ಉತ್ತರಕನ್ನಡ(ನ.30): ಸಿದ್ದರಾಮಯ್ಯ ನೇತೃತ್ವದಲ್ಲಿ ಭಕಾಸುರ‌ ಸರಕಾರ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್‌ ನವರಿಗೆ ಬೇಕಿದ್ದರೆ ಅನರ್ಹ ಶಾಸಕರನ್ನ ಇಟ್ಟುಕೊಳ್ಳಬಹುದಿತ್ತು. ಕಾಂಗ್ರೆಸ್ ನ ದುರಂಕಾರದ ಪರಿಣಾಮ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಒಳ್ಳೆಯವರನ್ನು ಇಟ್ಟುಕೊಳ್ಳಲಾಗದ್ದರಿಂದ ಅವರು ಬಿಜೆಪಿಗೆ ಬಂದಿದ್ದಾರೆ ಎಂದು ನಡೆಸಿದ ಸಂಸದ ಅನಂತಕುಮಾರ ಹೆಗಡೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  

ಶನಿವಾರ ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರದಲ್ಲಿ ಮಾತನಾಡಿದ ಅವರು, ಸರಕಾರ ನಡೆಸಲು ಆಗುವುದಿಲ್ಲವೆಂಬ ದೌರ್ಬಲ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿಲ್ಲ, ಪ್ರಾಮಾಣಿಕತೆ ಅನ್ನೋದು ಕಾಂಗ್ರೆಸ್‌ನ ಡಿಕ್ಷನರಿಯಲ್ಲೇ ಇಲ್ಲ, ಜನರ ದಿಕ್ಕು ತಪ್ಪಿಸಿ ಮೂರ್ಖರನ್ನಾಗಿಸುವುದು ಕಾಂಗ್ರೆಸ್ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯನವರನ್ನ ಬೆಳೆಸಿದ್ದು ಮಾಜಿ ಪ್ರಧಾನಿ ಹೆಚ್. ಡಿ. ದೇವೆಗೌಡ ಆದರೆ, ದೇವೆಗೌಡರಿಗೆ ಚೂರಿ ಹಾಕಿ ಬಂದು ಇವತ್ತು ಆಚಾರ ಹೇಳುತ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.