ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಅರ್ಥದಲ್ಲಿ ಹೇಳಲು ಹೋಗಿ ಅಪಾರ್ಥ ಸೃಷ್ಟಿ| ಕೃಷಿ ನಂಬಿದ ರೈತ ಸ್ವಾಭಿಮಾನಿ, ಯಾರ ಬಳಿಯೂ ಕೈಯೊಡ್ಡಿ ಬದುಕಲ್ಲ. ಇನ್ನೊಬ್ಬರಿಗೆ ಅನ್ನ ಕೊಟ್ಟು ತಾನು ಸಹ ಬದುಕಿದಂತಹ ಸ್ವಾಭಿಮಾನಿ| ರೈತರು ಯಾವತ್ತೂ ಹೇಡಿಗಳು ಆಗುವುದಿಲ್ಲ: ಈರಣ್ಣ ಕಟಾಡಿ|
ಬೆಳಗಾವಿ(ಡಿ.03): ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಹೌದು, ರೈತರು ಸ್ವಾಭಿಮಾನಿಗಳು, ಎಂದಿಗೂ ರೈತರು ಹೇಡಿಗಳಾಗಿಲ್ಲ. ಮಾತಿನ ಭರದಲ್ಲಿ ಸಚಿವರು ಹೇಳಿರಬಹುದು. ಕೃಷಿ ಸಚಿವರಿಗೆ ತಮ್ಮ ಹೇಳಿಕೆ ವಾಪಸ್ ಪಡೆಯಲು ಮನವಿ ಮಾಡುತ್ತೇವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಅರ್ಥದಲ್ಲಿ ಹೇಳಲು ಹೋಗಿ ಅಪಾರ್ಥ ಸೃಷ್ಟಿಯಾಗಿದೆ. ಕೃಷಿ ನಂಬಿದ ರೈತ ಸ್ವಾಭಿಮಾನಿ, ಯಾರ ಬಳಿಯೂ ಕೈಯೊಡ್ಡಿ ಬದುಕಲ್ಲ. ಇನ್ನೊಬ್ಬರಿಗೆ ಅನ್ನ ಕೊಟ್ಟು ತಾನು ಸಹ ಬದುಕಿದಂತಹ ಸ್ವಾಭಿಮಾನಿಯಾಗಿದ್ದಾನೆ. ರೈತರು ಯಾವತ್ತೂ ಹೇಡಿಗಳು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
'ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು' ಪಾಟೀಲರ ಬಿಸಿ ಹೇಳಿಕೆ!
ಕೃಷಿ ಸಚಿವರು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಳಕಳಿ ಇಟ್ಟುಕೊಂಡು ಹೇಳಲು ಹೋಗಿದ್ದಾರೆ. ಈ ವೇಳೆ ಯಡವಟ್ಟಿನ ಮಾತನ್ನಾಡಿದ್ದಾರೆ ಎನಿಸುತ್ತದೆ ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 4, 2020, 10:59 AM IST