ಮೈಸೂರಿನ ಮತ್ತೋರ್ವ ಅಧಿಕಾರಿ ವಿರುದ್ಧ ಪ್ರತಾಪ್ ಸಿಂಹ ಗರಂ : ದೂರು

  • ಮತ್ತೋರ್ವ ಅಧಿಕಾರಿ ವಿರುದ್ಧ  ಸಂಸದ ಪ್ರತಾಪ ಸಿಂಹ ಜಿಲ್ಲಾಧಿಕಾರಿಗೆ ದೂರು 
  • ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಿದ ಸಿಂಹ
MP Prathap simha Complaint Against hootagalli municipality commissioner snr

ಮೈಸೂರು (ಆ.30):  ಹೂಟಗಳ್ಳಿ ನಗರಸಭೆ ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪ ಸಿಂಹ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಬೃಹತ್‌ ಮೈಸೂರು ನಗರಪಾಲಿಕೆ ರಚನೆ ಹಿನ್ನೆಲೆಯಲ್ಲಿ ಹಾಗೂ ಮೈಸೂರು ನಗರದ ಸುತ್ತಮುತ್ತಲಿನ ಅಭಿವೃದ್ಧಿ ಹೊಂದಿರುವ ಗ್ರಾಪಂ ವ್ಯಾಪ್ತಿಯ ಪ್ರದೇಶವನ್ನು ಹೆಚ್ಚು ಅಭಿವೃದ್ಧಿಪಡಿಸವ ಉದ್ದೇಶದಿಂದ ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಸೇರಿ ನಾಲ್ಕು ಪಟ್ಟಣ ಪಂಚಾಯಿತಿ ಮತ್ತು ಹೂಟಗಳ್ಳಿ ನಗರಸಭೆ ರಚನೆಗೆ ಮಾಜಿ ಮುಖ್ಯಮಂತ್ರಿ ​ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಮೇಲ್ದರ್ಜೆಗೇರಿಸಿತ್ತು. 

ಪ್ರತಾಪ್‌ ಸಿಂಹಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್‌ ಬೆಂಬಲ

ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರಮುಖ ಪಾತ್ರವಹಿಸಿದ್ದರು.

ಆದರೆ ಆ. 27 ರಂದು ಹೂಟಗಳ್ಳಿ ನಗರಸಭೆ ಕಾರ್ಯಾಲಯ ಉದ್ಘಾಟಿಸಿದ್ದು, ನಗರಸಭೆಯ ಪೌರಾಯುಕ್ತರು ಜಿಲ್ಲೆಯಲ್ಲಿಯೇ ವಾಸ್ತವ್ಯ ಮಾಡಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲಿ ಮತ್ತು ಸಂಸದರ ಗಮನಕ್ಕೆ ಮಾಹಿತಿ ನೀಡಿಲ್ಲ. ಇದು ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. 

ಆದ್ದರಿಂದ ಹೂಟಗಳ್ಳಿ ನಗರಸಭೆ ಆಯುಕ್ತ ನರಸಿಂಹಮೂರ್ತಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪ್ರತಾಪ್‌ ಸಿಂಹ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios