ಮೈಸೂರು(ಡಿ.01): ಧರ್ಮ ಜಾತಿ ಹೊಡೆದು ಆಳುವ ವ್ಯಕ್ತಿ ಬೇಕೋ, ಸಂಪುಟ ದರ್ಜೆ ಸಚಿವನಾಗುವ ವ್ಯಕ್ತಿ ಬೇಕೋ ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಹುಣಸೂರಿನಲ್ಲಿ ಸಂಸದ ಪ್ರತಾಪ್‌ ಸಿಂಹ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಪರ ಪ್ರಚಾರ ನಡೆಸಿದ್ದಾರೆ. ನಗರದಲ್ಲಿ ಭರ್ಜರಿ ಪ್ರಚಾರಕ್ಕೆ ಸಿಂಹ ಸಾಥ್ ಕೊಟ್ಟಿದ್ದು, ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ ವಿಶ್ವನಾಥ್ ಪ್ರಚಾರ ನಡೆಸಿದ್ದಾರೆ.

ಬೆಳಗ್ಗೆಯಿಂದ ನಗರದಲ್ಲಿ ವಿಶ್ವನಾಥ್ ಮತಯಾಚನೆಯಲ್ಲಿ ತೊಡಗಿದ್ದು ಸಂಸದ ಪ್ರತಾಪ್‌ ಸಿಂಹಗೆ ಹುಣಸೂರು ಸಿಂಹ ಘೋಷಣೆ ಕೂಗಿದ್ದಾರೆ. ಹುಣಸೂರು ಸಿಂಹಗೆ ಜೈ ಅಂತ ಘೋಷಣೆ ಕೂಗಿದ ಜನ ಬಿಜೆಪಿಗೆ ಉತ್ತಮ ಬೆಂಬಲ ಕೊಟ್ಟಿದಾರೆ.

ಈ ಬೈಎಲೆಕ್ಷನ್ ನಂತ್ರ ಇನ್ನೊಂದು ಎಕೆಕ್ಷನ್: ರೇವಣ್ಣ ಭವಿಷ್ಯ..!

ವಿಶ್ವನಾಥ್ ಭಾರೀ ದೊಡ್ಡ ಮಟ್ಟದ ಅಂತರದಿಂದ ಗೆಲ್ತಾರೆ. ಚುನಾವಣೆ ಎದುರಿಸುತ್ತಿರುವುದು ಹುಣಸೂರು ಅಭಿವೃದ್ಧಿಗೆ. ಬೇರೆಯವರ ಹೇಳಿಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹುಣಸೂರು ಪ್ರಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಧರ್ಮ ಜಾತಿ ಒಡೆದು ಆಳುವ ವ್ಯಕ್ತಿ ಬೇಕೋ, ಸಂಪುಟ ದರ್ಜೆ ಸಚಿವನಾಗುವ ವ್ಯಕ್ತಿ ಬೇಕೋ ಎಂದು ಹುಣಸೂರು ಉಪಚುನಾವಣೆ ಶೋಷಿತ ಸಮುದಾಯಗಳ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮತದಾರರಿಗೆ ಪ್ರಶ್ನಿಸಿದ್ದಾರೆ. ಡಿಸೆಂಬರ್ 5 ರಂದು ಮತದಾನ ಮಾಡುವಾಗ ನಿಮಗೆ ವಿರೋಧ ಪಕ್ಷದಲ್ಲಿ ಕೂರುವ ವ್ಯಕ್ತಿ ಬೇಕಾ..? ಅಥವಾ ಸಂಪುಟ ದರ್ಜೆ ಸಚಿವನಾಗುವ ವ್ಯಕ್ತಿ ಬೇಕಾ ತೀರ್ಮಾನ ಮಾಡಿ ಎಂದಿದ್ದಾರೆ.

'ಸಿದ್ದು ಕಾಂಗ್ರೆಸ್‌ಗೆ ವೈಟ್‌ವಾಶ್ ಮಾಡಿ ಮನೆಗೆ ಹೋಗ್ತಾರೆ'..!

ದೇವರಾಜ ಅರಸು ಮಂತ್ರಿ ಆದ ನಂತರ ಈ ಕ್ಷೇತ್ರದಿಂದ ಮತ್ಯಾರೂ ಮಂತ್ರಿ ಆಗಿಲ್ಲ. ನೀವೆಲ್ಲ ಬಿಜೆಪಿಗೆ ಮತ ಹಾಕಿ ವಿಶ್ವನಾಥ್ ಮಂತ್ರಿ ಆಗ್ತಾರೆ. ವಿಶ್ವನಾಥ್ ಮಂತ್ರಿ ಆಗುವುದರಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಅನುವು ಆಗುತ್ತೆ. ಶ್ರೀನಿವಾಸ್ ಪ್ರಸಾದ್ ಮುನಿಸಿಕೊಂಡ್ರೆ ಕೆಲವರು ಮೈಸೂರು ಬಿಡಬೇಕಾಗಿ ಬಂತು. ಇದು ಎಲ್ಲರಿಗೂ ಗೊತ್ತಿದೆ ಎಂದು ಭಾಷಣದಲ್ಲಿ ಮೈಸೂರಿನಲ್ಲಿ ಸಿದ್ದರಾಮಯ್ಯ ಸೋಲನ್ನೂ ಪ್ರತಾಪ್ ಸಿಂಹ ಪ್ರಸ್ತಾಪಿಸಿದ್ದಾರೆ.