ಬಸಾ​ಪು​ರ​ದ​ಲ್ಲಿಯ 104 ಎಕರೆ ಭೂಮಿ ಹಂಚಿಕೆ ಕುರಿತು ಮಾತು​ಕ​ತೆ| ಸೂಕ್ತ ದರ ನಿಗದಿಗೊಳಿಸಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಲು ಕ್ರಮ| ಯಲಬುರ್ಗಾ ತಾಲೂಕಿನ ಹಿರೇಮನ್ನಾಪುರ ಬಳಿ ಬೊಂಬೆ, ಆಟಿಕೆ ಸಾಮಾನುಗಳ ತಯಾರಿಕೆಯ ಬೃಹತ್‌ ಉದ್ಯಮ ಸ್ಥಾಪನೆ ಕುರಿತು ಚರ್ಚೆ| ಕೈಗಾರಿಕಾ ಅಭಿವೃದ್ಧಿ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲೆಗೆ ಭೇಟಿ ನೀಡುವಂತೆ ಸಚಿವ ಶೆಟ್ಟರ್‌ಗೆ ಆಹ್ವಾನಿಸಿದ ಸಂಸದ ಸಂಗಣ್ಣ ಕರಡಿ|

ಕೊಪ್ಪಳ(ಮೇ.28): ಜಿಲ್ಲೆಯ ಬಸಾಪುರ ಬಳಿ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಸ್ಥಾಪನೆಗೆ ಮೀಸಲಿಟ್ಟಿರುವ 104 ಎಕರೆ ಪ್ರದೇಶದಲ್ಲಿ ಉದ್ಯಮಗಳಿಗೆ ನಿವೇಶನಗಳ ಹಂಚಿಕೆ, ದರ ನಿಗದಿ ಮತ್ತಿತರ ವಿಷಯಗಳ ಕುರಿತು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರೊಂದಿಗೆ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಚರ್ಚಿಸಿದ್ದಾರೆ. 

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸಚಿವರನ್ನು ಭೇಟಿಯಾದ ಸಂಸದ ಸಂಗಣ್ಣ ಕರಡಿ ಅವರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೊಪ್ಪಳ ಬಳಿಯ ಬಸಾಪುರದಲ್ಲಿ 104 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಭೂಮಿ ಮೀಸಲಿಡಲಾಗಿದೆ. ಅದನ್ನು ಸೂಕ್ತ ದರ ನಿಗದಿಗೊಳಿಸಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದು, ಯಲಬುರ್ಗಾ ತಾಲೂಕಿನ ಹಿರೇಮನ್ನಾಪುರ ಬಳಿ ಬೊಂಬೆ, ಆಟಿಕೆ ಸಾಮಾನುಗಳ ತಯಾರಿಕೆಯ ಬೃಹತ್‌ ಉದ್ಯಮ ಸ್ಥಾಪನೆ ಕುರಿತು ಚರ್ಚಿಸಿದ ಸಂಸದರು, ಕೈಗಾರಿಕಾ ಅಭಿವೃದ್ಧಿ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲೆಗೆ ಭೇಟಿ ನೀಡುವಂತೆ ಸಚಿವ ಶೆಟ್ಟರ್‌ ಅವ​ರ​ನ್ನು ಆಹ್ವಾನಿಸಿದರು.

ಗಂಗಾವತಿ: ಪೌರಾಯುಕ್ತರ ನಕಲಿ ಸಹಿ, ಗುತ್ತಿಗೆದಾರನ ವಿರುದ್ಧ ದೂರು

ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್‌, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ. ಶರಣಪ್ಪ ವಕೀಲರು, ಮುಖಂಡರಾದ ವೀರಣ್ಣ ಗಾಣಿಗೇರ ಮತ್ತಿತರರು ಇದ್ದರು.