Asianet Suvarna News Asianet Suvarna News

ಸ್ವತಃ ತಾವೇ ವಿಮಾನದಲ್ಲಿ ರೆಮ್‌ಡೆಸಿವಿರ್‌ ತಂದು ಕೊಟ್ಟ ಸಂಸದ ಜಾದವ್

ಕಲಬುರಗಿ ಸಂಸದ ಡಾ.ಉಮೇಶ ಜಾಧವ್‌ ಸ್ವತಃ ತಾವೇ ಬೆಂಗಳೂರಲ್ಲಿರುವ ಔಷಧ ನಿಯಂತ್ರಕರ ಕಚೇರಿಯ ವಾರ್‌ ರೂಮ್‌ಗೆ ತೆರಳಿ ರೆಮ್‌ಡಿಸಿವರ್‌ ಪಡೆದುಕೊಂಡು ವಿಮಾನದ ಮೂಲಕ ವಾಪಸಾದರು.  

MP Umesh Jadhav himself brings Remdesivir vials to Kalaburagi from  Bengaluru snr
Author
Bengaluru, First Published Apr 29, 2021, 8:53 AM IST

ಕಲಬುರಗಿ (ಏ.29): ರೆಮ್‌ಡಿಸಿವರ್‌ ಇಂಜೆಕ್ಷನ್‌ ಅಭಾವ ನೀಗಿಸಲು ಕಲಬುರಗಿ ಸಂಸದ ಡಾ.ಉಮೇಶ ಜಾಧವ್‌ ಸ್ವತಃ ತಾವೇ ಬೆಂಗಳೂರಲ್ಲಿರುವ ಔಷಧ ನಿಯಂತ್ರಕರ ಕಚೇರಿಯ ವಾರ್‌ ರೂಮ್‌ಗೆ ತೆರಳಿ ರೆಮ್‌ಡಿಸಿವರ್‌ ಪಡೆದುಕೊಂಡು ವಿಮಾನದ ಮೂಲಕ ಕಲಬುರಗಿ ತಲುಪಿ, ಜಿಲ್ಲಾ ಔಷಧ ನಿಯಂತ್ರಕರಿಗೆ ಒಪ್ಪಿಸಿದ್ದಾರೆ.

"

 ಸಂಸದರ ಸಮಯಕ್ಕೆ ಸರಿಯಾದಂತಹ ನಡೆಯಿಂದಾಗಿ ರೆಮ್‌ಡಿಸಿವರ್‌ ತುರ್ತು ಅಗತ್ಯವಿದ್ದ ರೋಗಿಗಳಿಗೆ ಈ ಇಂಜೆಕ್ಷನ್‌ ತಕ್ಷಣಕ್ಕೆ ದೊರಕಿದಂತಾಗಿದೆ. 

ಆಕ್ಸಿಜನ್‌ ಬೇಕಾ?: ರಾಕ ಟ್ಟಸ್ಟ್‌ ಸಂಪರ್ಕಿಸಿ ...

ಕಲಬುರಗಿಯ ಆಸ್ಪತ್ರೆಗಳಿಗೆ ರೆಮ್‌ಡಿಸಿವರ್‌ ಇಂಜೆಕ್ಷನ್‌ ಕೊರತೆ ಕಾಡುತ್ತಿದೆ. ದಾಸ್ತಾನು ಇಲ್ಲವೆಂದು ಸಹಾಯಕ ಡ್ರಗ್‌ ಕಂಟ್ರೋಲರ್‌ ಸಂಸದರ ಗಮನಕ್ಕೆ ತಂದಿದ್ದರು.

ಹಾಗೇ ಮಂಗಳವಾರ ಬೆಂಗಳೂರಿಗೆ ಹೋದ ಸಂಸದರು ವಾರ್‌ ರೂಮ್‌ಗೆ ಹೋಗಿ ತುರ್ತು ಅಗತ್ಯಕ್ಕಾಗಿ 350 ಬಾಟಲ್‌ಗಳನ್ನು ಮಂಜೂರು ಮಾಡಿಸಿ ಕಲಬುರಗಿಗೆ ತಂದಿದ್ದಾರೆ.

Follow Us:
Download App:
  • android
  • ios