‘ಕೊರೋನಾಗಿಂತ ಕೇರಳ ಪ್ರವಾಸಿಗರ ಮೇಲೆ ಹೆಚ್ಚಿದೆ ಅನುಮಾನ’
ಕೇರಳದಿಂದ ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಪ್ರವಾಸಿಗರು ಆಗಮಿಸುತ್ತಿದ್ದು, ಕೊರೋನಾಗಿಂತ ಇವರ ಮೇಲೆ ಅನುಮಾನ ವ್ಯಕ್ತವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರು [ಫೆ.08] : ಕೊರೋನಾ ವೈರಸ್ ಗಿಂತ ಕೇರಳಿಗರ ಮೇಲೆಯೇ ಅನುಮಾನ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅಲ್ಲಿಂದ ಯಾಕೆ ಇಷ್ಟೋಂದು ಜನರು ಪ್ರವಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ. ಕೇವಲ ಪ್ರವಾಸಕ್ಕಾಗಿ ಇಲ್ಲಿಗೆ ಬರುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಮೇಲೆ ನಿಗಾ ವಹಿಸಬೇಕಾಗಿದೆ. ಅವರು ಬರುವ ಕಾರಣ ಏನು, ಅಲ್ಲಿಂದ ಇಲ್ಲಿಗೆ ಬರುತ್ತಿರುವವರು ಯಾರು ಎಂದು ಕೇಳಿದ್ದಾರೆ. ಪ್ರವಾಸೋದ್ಯಮ ಒಂದೇ ಅವರ ಉದ್ದೇಶವೇ ಎಂದು ಶೋಭಾ ಪ್ರಶ್ನೆ ಮಾಡಿದ್ದಾರೆ.
ಕೇಸು ಜಡಿದ ಕೇರಳಕ್ಕೆ ಕರಂದ್ಲಾಜೆ ಉತ್ತರ: ಅದೊಂದು ಮಿನಿ ಕಾಶ್ಮೀರ!...
ಇನ್ನು ಸಿಎಎ ವಿಚಾರವಾಗಿ ನಡೆದ ಗಲಭೆ ವೇಳೆಯೂ ಕೂಡ ಅನೇಕ ಜನರು ಕೇರಳದಿಂದ ಇಲ್ಲಿಗೆ ಆಗಮಿಸಿದ್ದರು. ಈ ನಿಟ್ಟಿನಲ್ಲಿ ಅಲ್ಲಿಂದ ಬರುವ ವಾಹನಗಳ ಮೇಲೆಯೂ ನಿಗಾ ಇಡಬೇಕಿದೆ. ಕೇರಳದಿಂದ ಬರುವ ಜನರ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಅವರ ನಡೆ ಮೇಲೆ ಆತಂಕ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಶೋಭಾ ಹೇಳಿದರು.