Asianet Suvarna News Asianet Suvarna News

ಶಾಸಕ ರಾಮದಾಸ್‌ಗೆ ಸಂಸದ ಪ್ರತಾಪ್‌ಸಿಂಹ ನೇರ ಟಾಂಗ್..!

ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್‌. ಎ. ರಾಮದಾಸ್ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಶಾಸಕ ರಾಮದಾಸ್ ತಮ್ಮಿಬ್ಬರ ನಡುವೆ ಮುನಿಸಿಲ್ಲ ಎಂದು ಹೇಳಿಕೆ ಕೊಟ್ಟರೂ ನಡೆಯುತ್ತಿರುವ ಘಟನೆಗಳು ಮಾತ್ರ ಅವರ ಹೇಳಿಕೆಗೆ ಪೂರಕವಾಗಿಲ್ಲ. ಸಂಸದ ಪ್ರತಾಪ್ ಸಿಂಹ ನೇರವಾಗಿ ರಮದಾಸ್‌ಗೆ ಟಾಂಕ್ ಕೊಟ್ಟಿರುವ ಘಟನೆ ನಡೆದಿದೆ.

MP Pratap simha taunts mla ramdas for opposing Suez Canal project
Author
Bangalore, First Published May 15, 2020, 12:10 PM IST

ಮೈಸೂರು(ಮೇ 15): ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್‌. ಎ. ರಾಮದಾಸ್ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಶಾಸಕ ರಾಮದಾಸ್ ತಮ್ಮಿಬ್ಬರ ನಡುವೆ ಮುನಿಸಿಲ್ಲ ಎಂದು ಹೇಳಿಕೆ ಕೊಟ್ಟರೂ ನಡೆಯುತ್ತಿರುವ ಘಟನೆಗಳು ಮಾತ್ರ ಅವರ ಹೇಳಿಕೆಗೆ ಪೂರಕವಾಗಿಲ್ಲ. ಸಂಸದ ಪ್ರತಾಪ್ ಸಿಂಹ ನೇರವಾಗಿ ರಮದಾಸ್‌ಗೆ ಟಾಂಕ್ ಕೊಟ್ಟಿರುವ ಘಟನೆ ನಡೆದಿದೆ.

ಸೂಯೇಜ್ ಫಾರಂ ಯೋಜನೆಗೆ ವಿರೋಧ ವ್ಯಕ್ತ ಪಡಿಸುವವರು ಮೋದಿಯ ಸ್ವಚ್ಛ ಭಾರತ್ ಯೋಜನೆಯ ವಿರೋಧಿಗಳು ಎಂದು ಶಾಸಕ ರಾಮದಾಸ್‌ಗೆ ಸಂಸದ ಪ್ರತಾಪ್‌ಸಿಂಹ ನೇರವಾಗಿ ಟಾಂಗ್ ನೀಡಿದ್ದಾರೆ.

 ರಾಜಕೀಯ ಚದುರಂಗದಾಟ: ತಾನೆ ಹೆಣೆದೆ ಬಲೆಯಲ್ಲಿ ಬಿಜೆಪಿ ವಿಲ ವಿಲ..!

ಸೂಯೇಜ್ ಫಾರಂ ವಿಚಾರದಲ್ಲಿ ಮತ್ತೆ ರಾಮದಾಸ್ ವಿರುದ್ದ ಗುಡುಗಿದ ಪ್ರತಾಪ್‌ಸಿಂಹ, ದೀಪ ಹಚ್ಚಿದರೆ ವೈರಸ್ ಹೋಗುತ್ತೆ, ಗಾಳಿಯಲ್ಲಿ ದುರ್ವಾಸನೆ ಹೋಗುತ್ತೆ ಎಂದು ನಂಬಿಕೊಂಡು ಕೂರುವ ರಾಜಕಾರಣಿ ನಾನಲ್ಲ ಎಂದು ರಾಮದಾಸ್ ಹೇಳಿಕೆಯನ್ನೇ ವ್ಯಂಗ್ಯವಾಡಿದ್ದಾರೆ.

ನಾನು ಸೂಯೇಜ್ ಫಾರಂ ವಿಚಾರದಲ್ಲಿ ಜನರಿಗೆ ಮಾತು ಕೊಟ್ಟಿದ್ದೆ. ರಾಮದಾಸ್ ಅವರು ಮಾಜಿಯಾಗಿದ್ದಾಗ ಅವರ ಪ್ರತಿಭಟನಾ ಸ್ಥಳಕ್ಕೆ ನಾನು ಭೇಟಿ ಕೊಟ್ಟಿದ್ದೆ. ಸೂಯೇಜ್ ಫಾರಂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೆ. ಅದಕ್ಕಾಗಿ ಸೋಮಣ್ಣರ ಜೊತೆ ಸ್ಥಳ ಪರಿಶೀಲನೆ ‌ಮಾಡಿದ್ದೆ. ಜನರ ಅಭಿಪ್ರಾಯ ಸಂಗ್ರಹಿಸಿದ್ದೆವು ಎಂದಿದ್ದಾರೆ.

ಜನರು ಉಸ್ತುವಾರಿ ಸಚಿವರ ಬಳಿಯೇ ತಮ್ಮ ಸಲಹೆ ಸೂಚನೆ ನೀಡಿದ್ದರು. ಜನಾಭಿಪ್ರಾಯ ಸಂಗ್ರಹಿಸೋದು ಅಂದ್ರೆ ಏನು? ಯಾವುದಾದರೂ ಹೊಸ ಯೋಜನೆಗೆ  ಜನಾಭಿಪ್ರಾಯ ಸಂಗ್ರಹಿಸೋದು ನಿಯಮ. ಆದ್ರೆ 35 ವರ್ಷದ ಸಮಸ್ಯೆಗೆ ಜನಾಭಿಪ್ರಾಯ ಸಂಗ್ರಹಿಸೋದು ಬೇಕಾ. ಈ ವಿಚಾರ ಶಾಸಕ ಮಂತ್ರಿಯಾಗಿದ್ದ ರಾಮದಾಸ್ ಅವರಿಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

ಒಬ್ಬ ಗ್ರಾಮಪಂಚಾಯಿತಿ ಸದಸ್ಯನಿಗೆ ಜನಾಭಿಪ್ರಾಯದ ಬಗ್ಗೆ ಗೊತ್ತಿದೆ ಅಂದ್ರೆ ರಾಮದಾಸ್ ಅವರಿಗೆ ಗೊತ್ತಿಲ್ಲವಾ? ಈ ಯೋಜನೆ ಸ್ವಚ್ಛಭಾರತ ಅಭಿಯಾನದ ಭಾಗ. ಈ ಯೋಜನೆಯನ್ನ ಮಾಡಿಯೇ ತಿರುತ್ತೇನೆ ಂದು ಮತ್ತೊಮ್ಮೆ ಕಸದ ವಿಚಾರದಲ್ಲಿ ಪ್ರತಾಪ್‌ಸಿಂಹ ರಾಮದಾಸ್‌ಗೆ ಟಾಂಗ್ ನೀಡಿದ್ದಾರೆ.

Follow Us:
Download App:
  • android
  • ios