ಹೊಸಕೋಟೆ (ಸೆ.21): ಕಳೆದ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಲು ಸಂಸದ ಬಚ್ಚೇಗೌಡರೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಆರೋಪಿಸಿದರು.

ಎಂಟಿಬಿಗೆ ಸಚಿವ ಸ್ಥಾನ ಕೊಟ್ಟರೆ ಕೊಡಲಿ ಎಂದು ಸಂಸದ ಬಚ್ಚೇಗೌಡರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಹೊಸಕೋಟೆ ಉಪ ಚುನಾವಣೆಗೆ  ಬಚ್ಚೇಗೌಡರು ಅವರ ಮಗ ಶರತ್ನನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಿಸಿ ಪರೋಕ್ಷವಾಗಿ ಕೆಲಸ ಮಾಡಿ ಗೆಲ್ಲಿಸಿ ನಾನು ಸೋಲುವಂತೆ ಮಾಡಿದ್ದಾರೆ.

ನನಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಅವರ ಅಭ್ಯಂತರ ಇಲ್ಲ ಎಂದು ಹೇಳುವ ಅವರು ಇಷ್ಟುಒಳ್ಳೆ ಬುದ್ದಿಯನ್ನು ಉಪ ಚುನಾವಣೆ ವೇಳೆ ತೋರಿಸಿದ್ದರೆ ನಾನು ಸೋಲುತ್ತಿರಲಿಲ್ಲ, ಈಗಲೂ ಮಗ ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಗೊತ್ತಿಲ್ಲ. ಅವನಿಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಶರತ್ ಕಾಂಗ್ರೆಸ್ ಸೇರಲು ಬಚ್ಚೇಗೌಡರೇ ಕಾರಣ ಎಂದು ಹರಿಹಾಯ್ದಿದ್ದಾರೆ.

ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ: ಬಿಜೆಪಿಯ ಒಳಜಗಳ ವಿಧಾನಸೌಧದಲ್ಲಿ ಬಹಿರಂಗ ...

ಇನದನು ಆದಷ್ಟು ಬೇಗ ನನಗೆ ಸಚಿವ ಸ್ಥಾನ ನೀಡುವುದು ಸೂಕ್ತ. ಈ ಮೂಲಕ ಕೊಟ್ಟ ಭರವಸೆ ಉಳಿಸಿಕೊಳ್ಳಲಿ. ನಿರಾಸೆ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.