: ಉದ್ಯಮಿಗೆ ಬೆದರಿಸಿ 15 ಲಕ್ಷ ವಂಚನೆ

ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಮೋರ್ಚಾದಿಂದ ಕೊರೋನಾ ವಾರಿಯ​ರ್ಸ್‌ಗಳನ್ನು ಗುರುತಿಸಿ ಸನ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ನರ್ಸ್‌ಗಳನ್ನು ಕೂಡ ಸನ್ಮಾನಿಸಲಾಗುವುದು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಶೋಭಾ, ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಶಶಿಧರಸ್ವಾಮಿ, ರಮೇಶ್‌, ಮೋರ್ಚಾದ ತಾಲೂಕು ಅಧ್ಯಕ್ಷೆ ಭಾರತಿ ಬಸವನಗೌಡ ಪಾಟೀಲ್‌, ಲಲಿತಾ ನಾಯಕ್‌, ಡಾ. ಷಣ್ಮುಖ, ಡಾ. ಸಲೀಂ, ಡಾ. ರಾಘವೇಂದ್ರ ಕಟ್ಟಿ, ಡಾ. ಭಾಸ್ಕರ್‌, ಡಾ. ಮೆಹಬೂಬ್‌ಬೀ, ಮಂಡಲ ಪ್ರಧಾನ ಕಾರ್ಯದರ್ಶಿ ಶಂಕರ್‌ ಮೇಟಿ, ಜೀವರತ್ನಂ ಮತ್ತಿತರರಿದ್ದರು. ಆಂಗ್ಲ ಉಪನ್ಯಾಸಕಿ ಜ್ಯೋತಿ ಎಂ. ನಿರೂಪಿಸಿದರು. ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು. 500ಕ್ಕೂ ಅಧಿಕ ಮಹಿಳೆಯರು ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios