ಪಿರಿಯಾಪಟ್ಟಣ (ಆ.13):  ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಿರ್ಣಯ ರಾಜ್ಯಕ್ಕೆ ಮಾದರಿಯಾಗಲಿ ಎಂದು ಸಂಸದ ಪ್ರತಾಪ್‌ ಸಿಂಹ ಅಭಿಪ್ರಾಯಪಟ್ಟರು.

ಉತ್ತರಪ್ರದೇಶ ರಾಜ್ಯದಲ್ಲಿ ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಿದವರೇ ಅದರ ನಷ್ಟಭರಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತೆಗೆದುಕೊಂಡಿರುವ ಕಠಿಣ ನಿರ್ಧಾರದಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಸಹ ನಿರ್ಣಯ ಕೈಗೊಳ್ಳಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಸರ್ಕಾರಿ ಆಸ್ತಿ ಪಾಸ್ತಿ ನಷ್ಟಮಾಡಿರುವ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು, ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದರೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯವಿದೆ, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡು ಅತಿಕ್ರಮಣ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಆಸ್ತಿ ಪಾಸ್ತಿ ನಷ್ಟಮಾಡಿರುವುದು ಎಷ್ಟುಸರಿ, ಎಂ.ಎಫ್‌. ಹುಸೇನ್‌ ಅವರು ಹಿಂದೂ ದೇವತೆಗಳ ನಗ್ನ ಚಿತ್ರ ಬರೆದಾಗ ಹಿಂದೂಗಳೆಲ್ಲರೂ ಇದೇ ರೀತಿ ರಸ್ತೆಗಿಳಿದು ಉದ್ರೇಕ ವಾಗಿ ವರ್ತಿಸಿ ಮುಸಲ್ಮಾನರ ಮೇಲೆ ಆಕ್ರಮಣ ಮಾಡಿ ಧ್ವಂಸ ಮಾಡಿದರೆ? ಪ್ರತಿ ಬಾರಿ ಹಿಂದೂಗಳ ಮೇಲೆಯೇ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ನಾಯಕರ ವ್ಯಂಗ್ಯ: ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ತಿವಿದ ಸಿದ್ದರಾಮಯ್ಯ....

ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಪಿರಿಯಾಪಟ್ಟಣದ ಮಾಗಳಿ ರವಿ, ಕುಶಾಲನಗರದ ಪ್ರವಿಣ… ಪೂಜಾರಿ, ಮೈಸೂರಿನ ರಾಜು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯಾಗಿದೆ ಮತ್ತು ಶಾಸಕ ತನ್ವೀರ್‌ ಸೇಠ್‌ ಅವರ ಮೇಲೆಯೂ ಹಲ್ಲೆಯಾಗಿದೆ, ಇದಕ್ಕೆ ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆಗಳೆ ಮುಖ್ಯ ಕಾರಣವಾಗಿದ್ದು, ಇವುಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳು ಕೇಂದ್ರ ಗೃಹ ಖಾತೆಗೆ ಮನವಿ ಮಾಡಬೇಕು, ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕೆಲಸ ಮಾದರಿಯನ್ನಾಗಿಸಿ ರಾಜ್ಯದಲ್ಲಿಯೂ ಕಾನೂನು ಜಾರಿಗೆ ತಂದರೆ ಇಂತಹ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯ ಎಂದರು.

ಮಳೆ, ಪ್ರವಾಹದಲ್ಲಿಯೂ ರಾಜಕೀಯ ಕೆಸರೆರಚಾಟ..

ರಾಜಕಾರಣದಲ್ಲಿ ನಿರ್ದಾಕ್ಷಿಣ್ಯ ಕ್ರಮ ಮತ್ತು ಕಠಿಣ ಕ್ರಮ ಎಂಬ ಪದಗಳ ಮೇಲೆ ನನಗೆ ವಿಶ್ವಾಸವೇ ಹೊರಟು ಹೋಗಿದೆ, ಹೇಳಿಕೆ ನೀಡುವ ಬದಲು ಕೆಲಸ ಮಾಡಿ ತೋರಿಸಿದಾಗ ಮಾತು ಒಪ್ಪಬಹುದು, ಘಟನೆ ಬಗ್ಗೆ ಸಿದ್ದರಾಮಯ್ಯನವರು ಟ್ವೀಟ್‌ ಮಾಡಿ ಹಿಂದೂ, ಮುಸಲ್ಮಾನರು ಸೌಹಾರ್ದತೆಯಿಂದ ಇರಬೇಕು ಎನ್ನುತ್ತಾರೆ, ಆದರೆ ಮುಸಲ್ಮಾನರ ಪುಂಡತನದ ಬಗ್ಗೆ ಮಾತನಾಡುವುದಿಲ್ಲ, ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರು ಪಕ್ಷಗಳ ನಾಯಕರು ಪುಕ್ಕಲುತನ ಬಿಡಬೇಕು ಎಂದರು.