ಮಂಡ್ಯ (ಸೆ.11): ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ತನ್ನ ನೂತನ ಕಚೇರಿ ಉದ್ಘಾಟನೆ ಮಾಡಿದ್ದಾರೆ.  ತಮ್ಮ ಕ್ಷೇತ್ರದ ಜನರ ಅನುಕೂಲಕ್ಕಾಗಿ ಸ್ವ ಕ್ಷೇತ್ರದಲ್ಲಿ ಕಚೇರಿ ತೆರೆದಿದ್ದಾರೆ.

ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಸುಮಲತಾ, ಇದು ಅಂಬರೀಶ್ ಅವರು ಇದ್ದ ಕಚೇರಿ. ಇಲ್ಲಿ ಕುಳಿತುಕೊಳ್ಳುವುದೇ ನನ್ನ ಭಾಗ್ಯ ಎಂದರು. ಅಲ್ಲದೇ ಇನ್ನುಮುಂದೆ ಇಲ್ಲಿಯೇ  ಜನರ ಅಹವಾಲುಗಳನ್ನು ಆಲಿಸಲಾಗುವುದು ಎಂದು ಹೇಳಿದರು.

 ಸುಮಲತಾ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಖಾತೆಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು  ಈಗಾಗಲೇ ಪೊಲೀಸರು ಈಗಾಗಲೇ ಹಲವು ಅಕೌಂಟ್ ಗಳನ್ನ ತೆಗೆಸಿದ್ದಾರೆ. ಆದರೆ ಒಂದನ್ನು ಮಾತ್ರ ತೆಗೆಯಲಾಗುತ್ತಿಲ್ಲ. ಇದನ್ನು ಪ್ರಭಾವಿಗಳು ಮಾಡಿಸುತ್ತಿದ್ದಾರೆ. ರಾಜಕೀಯ ಡ್ಯಾಮೇಜ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದರು.

ಡಿ.ಕೆ. ಶಿವಕುಮಾರ್ ಅವರ ಪರ ಒಕ್ಕಲಿಗರು ಪ್ರತಿಭಟನೆ ಮಾಡುವ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಉತ್ತರ ಕರ್ನಾಟಕಕ್ಕೆ ಕೇಂದ್ರದ ನೆರವು ವಿಚಾರದ ಬಗ್ಗೆಯೂ ನನಗೆ  ತಿಳಿದಿಲ್ಲ. ಸರ್ಕಾರದ ಪ್ರೋಸೆಸ್ ತಡವಾಗುತ್ತದೆ. ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರಕ್ಕೆ ಸಂಬಂಧಿಸಿದ ವಿಚಾರ ಎಂದರು.

ಇನ್ನು ರಾಜ್ಯ ಉಸ್ತುವಾರಿ ಸಚಿವರ ನೇಮಕ ತಡವಾಗುತ್ತಿರುವ ಬಗ್ಗೆಯೂ ಮಾತನಾಡಿದ ಸುಮಲತಾ ಈ ಕಾರ್ಯ ಆದಷ್ಟು ಬೇಗ ನಡೆಯಲಿದೆ. ಸದ್ಯ ಸ್ವಲ್ಪ ತಡವಾಗಿದೆಯಷ್ಟೇ ಎಂದರು.