ರಕ್ತಸ್ರಾವದಿಂದ ಬಳಲುತ್ತಿದ್ದ ಬಾಣಂತಿ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂಸದ ಜಾಧವ

ಹೆರಿಗೆ ವೇಳೆ ಉಂಟಾದ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಣಂತಿ ಮತ್ತು ಹಸುಗೂಸನ್ನು ಆಸ್ಪತ್ರೆಗೆ ದಾಖಲಿಸಿದ    ಸಂಸದ ಡಾ.ಉಮೇಶ ಜಾಧವ| ಬಾಣಂತಿಯನ್ನು ಅಂಬ್ಯುಲೆನ್ಸ್‌ನಲ್ಲಿ ಹಾಕಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ| ಇದನ್ನ ಗಮನಿಸಿದ ಸಂಸದ ಡಾ.ಉಮೇಶ ಜಾಧವ ಕೂಡಲೇ ಬಾಣಂತಿ ಮತ್ತು ಮಗುವನ್ನು ನಗರದ ಸಂಗಮೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ|

MP Umesh Jadhav help to Women in Kalaburagi

ಕಲಬುರಗಿ(ಏ.26): ಹೆರಿಗೆ ವೇಳೆ ಉಂಟಾದ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಣಂತಿ ಮತ್ತು ಹಸುಗೂಸನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುವುದರ ಮೂಲಕ ಸಂಸದ ಡಾ.ಉಮೇಶ ಜಾಧವ ಮಾನವೀಯತೆ ಮೆರೆದಿದ್ದಾರೆ.

ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಅಕ್ಷತಾ ಗಂಡ ಸಂಗಣ್ಣ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದು, ಈ ವೇಳೆ ರಕ್ತಸ್ರಾವ ಹೆಚ್ಚಾಗಿ ನೋವಿನಿಂದ ಬಳಲುತ್ತಿದ್ದ ಅವರನ್ನು ಅಂಬ್ಯುಲೆನ್ಸ್‌ನಲ್ಲಿ ಕಲಬುರಗಿಗೆ ಕರೆತರಲಾಗಿತ್ತು. 

ನಾಲ್ಕು ತಿಂಗಳು ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಕಲಬುರಗಿ ಜನತೆ

ಬಾಣಂತಿಯನ್ನು ಅಂಬ್ಯುಲೆನ್ಸ್‌ನಲ್ಲಿ ಹಾಕಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವುದು ಸಂಸದ ಡಾ.ಉಮೇಶ ಜಾಧವ ಅವರ ಗಮನಕ್ಕೆ ಬಂದು ಅವರು ಕೂಡಲೇ ಬಾಣಂತಿ ಮತ್ತು ಮಗುವನ್ನು ನಗರದ ಸಂಗಮೇಶ್ವರ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. 

ಸದ್ಯ ತಾಯಿ ಮತ್ತು ಮಗು ಆರೋಗ್ಯದಿಂದಿದ್ದು, ಸಂಸದರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಾಳಜಿಗೆ ಬಾಣಂತಿಯ ಕುಟುಂಬ ವರ್ಗದವರು ಕೃತಜ್ಞತೆ ಸಲ್ಲಿಸಿದ್ದಾರೆ. ಸಂಸದ ಡಾ.ಜಾಧವ ಅವರು ಸಕಾಲಕ್ಕೆ ಬಾಣಂತಿ ಮತ್ತು ಮಗುವಿಗೆ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios