ಸಿಎಂ ವಿಡಿಯೋ ಸಂವಾದದ ವೇಳೆ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಆಕ್ರೋಶ  ಮೈಸೂರು ಡೀಸಿ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಅಸಮಾಧಾನ ಜಿಲ್ಲೆಯಲ್ಲಿ ಹೆಚ್ಚಾಗೊರುವ ಕೊರೋನಾ ಪ್ರಕರಣಗಳು

ಮೈಸೂರು (ಮೇ.30): ಸಿಎಂ ವಿಡಿಯೋ ಸಂವಾದದ ವೇಳೆ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಆಕ್ರೋಶ ಹೊರ ಹಾಕಿದ ಪ್ರಸಂಗ ನಡೆಯಿತು. 

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಮೈಸೂರಿನಿಂದ ಕೊಡುತ್ತಿರುವ ಡೆತ್‌ ರೇಟ್‌ ಮಾಹಿತಿ ತಪ್ಪಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾಯುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಅಂಕಿ ಅಂಶಗಳನ್ನು ಮುಚ್ಚಿಡುತ್ತಿದೆ ಎಂದರು.

ಸಿಎಂ ಇದರ ಬಗ್ಗೆ ಗಮನ ಹರಿಸಬೇಕು ಎಂದರು. ಇನ್ನು ಶಾಸಕ ಸಾ.ರಾ.ಮಹೇಶ್‌, ಪ್ರತಿನಿತ್ಯ ಡೀಸಿ ಅಧಿಕಾರಿಗಳು ಸಭೆ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ಡೀಸಿ ರೋಹಿಣಿ ಸಿಂಧೂರಿ ಅವರಿಗೆ ಹಳ್ಳಿಗಳಿಗೆ ಹೋಗಲು ಹೇಳಿ ಎಂದರು.

ಮೈಸೂರಿನ 35 ಗ್ರಾಮಗಳನ್ನು ಮುಟ್ಟದ ಕೊರೋನಾ : ಮುನ್ನೆಚ್ಚರಿಕೆಯೇ ಕಾರಣ .

ಶನಿವಾರ ವಿವಿಧ ಜಿಲ್ಲೆಯ ಶಾಸಕರು, ಸಂಸದರು, ಹಾಗು ಉಸ್ತುವಾರಿ ಸಚಿವರೊಂದಿಗೆ 3 ಗಂಟೆಗೂ ಹೆಚ್ಚು ಕಾಲ ಸಿಎಂ ಬಿ ಎಸ್ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿ ಜಿಲ್ಲೆಗಳಲ್ಲಿ ಸೋಂಕು ತಗ್ಗಿಸಲು ಸೂಚನೆ ನೀಡಿದರು